ETV Bharat / state

ಬೆಂಗಳೂರಿನ ಬಿಟಿಎಂ ಲೇಔಟ್​​ನಲ್ಲಿ ಬಿಲ್ಡರ್ ಆತ್ಮಹತ್ಯೆ - ಮೈಕೋ ಲೇಔಟ್ ಠಾಣೆ

ಬಿಟಿಎಂ ಲೇಔಟ್​​ನಲ್ಲಿ ಬಿಲ್ಡರ್ ವಿವೇಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮತ್ತೊಬ್ಬ ಬಿಲ್ಡರ್ ರಹೀಮ್​ ಹಾಗೂ ಆತನ ಮಗನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Builder suicide in BTM layout
ಬಿಲ್ಡರ್ ವಿವೇಕ್
author img

By

Published : Dec 11, 2020, 9:43 AM IST

ಬೆಂಗಳೂರು: ನಗರದ ಬಿಟಿಎಂ ಲೇಔಟ್​​ನಲ್ಲಿ ಬಿಲ್ಡರ್​ವೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿವೇಕ್​ ಎಂಬುವರು ಆತ್ಮಹತ್ಯೆಗೆ ಶರಣಾಗಿರುವ ಬಿಲ್ಡರ್.

ವಿವೇಕ್​ಗೆ ಮತ್ತೊಬ್ಬ ಬಿಲ್ಡರ್​ ರಹೀಮ್​ ಹಾಗೂ ಆತನ ಮಗನ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿಟಿಎಂ ಲೇಔಟ್​​ನಲ್ಲಿ ಬಿಲ್ಡರ್ ವಿವೇಕ್ ಆತ್ಮಹತ್ಯೆ
ಜಾಯಿಂಟ್ ವೆಂಚರ್ಸ್ ಮೂಲಕ ಮೃತ ವಿವೇಕ್ ಹಾಗೂ ರಹೀಮ್ ಅಪಾರ್ಟ್ಮೆಂಟ್ ನಿರ್ಮಾಣ ಮಾಡುತ್ತಿದ್ದರು. 90ರಷ್ಟು ಪೂರ್ಣಗೊಂಡಿರುವ ಕಟ್ಟಡ ನಿರ್ಮಾಣ ಕಾರ್ಯಕ್ಕೆ ರಹೀಮ್ ಇತ್ತೀಚೆಗೆ ಅಡ್ಡಿಪಡಿಸಿದ್ದ. ಹೀಗಾಗಿ ರಹೀಮ್, ಸುಮಾರು 1.5 ಕೋಟಿ ಗುಡ್​ವಿಲ್​ ಅನ್ನು ವಿವೇಕ್​​ಗೆ ಕೊಡುವ ಬಗ್ಗೆ ಒಪ್ಪಂದವಾಗಿತ್ತು. ಗುರುವಾರ ಬೆಳಗ್ಗೆ ರಹೀಮ್ ಕಡೆಯವರು ಕಟ್ಟಡದ ಬಳಿ ಬಂದು ಪೈಪ್​ಗಳನ್ನು ಒಡೆದು ದಾಂಧಲೆ ನಡೆಸಿದ್ದರು. ಇದರಿಂದ ಮನನೊಂದ ವಿವೇಕ್, ಬಿಟಿಎಂ 7 ಫೇಸ್​ನಲ್ಲಿರುವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಓದಿ: ಕಲಬುರಗಿ ಮಂದಿಯನ್ನು ಬೆಚ್ಚಿಬೀಳಿಸಿದ್ದ ಉದ್ಯಮಿಯ ಬರ್ಬರ ಹತ್ಯೆ ಆರೋಪಿಗಳ ಬಂಧನ

ಮೃತ ವಿವೇಕ್ ಸಹೋದರ ಶ್ರೀರಾಮ್ ಎಂಬುವರು ಡಿಸಿಎಂ ಅಶ್ವತ್ಥ್​ ನಾರಾಯಣ ಅವರ ಆಪ್ತನಾಗಿ ಕೆಲಸ ಮಾಡುತ್ತಿದ್ದು, ಸದ್ಯ ಈ ಬಗ್ಗೆ ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.