ETV Bharat / state

ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಉಭಯ ನಾಯಕರ ಮಹತ್ವದ ಚರ್ಚೆ?

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ. ಪರಮೇಶ್ವರ್ ಮತ್ತು ಸಚಿವ ಡಿ.ಕೆ. ಶಿವಕುಮಾರ್ ಜೊತೆ ತಾಜ್ ವೆಸ್ಟ್ ಎಂಡ್​ನಲ್ಲಿ ಸೋಮವಾರದ ನಡೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಬಹುಮತ ಸಾಬೀತಿಗೆ ಇನ್ನು ಎರಡುದಿನ ಬಾಕಿ ಇರುವ ಕಾರಣ ಮುಂಬಯಿನಲ್ಲಿರುವ ಅತೃಪ್ತ ಶಾಸಕರನ್ನು ಕರೆತರುವ ಕೊನೆ ಹಂತದ ಪ್ಲಾನ್ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ದೋಸ್ತಿ ಸರ್ಕಾರ ಉಳಿಸಿಕೊಳ್ಳಲು ಉಭಯ ನಾಯಕರ ಮಹತ್ವದ ಚರ್ಚೆ?
author img

By

Published : Jul 20, 2019, 8:35 PM IST

ಬೆಂಗಳೂರು: ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಉಭಯ ಪಕ್ಷಗಳ ನಾಯಕರು ಸುಮಾರು ಎರಡು ಗಂಟೆಗಳ ಕಾಲ ಖಾಸಗಿ ಹೋಟೆಲ್​ನಲ್ಲಿ ಇಂದು ಸಂಜೆ ಸಭೆ ನಡೆಸಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ. ಪರಮೇಶ್ವರ್ ಮತ್ತು ಸಚಿವ ಡಿ.ಕೆ. ಶಿವಕುಮಾರ್ ಜೊತೆ ತಾಜ್ ವೆಸ್ಟ್ ಎಂಡ್​ನಲ್ಲಿ ಸೋಮವಾರದ ನಡೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ. ಬಹುಮತ ಸಾಬೀತಿಗೆ ಇನ್ನು ಎರಡುದಿನ ಬಾಕಿ ಇರುವ ಕಾರಣ ಮುಂಬಯಿಯಲ್ಲಿರುವ ಅತೃಪ್ತ ಶಾಸಕರನ್ನು ಕರೆತರುವ ಕೊನೆ ಹಂತದ ಪ್ಲಾನ್ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಸಿಎಂ ಕುಮಾರಸ್ವಾಮಿ ಅವರು ಬಂದರೆ ಬರುವುದಾಗಿ ಕೆಲ ಶಾಸಕರು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಯಾವ ನಾಯಕರನ್ನು ಕಳುಹಿಸಿ ಅತೃಪ್ತರ ಮನವೊಲಿಸಬೇಕೆಂಬುದರ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಲು ಯತ್ನ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರ ದೂರವಾಣಿ ಕರೆಗೆ ಅತೃಪ್ತರು ಸಿಗಲಿಲ್ಲ ಎನ್ನಲಾಗಿದೆ. ಇದೀಗ ಯಾವ ರೀತಿ ಅವರನ್ನು ಸಂಪರ್ಕಿಸಿ ಕರೆತರಬೇಕೆಂಬುದರ ಬಗ್ಗೆ ಉಭಯ ನಾಯಕರು ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಮುಂಬಯಿಗೆ ತೆರಳಿ ಶಾಸಕರಾದ ಎಸ್.ಟಿ. ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಗೋಪಾಲಯ್ಯ ಅವರನ್ನು ಕರೆತರುವ ಬಗ್ಗೆ ಮಾತುಕತೆ ಮಾಡಿದ್ದಾರೆ, ಇದರ ಜೊತೆಗೆ ಸೋಮವಾರ ಸುಪ್ರೀಂಕೋರ್ಟ್​ನಲ್ಲಿ ಬರಲಿರುವ ವಿಚಾರಣೆ ಕುರಿತು ಸಿಎಂ ಹಾಗೂ ಇತರ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಹೋಟೆಲ್​ನಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಮೇಲೆ ನಿಗಾ ವಹಿಸಬೇಕು. ವಿಶ್ವಾಸಮತಯಾಚನೆ ಮುಗಿಯುವವರೆಗೂ ಒಟ್ಟಾಗಿ ಇರಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನೊಂದೆಡೆ ವಿಶ್ವಾಸಮತ ಸಾಬೀತಿಗೆ ಇನ್ನೆರಡು ದಿನ ಬಾಕಿ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿ ಅವರು ರಾಮಲಿಂಗಾರೆಡ್ಡಿ ಅವರನ್ನು ದೇವೇಗೌಡರ ನಿವಾಸಕ್ಕೆ ಕರೆದೊಯ್ದು ಚರ್ಚಿಸಿರುವುದು ಭಾರಿ ಕುತೂಹಲ ಕೆರಳಿಸಿದೆ. ರಾಮಲಿಂಗಾರೆಡ್ಡಿ ಅವರ ಮೂಲಕ ಮುಂಬಯಿಯಲ್ಲಿರುವ ಅತೃಪ್ತ ಶಾಸಕರ ಮನವೊಲಿಕೆಗೆ ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.

Intro:ಬೆಂಗಳೂರು : ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಉಭಯ ಪಕ್ಷಗಳ ನಾಯಕರು ಸುಮಾರು ಎರಡು ಗಂಟೆಗಳ ಕಾಲ ಖಾಸಗಿ ಹೋಟೆಲ್ ನಲ್ಲಿ ಇಂದು ಸಂಜೆ ಸಭೆ ನಡೆಸಿದ್ದಾರೆ. Body:ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಡಿಸಿಎಂ ಡಾ.ಜಿ. ಪರಮೇಶ್ವರ್, ಸಚಿವ ಡಿ.ಕೆ. ಶಿವಕುಮಾರ್ ಜೊತೆ ತಾಜ್ ವೆಸ್ಟ್ ಎಂಡ್ ನಲ್ಲಿ ಸೋಮವಾರದ ನಡೆ ಕುರಿತು ಸುದೀರ್ಘ ಸಮಾಲೋಚನೆ ನಡೆಸಿದ್ದಾರೆ.
ಬಹುಮತ ಸಾಬೀತಿಗೆ ಇನ್ನು ಎರಡುದಿನ ಬಾಕಿ ಇರುವ ಕಾರಣ ಮುಂಬಯಿನಲ್ಲಿರುವ ಅತೃಪ್ತ ಶಾಸಕರನ್ನು ಕರೆತರುವ ಕೊನೆ ಹಂತದ ಪ್ಲಾನ್ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.
ಸಿಎಂ ಕುಮಾರಸ್ವಾಮಿ ಅವರು ಬಂದರೆ ಬರುವುದಾಗಿ ಕೆಲ ಶಾಸಕರು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ, ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಯಾವ ನಾಯಕರನ್ನು ಕಳುಹಿಸಿ ಅತೃಪ್ತರನ್ನು ಮನವೊಲಿಸಬೇಕೆಂಬುದರ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈಗಾಗಲೇ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಲು ಯತ್ನ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರ ದೂರವಾಣಿ ಕರೆಗೆ ಅತೃಪ್ತರು ಸಿಗಲಿಲ್ಲ ಎನ್ನಲಾಗಿದೆ. ಇದೀಗ ಯಾವ ರೀತಿ ಅವರನ್ನು ಸಂಪರ್ಕಿಸಿ ಕರೆತರಬೇಕೆಂಬುದರ ಬಗ್ಗೆ ಉಭಯ ನಾಯಕರು ಚರ್ಚೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆ ಮುಂಬಯಿಗೆ ತೆರಳಿ ಶಾಸಕರಾದ ಎಸ್.ಟಿ. ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಗೋಪಾಲಯ್ಯ ಅವರನ್ನು ಕರೆತರುವ ಬಗ್ಗೆ ಮಾತುಕತೆ ಮಾಡಿದ್ದಾರೆ, ಇದರ ಜೊತೆಗೆ ಸೋಮವಾರ ಸುಪ್ರೀಂಕೋರ್ಟ್ ನಲ್ಲಿ ಬರಲಿರುವ ವಿಚಾರಣೆ ಕುರಿತು ಸಿಎಂ ಹಾಗೂ ಇತರ ನಾಯಕರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಹೋಟೆಲ್ ನಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಮೇಲೆ ನಿಗಾ ವಹಿಸಬೇಕು. ವಿಶ್ವಾಸಮತಯಾಚನೆ ಮುಗಿಯುವ ವರೆಗೂ ಒಟ್ಟಾಗಿ ಇರಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಇನ್ನೊಂದೆಡೆ ವಿಶ್ವಾಸಮತ ಸಾಬೀತಿಗೆ ಇನ್ನೆರಡು ದಿನ ಬಾಕಿ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಎಂ ಕುಮಾರಸ್ವಾಮಿ ಅವರು ರಾಮಲಿಂಗಾರೆಡ್ಡಿ ಅವರನ್ನು ದೇವೇಗೌಡರ ನಿವಾಸಕ್ಕೆ ಕರೆದೊಯ್ದು ಚರ್ಚಿಸಿರುವುದು ಭಾರಿ ಕುತೂಹಲ ಕೆರಳಿಸಿದೆ.
ರಾಮಲಿಂಗಾರೆಡ್ಡಿ ಅವರ ಮೂಲಕ ಮುಂಬಯಿನಲ್ಲಿರುವ ಅತೃಪ್ತ ಶಾಸಕರ ಮನವೊಲಿಕೆಗೆ ಸಿಎಂ ಮುಂದಾಗಿದ್ದಾರೆ. ಹಾಗಾಗಿಯೇ, ಇಂದು ಸಂಜೆ ತಾಜ್ ವೆಸ್ಟ್ ಎಂಡ್ ನಲ್ಲಿ ಪರಮೇಶ್ವರ್ ಹಾಗೂ ಡಿ.ಕೆ. ಶಿವಕುಮಾರ್ ಜೊತೆ ಸಭೆ ನಡೆಸಿ ಸಿಎಂ ಕುಮಾರಸ್ವಾಮಿ ಅವರು ಚರ್ಚಿಸಿದ್ದಾರೆ ಎನ್ನಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.