ETV Bharat / state

ಸಂಪುಟ ವಿಸ್ತರಣೆ ಗೊಂದಲಗಳ ನಡುವೆ ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಚರ್ಚೆ - ಸಂಪುಟ ವಿಸ್ತರಣೆ ಗೊಂದಲ ನಡುವೆ ಬಜೆಟ್ ಚರ್ಚೆ

ಶೀಘ್ರದಲ್ಲೇ ರಾಜ್ಯ ಬಜೆಟ್‌ ಮಂಡನೆಯಾಗಲಿದ್ದು ಈ ಹಿನ್ನೆಲೆ ಇಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಲ್ಲಿನ ಬೆಂಗಳೂರಿನ ಶಕ್ತಿಭವನದಲ್ಲಿ ಬಜೆಟ್‌ ಪೂರ್ವಭಾವಿ ಸಭೆ ನಡೆಸಿದರು. ಚರ್ಚೆಯಲ್ಲಿ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ಕೃಷಿ, ಸಾರಿಗೆ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಇದೇ ಸಂದರ್ಭ ಇಲಾಖೆಗೆ ಸಂಬಂಧಿಸಿದ ಸಚಿವರು ಉಪಸ್ಥಿತರಿದ್ದರು.

Budget preliminary meeting start led by CM BS Yeddyurappa
ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಚರ್ಚೆ ಆರಂಭ
author img

By

Published : Feb 3, 2020, 5:16 PM IST

ಬೆಂಗಳೂರು: ಸಂಪುಟ ವಿಸ್ತರಣೆ ಗೊಂದಲಗಳ ನಡುವೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಂದು ವಿವಿಧ ಇಲಾಖೆಗಳ ಜೊತೆ 2020-21ನೇ ಸಾಲಿನ ಆಯವ್ಯಯದ ಬಗ್ಗೆ ಪೂರ್ವಭಾವಿ ಚರ್ಚೆ ನಡೆಸಿದರು.

ಬೆಂಗಳೂರಿನ ಶಕ್ತಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾದ ಆಯವ್ಯಯ ಪೂರ್ವಭಾವಿ ಚರ್ಚೆಯಲ್ಲಿ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ, ಕೃಷಿ, ಸಾರಿಗೆ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಇದೇ ಸಂದರ್ಭ ಇಲಾಖೆಗೆ ಸಂಬಂಧಿಸಿದ ಸಚಿವರು ಉಪಸ್ಥಿತರಿದ್ದರು. ಆಯಾ ಇಲಾಖಾವಾರು ಬೇಡಿಕೆಗಳ ಪಟ್ಟಿ ಹಾಗೂ ಮಾಹಿತಿಯನ್ನು ಸಿಎಂ ಸ್ವೀಕರಿಸಿದರು.

Budget preliminary meeting start led by CM BS Yeddyurappa
ಬೆಂಗಳೂರಿನ ಶಕ್ತಿ ಭವನ

ಸಭೆಯ ನಂತರ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಸಾರಿಗೆ ಮತ್ತು ಕೃಷಿ ಇಲಾಖೆ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಲಾಗಿದೆ. ಸಾರಿಗೆ ಇಲಾಖೆಗೆ ಹೊಸ ಬಸ್​ಗಳನ್ನು ಖರೀದಿಸಲು ಬಜೆಟ್​ಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನಾಲ್ಕು ವಿಭಾಗಗಳಿಗೆ ಹೆಚ್ಚಿನ‌ ಬಸ್​​ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಹೊಸ ಬಸ್​​ ಖರೀದಿಗೆ ತೀರ್ಮಾನಿಸಲಾಗಿದೆ. ಕೇಂದ್ರ ಬಜೆಟ್​​ನಲ್ಲಿ 16 ಅಂಶಗಳ ಪ್ರಸ್ತಾವನೆ ಸಿದ್ದಪಡಿಸಿದ್ದು ಅದರಂತೆ ನಾವೂ ಚೆರ್ಚೆ ಮಾಡುತ್ತೇವೆ. ಕೇಂದ್ರ ಸರ್ಕಾರಕ್ಕೆ ಪೂರಕವಾದ ಯೋಜನೆಗಳನ್ನು ನಾವೂ ರೂಪಿಸುತ್ತೇವೆ. 14 ಜಿಲ್ಲೆಗಳಲ್ಲಿ ಬರ ಇದೆ. ಹಿಂದೆ ಅನೇಕ ಸರ್ಕಾರಗಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನರೇಗಾ, ಕುಡಿಯುವ ನೀರು, ಮೂಲಸೌಕರ್ಯ ಯೋಜನೆ ಮಾಡುತ್ತಿದ್ದೇವೆ ಎಂದರು. ಇದೇ ವೇಳೆ ಗುರುವಾರದ ಒಳಗಾಗಿ ವಿಧಾನ ಪರಿಷತ್​ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತೇನೆ ಎಂದು ವಿವರಿಸಿದರು.

ಸರ್ಕಾರಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸೋದು ಮುಖ್ಯ:

ಬಜೆಟ್ ಪೂರ್ವಭಾವಿ ಸಭೆ ಬಳಿಕ ಡಿಸಿಎಂ ಅಶ್ವಥ್ ನಾರಾಯಣ ಮಾತನಾಡಿ, ಉನ್ನತ ಶಿಕ್ಷಣದಲ್ಲಿ ಸರ್ಕಾರಿ ಕಾಲೇಜುಗಳ ಗುಣಮಟ್ಟ ಹೆಚ್ಚಿಸೋದು ಮುಖ್ಯ. ನೂತನ ವಿವಿಗಳು ಪ್ರಾರಂಭವಾದ್ರು ಅಭಿವೃದ್ಧಿ ಯಾಗಿಲ್ಲ. ಡಿಪ್ಲೋಮಾ, ಇಂಜಿನಿಯರ್​​ ಕಾಲೇಜುಗಳು ಅಭಿವೃದ್ಧಿ ಆಗಬೇಕಿದೆ. 4.5 ಸಾವಿರ ಕೋಟಿ ಅನುದಾನ ಕೇಳುತ್ತಿದ್ದೇವೆ. ಐಟಿ-ಬಿಟಿಗೆ 360 ಕೋಟಿ ರೂ. ಕೊಡಿ ಎಂದು ಮನವಿ ಮಾಡಿದ್ದೇವೆ. ಈಗ 120 ಕೋಟಿ ಇದೆ. ಸಿಎಂ ಅವರು ಒಪ್ಪಿಕೊಂಡಿದ್ದಾರೆ. ವೈದ್ಯಕೀಯ ಶಿಕ್ಷಣದಲ್ಲೂ 1500 ಕೋಟಿ ರೂ. ಕೇಳಿದ್ದೇವೆ. ಈಗ 750 ಕೋಟಿ ರೂ. ನೀಡಲಾಗುತ್ತಿತ್ತು. ಉತ್ತಮ ವ್ಯವಸ್ಥೆ ನಿರ್ಮಾಣ ಮಾಡೋದಕ್ಕೆ ಹೆಚ್ಚಿನ ಅನುದಾನ ಬೇಕಿದೆ. 22 ಜೆಲ್ಲೆಗಳಲ್ಲಿ ಸರ್ಕಾರಿ ಕಾಲೇಜುಗಳಿವೆ. ಈಗ ನಮ್ಮ ಅವಧಿಯಲ್ಲ ನಾಲ್ಕು ಕೊಟ್ಟಿದ್ದೇವೆ, ರಾಮನಗರದಲ್ಲಿ ವೈದ್ಯಕೀಯ ಕಾಲೇಜು ಮಾಡಲಾಗುತ್ತಿದೆ ಎಂದು ವಿವರಿಸಿದರು.

Budget preliminary meeting start led by CM BS Yeddyurappa
ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಚರ್ಚೆ ಆರಂಭ

ಬಿಸಿಯೂಟ ನೌಕರರ ಪ್ರತಿಭಟನೆ ವಿಚಾರ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ಸಾಕಷ್ಟು ಬಾರಿ ಸಮಾಲೋಚನೆ ಮಾಡಿದ್ದಾರೆ. ಸಾಕಷ್ಟು ಬಾರಿ ಪ್ರತಿಭಟನೆಗಳು ನಡೆದಿವೆ, ಯಶಸ್ವಿಯಾಗಿಲ್ಲ. ಬಗೆಹರಿಸೋ ಪ್ರಯತ್ನ ಮಾಡುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.