ETV Bharat / state

ಇಂದಿನಿಂದ ಬಿಎಂಟಿಸಿ ಬಸ್ ಸೇವೆ ಲಭ್ಯ : ಹೀಗಿದೆ ಹೊಸ ಮಾರ್ಗಸೂಚಿ

ಒಂದು ವಾರಗಳ ಕಾಲ ವಿಧಿಸಿದ್ದ ಲಾಕ್​​​​​ಡೌನ್ ತೆರವು ಹಿನ್ನೆಲೆ ಬಿಎಂಟಿಸಿ ಬಸ್​ ಸೇವೆ ಇಂದಿನಿಂದ ಪುನಾರಂಭಗೊಂಡಿದ್ದು, ಸಾರಿಗೆ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

author img

By

Published : Jul 22, 2020, 10:24 AM IST

BMTC bus service resumes from today
ಇಂದಿನಿಂದ ಬಿಎಂಟಿಸಿ ಬಸ್ ಸೇವೆ ಲಭ್ಯ

ಬೆಂಗಳೂರು : ಸರ್ಕಾರ ಲಾಕ್​​​ಡೌನ್ ತೆರವುಗೊಳಿಸಿದ ಹಿನ್ನೆಲೆ ಇಂದಿನಿಂದ ಬಿಎಂಟಿಸಿ ಬಸ್​ಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ. ಆದರೆ, ಬಸ್​ ಸಂಚಾರದಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಲಾಗಿದ್ದು, ಸಮಯ ನಿಗದಿಪಡಿಸಲಾಗಿದೆ.

ಸಾರಿಗೆ ಸೇವೆಗಳ ಲಭ್ಯತೆ ಹೀಗಿದೆ : ಪ್ರಾರಂಭದಲ್ಲಿ ಕಂಟೇನ್​ಮೆಂಟ್​ ವಲಯಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ 1,500 ಬಸ್​ಗಳು ಸಂಚರಿಸಲಿದೆ. ಪ್ರಯಾಣಿಕರ ದಟ್ಟಣೆಗನುಗುಣವಾಗಿ ಬಸ್​ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.

ಬಸ್​ ಓಡಾಟಕ್ಕೆ ಸಮಯ ನಿಗದಿ:
ಬೆಳಗ್ಗೆ 6 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಮಾತ್ರ ಬಸ್​ಗಳ ಓಡಾಟ ಇರಲಿದೆ.

ಮುನ್ನೆಚ್ಚರಿಕಾ ಕ್ರಮಗಳು : ಬಸ್​ ಸೇವೆ ಪುನಾರಂಭವಾದ ಹಿನ್ನೆಲೆ ಚಾಲಕರು ಮತ್ತು ಪ್ರಯಾಣಿಕರು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.

ಕರ್ತವ್ಯದ ವೇಳೆ, ಚಾಲಕರು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್‌ ಬಳಸಿ ಶುಚಿತ್ವ ಕಾಪಾಡುವುದು ಮತ್ತು ನಿಗದಿತ ನಿಲುಗಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸುವುದು ಇಳಿಸುವುದು ಮಾಡುವಂತೆ ಸೂಚಿಸಲಾಗಿದೆ.

ಪ್ರಯಾಣಿಕರು ಕೂಡ ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವಂತೆ ತಿಳಿಸಲಾಗಿದೆ. ಮಾಸ್ಕ್ ಧರಿಸದವರಿಗೆ ಬಸ್​ ಹತ್ತಲು ಅವಕಾಶ ಇರುವುದಿಲ್ಲ. ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ಬಸ್ ಹತ್ತುವುದು, ಇಳಿಯುವುದು ಮಾಡಬೇಕು. ಆಸನಗಳು ಭರ್ತಿಯಾಗಿದ್ದಲ್ಲಿ ಬಸ್​ ಹತ್ತಬಾರದು ಮತ್ತು ಶೀತ, ಕೆಮ್ಮು, ಜ್ವರ ಇರುವವರು ಬಸ್​ ಹತ್ತದಂತೆ ಬಿಎಂಟಿಸಿ ಸೂಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.