ETV Bharat / state

ಇದು ಮಧ್ಯಂತರ ಆದೇಶವಷ್ಟೇ, ಸ್ಪೀಕರ್​ ಅಧಿಕಾರ ಸುಪ್ರೀಂ ನಿರ್ಧರಿಸಲಿದೆ: ಬಿಎಸ್​ವೈ - ಮಧ್ಯಂತರ ಆದೇಶ

ಮಧ್ಯಂತರ ಆದೇಶ ಕುರಿತು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ ಯಡಿಯೂರಪ್ಪ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಬಿಎಸ್​ವೈ
author img

By

Published : Jul 17, 2019, 11:40 AM IST

Updated : Jul 17, 2019, 12:03 PM IST

ಬೆಂಗಳೂರು: ಸುಪ್ರೀಂಕೋರ್ಟ್ ಆದೇಶ ಅತೃಪ್ತರಿಗೆ ಬಲ ತಂದಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸರ್ವೋಚ್ಚ ನ್ಯಾಯಾಲಯ ತೀರ್ಪು ಕೊಟ್ಟಿದೆ. ಇದು ಪ್ರಜಾಪ್ರಭುತ್ವದ ಗೆಲುವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಣ್ಣಿಸಿದ್ದಾರೆ.

ರಮಡಾ​ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರ ರಾಜೀನಾಮೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದರಿಂದಾಗಿ ಅತೃಪ್ತ ಶಾಸಕರಿಗೆ ಬಲ ಬಂದಂತಾಗಿದೆ ಎಂದರು.

ಬಿ​.ಎಸ್.​ ಯಡಿಯೂರಪ್ಪ ಪ್ರತಿಕ್ರಿಯೆ

ಇದು ಕೇವಲ ಮಧ್ಯಂತರ ತೀರ್ಪಷ್ಟೆ. ಯಾವುದೇ ಕಾರಣಕ್ಕೂ 15ಜನ ಶಾಸಕರಿಗೆ ವಿಪ್ ಜಾರಿ ಅನ್ವಯವಾಗುವುದಿಲ್ಲ. ಸುಪ್ರೀಂ ಕೋರ್ಟ್ ಗಂಭೀರ ಚಿಂತನೆ ನಡೆಸಿ ಸದನಕ್ಕೆ ಬರಲು ಒತ್ತಾಯ ಮಾಡುವ ಹಾಗಿಲ್ಲ ಎಂದು ಮಧ್ಯಂತರ ತೀರ್ಪು ನೀಡಿದೆ. ಸ್ಪೀಕರ್​ ಇದರನ್ವಯ ತೀರ್ಮಾನ ತೆಗೆದುಕೊಂಡು ತಮ್ಮ ನಿರ್ಧಾರ ತಿಳಿಸಬೇಕೆಂದು ಹೇಳಿದೆ. ಇದರನ್ವಯ ಸ್ಪೀಕರ್ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Intro:Body:

ಇದು ಮಧ್ಯಂತರ ಆದೇಶವಷ್ಟೇ, ಸ್ಪೀಕರ್​ ಪರಮಾಧಿಕಾರ ಮುಂದೆ ನಿರ್ಧಾರವಾಗಲಿದೆ: ಬಿಎಸ್​ವೈ

ಬೆಂಗಳೂರು:  ಅತೃಪ್ತ ಶಾಸಕರ ರಾಜೀನಾಮೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್​ ನೀಡಿರುವ ಮಧ್ಯಂತರ ಆದೇಶ ಕುರಿತು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​.ಎಸ್​ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ. 

ಸುಪ್ರೀಂ ಕೋರ್ಟ್​ ತೀರ್ಪನ್ನು ನಾನು  ಗೌರವಿಸುತ್ತೇನೆ. ಇದು ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ, ಬಂಡಾಯ ಶಾಸಕರಿಗೂ ಸಿಕ್ಕ ನೈತಿಕ ಜಯ.

ಇದು ಮಧ್ಯಂತರ ತೀರ್ಪು ಅಷ್ಟೆ. ಸ್ಪೀಕರ್​ ಅಧಿಕಾರವನ್ನು ಭವಿಷ್ಯದಲ್ಲಿ ಸುಪ್ರೀಂ ನಿರ್ಧರಿಸಲಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.  

Conclusion:
Last Updated : Jul 17, 2019, 12:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.