ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆ ಆಗುತ್ತಿರುವ ಅನುಸೂಚಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಲು ಅವತಾರ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬೆಂಗಳೂರು ನಗರದ ವಿವಿಧ ಸ್ಥಳಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ವಿವಿಧ ಸ್ಥಳಗಳಿಗೆ ಪ್ರತಿನಿತ್ಯ ಒಟ್ಟು 335 ಸಿಂಗಲ್ ಟ್ರಿಪ್ ಮೂಲಕ ಹವಾನಿಯಂತ್ರಿತ ವಾಯುವಜ್ರ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಈ ಬಸ್ಗಳಲ್ಲಿ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಲು ಕ.ರಾ.ರ.ಸಾ.ನಿಗಮದ ಅವತಾರ್ ತಂತ್ರಾಂಶದಲ್ಲಿ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಎಲ್ಲಿಂದ-ಎಲ್ಲಿಗೆ?
• ಹೆಚ್.ಎ.ಎಲ್- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
• ವೈಟ್‌ಫೀಲ್ಡ್- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
• ಬನಶಂಕರಿ ಟಿಟಿಎಂಸಿ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
• ಕಾಡುಗೋಡಿ ಬಸ್ ನಿಲ್ದಾಣ- ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ಯಾಣ
• ಎಲೆಕ್ಟ್ರಾನಿಕ್ ಸಿಟಿ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
• ಚಂದಾಪುರ – ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ
• ಕೆಂಪೇಗೌಡ ಬಸ್ ನಿಲ್ದಾಣ- ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
• ಮೈಸೂರು ರಸ್ತೆ ಬಸ್ ನಿಲ್ದಾಣ(ಎಂಆರ್ಬಿಎಸ್) - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
• ಡಿಎಲ್ಎಫ್ ಅಪಾರ್ಟ್ಮೆಂಟ್-ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
ಓದಿ: ವಾಟ್ಸ್ಆ್ಯಪ್ ಬಳಕೆದಾರರೇ ಎಚ್ಚರ! ಈ ನಿಯಮ ಒಪ್ಪದಿದ್ದರೆ ನಿಮ್ಮ ಆ್ಯಪ್ ಅಕೌಂಟ್ ಡಿಲೀಟ್!
ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕೆಎಸ್‌ಆರ್‌ಟಿಸಿ ಬುಕ್ಕಿಂಗ್ ಕೌಂಟರ್ಗಳು, ಆನ್ಲೈನ್ (www.ksrtc.in) ಕೆಎಸ್‌ಆರ್‌ಟಿಸಿ ಮೊಬೈಲ್ ಆ್ಯಪ್ ಹಾಗೂ ಅಧಿಕೃತ ಖಾಸಗಿ ಏಜೆನ್ಸಿಗಳ ಮೂಲಕ ಕಾಯ್ದಿರಿಸಬಹುದು. ಪ್ರಯಾಣಿಸುವ ಸಮಯದಲ್ಲಿ ಚಾಲ್ತಿಯಲ್ಲಿರುವ ಮುದ್ರಿತ ಟಿಕೆಟ್ /ಇ-ಟಿಕೆಟ್ ಬುಕ್ಕಿಂಗ್
ಎಸ್‌ಎಂಎಸ್, (ಮೊಬೈಲ್/ಲ್ಯಾಪ್‌ಟಾಪ್ ಇತ್ಯಾದಿಗಳ ಮೂಲಕ ತೋರಿಸುವುದು) ಹೊಂದಿರಬೇಕು.
Online, Mobile App ಮೂಲಕ ಮುಂಗಡ ಆಸನ ಕಾಯ್ದಿರಿಸಿದ ಪ್ರಯಾಣಿಕರು ಇ-ಟಿಕೆಟ್ ನೊಂದಿಗೆ ಭಾವಚಿತ್ರವಿರುವ ಮೂಲ ಗುರುತಿನ ಚೀಟಿ/ಪ್ರತಿಯನ್ನು (ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಪಡಿತರ ಚೀಟಿ ಆಧಾರ್ ಕಾರ್ಡ್, ಸರ್ಕಾರಿ, ಅರೆ ಸರ್ಕಾರಿ, ಮಂಡಳಿ ವಿತರಿಸಿರುವ ಗುರುತಿನ ಚೀಟಿ), ಹಿರಿಯ ನಾಗರೀಕರ ಗುರುತಿನ ಚೀಟಿ (ಕ.ರಾ.ರ.ಸಾ ನಿಗಮ/ಸರ್ಕಾರದಿಂದ ವಿತರಿಸಿದ) ಅಥವಾ ಭಾವಚಿತ್ರವಿರುವ ಖಾಸಗಿ ಕಂಪನಿ, ಶೈಕ್ಷಣಿಕ ಸಂಸ್ಥೆಗಳಿಂದ ವಿತರಿಸಿದ ಗುರುತಿನ ಚೀಟಿಯ ಮೂಲ ಪ್ರತಿ ತೋರಿಸಿ ಪ್ರಯಾಣಿಸಬಹುದು.
ಒಂದೇ ಗುಂಪಿನ 4 ಅಥವಾ ಅಧಿಕ ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿದಲ್ಲಿ, ಪ್ರಯಾಣದರದಲ್ಲಿ ಶೇ.5 ರಷ್ಟು ರಿಯಾಯಿತಿಯನ್ನು ಇ-ಬುಕ್ಕಿಂಗ್ ಸಮಯದಲ್ಲಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಮ್ಮೆಲೇ ಮುಂಗಡವಾಗಿ ಆಸನವನ್ನು ಕಾಯ್ದಿರಿಸಿದಲ್ಲಿ, ಹಿಂದಿರುಗುವ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿಯನ್ನು ಇ-ಬುಕ್ಕಿಂಗ್ ಸಮಯದಲ್ಲಿ ನೀಡಲಾಗುತ್ತದೆ.