ETV Bharat / state

ವಿಧಾನಸಭೆ ಚುನಾವಣೆಗೆ ಬಿಎಸ್​ಪಿ ಸಿದ್ಧತೆ : 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ - ತಿಪಟೂರಿನಿಂದ ಅಶ್ವಥ್ ನಾರಾಯಣ

ಬಹುಜನ ಸಮಾಜವಾದಿ ಪಕ್ಷ 53 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಬಹುಜನ ಸಮಾಜವಾದಿ ಪಕ್ಷ
ಬಹುಜನ ಸಮಾಜವಾದಿ ಪಕ್ಷ
author img

By

Published : Mar 28, 2023, 11:03 PM IST

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜವಾದಿ ಪಕ್ಷ ಸಿದ್ಧತೆ ನಡೆಸಿದ್ದು, ಪಕ್ಷದ 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪ್ರೆಸ್​ ಕ್ಲಬ್​ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಎಸ್​ಪಿ ರಾಜ್ಯ ಘಟಕದ ಅಧ್ಯಕ್ಷ ಎಂ ಕೃಷ್ಣಮೂರ್ತಿ ಅವರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್​ಪಿ ಪಕ್ಷ ಪ್ರಮುಖ ಪಾತ್ರ ವಹಿಸಲಿದ್ದು, ಹಲವಾರು ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನವದೆಹಲಿಯಲ್ಲಿ ಬಿಎಸ್​ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಉಸ್ತುವಾರಿ ಮಾಜಿ ಸಂಸದ ಡಾ ಅಶೋಕ್ ಸಿದ್ದಾರ್ಥ, ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ, ನಿತಿನ್ ಸಿಂಗ್, ದಿನೇಶ್ ಗೌತಮ್, ಎಂ. ಗೋಪಿನಾಥ್ ಮತ್ತು ತಾವು ಪಾಲ್ಗೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ನಾನು ಮಳವಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ಉಳಿದಂತೆ ಗುರುಮಿಟ್ಕಲ್‌ನಿಂದ ಕೆ ಬಿ ವಾಸು, ಮಧುಗಿರಿಯಿಂದ ಎನ್.ಮಧು, ತಿಪಟೂರಿನಿಂದ ಅಶ್ವಥ್ ನಾರಾಯಣ, ಚಾಮರಾಜನಗರದಿಂದ ಹ. ರಾ ಮಹೇಶ್, ಬೇಲೂರಿನಿಂದ ಗಂಗಾಧರ್ ಬಹುಜನ್, ಆನೇಕಲ್‌ನಿಂದ ಚಿನ್ನಪ್ಪ ಚಿಕ್ಕಹಾಗಡೆ, ಯಲಹಂಕದಿಂದ ಸಂದೀಪ್ ಮಾರಸಂದ್ರ ಮುನಿಯಪ್ಪ ಸ್ಪರ್ಧೆ ಮಾಡುತ್ತಿರುವ ಪ್ರಮುಖರು ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಅನಧಿಕೃತವಾಗಿ ಗೈರಾದವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗದಿದ್ದಾಗ ವೇತನ ಪಾವತಿಸಬೇಕು: ಹೈಕೋರ್ಟ್

ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್​.. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಪ್ರಕಟವಾಗಿತ್ತು. ಒಟ್ಟು 124 ಅಭ್ಯರ್ಥಿಗಳನ್ನ ಒಳಗೊಂಡ ಮೊದಲ ಪಟ್ಟಿಯನ್ನ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿದ್ದರು. ರಾಜ್ಯ ಕಾಂಗ್ರೆಸ್ ನಾಯಕರು ತಿಂಗಳ ಹಿಂದೆಯೇ ಸಿದ್ಧಪಡಿಸಿ ಕಳುಹಿಸಿದ್ದ ಪಟ್ಟಿಯನ್ನು ಪರಿಶೀಲನೆ ನಡೆಸಿ ಅಂತಿಮಗೊಳಿಸಿದ್ದರು. 124 ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರುಣ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಉಳಿದಂತೆ ಡಿ ಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ, ಕೊರಟಗೆರೆಯಿಂದ ಡಾ ಜಿ ಪರಮೇಶ್ವರ್ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ.

ಇದನ್ನೂ ಓದಿ : ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಗಡಿಪಾರು ಆದೇಶ ಹೊರಡಿಸಬೇಕು: ಹೈಕೋರ್ಟ್

ಪಟ್ಟಿಯಲ್ಲಿ ಗಮನಿಸಿದರೆ.. ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಗಣೇಶ್ ಹುಕ್ಕೇರಿ, ಕಾಗವಾಡಕ್ಕೆ ಭರಮ ಗೌಡ ಆಲಗೌಡ ಕಾಗೆ, ಕುಡಚಿ ಎಸ್‌ಸಿ ಕ್ಷೇತ್ರಕ್ಕೆ ಮಹೇಂದ್ರ ತಮ್ಮಣ್ಣನವರ್, ಹುಕ್ಕೇರಿಗೆ ಎಬಿ ಪಾಟೀಲ್, ಯಮಕನಮರಡಿ ಎಸ್​ಟಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ, ಬೆಳಗಾವಿ ಗ್ರಾಮಾಂತರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಖಾನಾಪುರಕ್ಕೆ ಅಂಜಲಿ ನಿಂಬಾಳ್ಕರ್, ಬೈಲಹೊಂಗಲಕ್ಕೆ ಮಹಾಂತೇಶ ಶಿವಾನಂದ ಕೌಜಲಗಿ, ರಾಮದುರ್ಗದಿಂದ ಅಶೋಕ್ ಎಂ ಪಟ್ಟಣ್, ಜಮಖಂಡಿಗೆ ಆನಂದ ಸಿದ್ದು ನ್ಯಾಮಗೌಡ, ಹುನಗುಂದದಿಂದ ವಿಜಯಾನಂದ ಎಸ್ ಕಾಶಪ್ಪನವರ್, ಮುದ್ದೇಬಿಹಾಳದಿಂದ ಅಪ್ಪಾಜಿ ಅಲಿಯಾಸ್ ಸಿ.ಎಸ್. ನಾಡಗೌಡ, ಬಸವನಬಾಗೇವಾಡಿಯಿಂದ ಶಿವಾನಂದ ಪಾಟೀಲ್ ಇದ್ದಾರೆ.

ಇದನ್ನೂ ಓದಿ : ಕೆ ಆರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್​, ಜೆಡಿಎಸ್​ ಟಿಕೆಟ್ ಹಂಚಿಕೆಯೇ ಕಗ್ಗಂಟ್ಟು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.