ದೇವನಹಳ್ಳಿ(ಬೆಂಗಳೂರು): ವಿಮಾನ ಹತ್ತಲು ವಿಳಂಬವಾಯಿತು ಎಂದು ಭದ್ರತಾ ಸಿಬ್ಬಂದಿ ಜತೆ ರಂಪಾಟ ಮಾಡಿಕೊಂಡು ವಿಮಾನ ನಿಲ್ದಾಣದಲ್ಲಿ ಬಾಂಬ್ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಸಿದ ಮಹಿಳೆಯೊಬ್ಬಳು ಜೈಲುಪಾಲಾಗಿದ್ದಾಳೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಫೆ.3 ರಂದು ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳಲು ಕೇರಳ ಮೂಲದ ಮಹಿಳೆ ಏರ್ಪೋರ್ಟ್ಗೆ ಆಗಮಿಸಿದ್ದರು. 6E445 ಸಂಖ್ಯೆಯ ಇಂಡಿಗೋ ವಿಮಾನದಲ್ಲಿ ಮಹಿಳೆ ಟಿಕೆಟ್ ಬುಕ್ ಮಾಡಿದ್ದರು. ಬೋರ್ಡಿಂಗ್ ಗೇಟ್ ನಂ.06ರಲ್ಲಿ ಕುಳಿತಿದ್ದ ವೇಳೆ ವಿಮಾನ ಯಾನಕ್ಕೆ ವಿಳಂಭವಾಗುತ್ತಿದೆ ಅಂತಾ ಮೊದಲಿಗೆ ಏರ್ಪೋರ್ಟ್ ಭದ್ರತಾ ಸಿಬ್ಬಂದಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾಳೆ. ನಂತರ ತನ್ನನ್ನು ಬೇಗ ಬಿಡದಿದ್ದಲ್ಲಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾಳೆ.
11 ದಿನಗಳ ಕಾಲ ನ್ಯಾಯಾಂಗ ಬಂಧನ: ಬೆದರಿಕೆ ನಂತರ ಸ್ಥಳದಲ್ಲಿದ್ದ ಪ್ರಯಾಣಿಕರಿಗೆ ಇಲ್ಲಿ ಬಾಂಬ್ ಇಟ್ಟಿದ್ದು ವಾಪಸ್ ಹೋಗುವಂತೆ ಕಿರುಚಾಡಿ ರಂಪಾಟ ಮಾಡಿದ್ದಾಳೆ. ಹೀಗಾಗಿ ಭದ್ರತಾ ಸಿಬ್ಬಂದಿ ಮಹಿಳೆಯನ್ನ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಮಹಿಳೆಯನ್ನ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ದೇವನಹಳ್ಳಿಯ ಜೆಎಂಎಫ್ಸಿ ಕೋರ್ಟ್ ಫೆ.17ರವರೆಗೂ 11 ದಿನಗಳ ಕಾಲ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.
ಇದನ್ನೂ ಓದಿ: ಕೆಐಎಎಲ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕನಿಂದ ಬೆದರಿಕೆ ಮೇಲ್.. ಹೈ ಅಲರ್ಟ್!
ಇನ್ಸ್ಪೆಕ್ಟರ್ ಮೇಲೆ ಹಲ್ಲೆ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ತಪಾಸಣೆ ಮಾಡುವ ಸಮಯದಲ್ಲಿ ಓರ್ವ ಸಿಐಎಸ್ಎಫ್ ಮಹಿಳಾ ಇನ್ಸ್ಪೆಕ್ಟರ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೆ ಹಲ್ಲೆ ನಡೆಸಿದ್ದ ಘಟನೆ ಇತ್ತೀಚೆಗೆ ವರದಿಯಾಗಿತ್ತು. ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಯಾಣಿಕನ ವಿರುದ್ಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಏರ್ಪೋರ್ಟ್ನಲ್ಲಿ ದಾಖಲೆ ಕೇಳಿದ್ದಕ್ಕೆ ಕರ್ತವ್ಯನಿರತ ಮಹಿಳಾ ಇನ್ಸ್ಪೆಕ್ಟರ್ ಮೇಲೆ ಪ್ರಯಾಣಿಕನಿಂದ ಹಲ್ಲೆ
ನೂತನ ಗೈಡ್ ಲೈನ್: ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ಕ್ರಮವನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೆಗೆದುಕೊಳ್ಳಲಾಗಿದೆ. ಜನವರಿ 1- 2023ರಿಂದ ಪರಿಷ್ಕೃತ ನೂತನ ಮಾರ್ಗಸೂಚಿ ಏರ್ ಪೋರ್ಟ್ನಲ್ಲಿ ಜಾರಿಗೆ ಬಂದಿದೆ. ವಿದೇಶಗಳಲ್ಲಿ ದಿನೇ ದಿನೆ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ಭಾರತ ಸರ್ಕಾರದ ಸೂಚನೆಯಂತೆ ಏರ್ ಪೋರ್ಟ್ ನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಮತ್ತಷ್ಟು ಕಟ್ಟಿನ ಕ್ರಮಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆ ಜನವರಿ 1 ರಂದು ಬೆಳಗ್ಗೆ 10 ಗಂಟೆ ಯಿಂದ ಜಾರಿಗೆ ಬರುವಂತೆ ಪರಿಷ್ಕೃತ ಮಾರ್ಗಸೂಚಿಯನ್ನ ಪ್ರಕಟಿಸಿದೆ.
ಇದನ್ನೂ ಓದಿ: ಜನವರಿ 1 ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ ಗೈಡ್ ಲೈನ್