ಬೆಂಗಳೂರು: ಜನವರಿ ಕೊನೆಯ ವಾರ ಹಾಗೂ ಫೆಬ್ರವರಿ ಮೊದಲ ವಾರದಲ್ಲಿ ಚಲಿಸುತ್ತಿದ್ದ ಎರಡು ಬಿಎಂಟಿಸಿ ಬಸ್ನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಲಿಲ್ಲ. ಈ ರೀತಿಯ ಪ್ರಕರಣಗಳು ಮರುಕಳಿಸಿದ ಪರಿಣಾಮ ಬಿಎಂಟಿಸಿ ಮಿಡಿ ಬಸ್‌ಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಬಿಎಂಟಿಸಿ 2014ರಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯಿಂದ ಒಟ್ಟು 47ಕ್ಕೂ ಅಧಿಕ ಮಿಡಿ ಬಸ್ಗಳನ್ನು ಖರೀದಿಸಿದೆ. ಈ ಬಸ್‌ಗಳ ಬಿಡಿ ಭಾಗಗಳ ಸಮಸ್ಯೆ ಕಂಡು ಬಂದಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿ ನಿರ್ವಹಣೆ ಮಾಡಿಕೊಡಬೇಕಿತ್ತು. ಆದರೆ, ಬಸ್‌ಗಳ ಸರಿಯಾದ ನಿರ್ವಹಣೆ ಮಾಡದೇ ಇರುವುದು ಇದಕ್ಕೆಲ್ಲ ಕಾರಣವಾಯ್ತಾ? ಎಂಬ ಅನುಮಾನ ವ್ಯಕ್ತವಾಗಿದೆ.
ಸದ್ಯ, ಬನಶಂಕರಿ ಡಿಪೋದ 20 ಬಸ್ಗಳು ಸೇರಿದಂತೆ, ಬೇರೆಡೆಗಳಲ್ಲಿ ಒಟ್ಟು 43 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಅಶೋಕ್ ಲೇಲ್ಯಾಂಡ್ ಕಂಪನಿಯ ಅಧಿಕಾರಿಗಳಿಗೆ ಇದನ್ನ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ. ಪರಿಶೀಲನೆಯ ವರದಿ ಬರುವವರೆಗೂ ಮಿಡಿ ಬಸ್‌ಗಳ ಕಾರ್ಯಾಚರಣೆ ಬಿಎಂಟಿಸಿ ನಿಲ್ಲಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಮತ್ತೊಂದು ಬಿಎಂಟಿಸಿ ಬಸ್ನಲ್ಲಿ ಬೆಂಕಿ: 30 ಪ್ರಯಾಣಿಕರು ಅಪಾಯದಿಂದ ಪಾರು