ಬೆಂಗಳೂರು: ಕೊರೊನಾ ವೈರಸ್ ಬಿಸಿ ರೋಗಿಗಳಿಗೂ ತಟ್ಟಿದೆ. ಇದ್ರಿಂದ ನಗರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ರಕ್ತದ ಕೊರತೆ ಎದುರಾಗಿದ್ದು, ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವವರ ಸಂಖ್ಯೆ ತೀವ್ರಗತಿಯಲ್ಲಿ ಕುಸಿತ ಕಂಡಿದೆ.

ಇತ್ತೀಚೆಗೆ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯು ರಕ್ತದಾನ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಹಲಸೂರಿನ ಎಂಇಜಿ ಸೆಂಟರ್ನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನೂರಕ್ಕಿಂತ ಹೆಚ್ಚು ಯೋಧರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು.
ಕಿದ್ವಾಯಿ ಆಸ್ಪತ್ರೆಯ ರೋಗಿಗಳಲ್ಲಿ ರಕ್ತ ಕೊರತೆ ಎದುರಾಗಿದ್ದರಿಂದ ರಕ್ತದಾನ ಮಾಡುವಂತೆ ಮನವಿ ಮಾಡಿಕೊಂಡಿತ್ತು. ಸಂತೋಷದಿಂದಲೇ ಭಾರತೀಯ ಸೇನಾ ವಸ್ತ್ರದಲ್ಲೇ 100ಕ್ಕಿಂತ ಹೆಚ್ಚು ಯೋಧರು ರಕ್ತದಾನ ಮಾಡಿದರು.