ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ವಂದೇ ಮಾತರಂ ಗೀತೆ ಹಾಡುವುದಕ್ಕೆ ವಿರೋಧಿಸಿದ್ದರು. ಅವರ ಸಾಲಿಗೆ ಈಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದ್ದಾರೆ. ಈ ಮೂಲಕ ಏಕತೆ ಭಾವನೆಗೆ ಧಕ್ಕೆ ತಂದಿರುವ ಸಿದ್ದರಾಮಯ್ಯ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ರಾಷ್ಟ್ರ ದ್ರೋಹಿ ಕಾಂಗ್ರೆಸ್ ಹೆಸರಿನ ಹ್ಯಾಷ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಮೂಲಕ ಭಾರತೀಯರ ಏಕತೆಯ ಭಾವನೆಯನ್ನು ವಿಭಜಿಸುವ ಪ್ರಯತ್ನ ಮಾಡಿದ್ದು, ಭಾರತೀಯರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದೆ. ಈ ದೇಶದಲ್ಲಿ ಎಲ್ಲ ಧರ್ಮೀಯರು ಮುಕ್ತ ಮನಸಿನಿಂದ ಒಪ್ಪಿಕೊಂಡಿರುವ ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸುವುದು ಅವರ ಜಿಹಾದಿ ಮನಸ್ಥಿತಿ ತೋರಿಸುತ್ತದೆ ಎಂದಿದೆ.
-
ಮಾನ್ಯ @siddaramaiah ಅವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಮೂಲಕ ಭಾರತೀಯರ ಏಕತೆಯ ಭಾವನೆಯನ್ನು ವಿಭಜಿಸುವ ಪ್ರಯತ್ನ ಮಾಡಿದ್ದು, ಭಾರತೀಯರ ಕ್ಷಮೆ ಕೋರಬೇಕು.#ರಾಷ್ಟ್ರದ್ರೋಹಿಕಾಂಗ್ರೆಸ್
— BJP Karnataka (@BJP4Karnataka) November 27, 2022 " class="align-text-top noRightClick twitterSection" data="
">ಮಾನ್ಯ @siddaramaiah ಅವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಮೂಲಕ ಭಾರತೀಯರ ಏಕತೆಯ ಭಾವನೆಯನ್ನು ವಿಭಜಿಸುವ ಪ್ರಯತ್ನ ಮಾಡಿದ್ದು, ಭಾರತೀಯರ ಕ್ಷಮೆ ಕೋರಬೇಕು.#ರಾಷ್ಟ್ರದ್ರೋಹಿಕಾಂಗ್ರೆಸ್
— BJP Karnataka (@BJP4Karnataka) November 27, 2022ಮಾನ್ಯ @siddaramaiah ಅವರು ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ವಂದೇ ಮಾತರಂ ಗೀತೆಗೆ ಅವಮಾನ ಮಾಡುವ ಮೂಲಕ ಭಾರತೀಯರ ಏಕತೆಯ ಭಾವನೆಯನ್ನು ವಿಭಜಿಸುವ ಪ್ರಯತ್ನ ಮಾಡಿದ್ದು, ಭಾರತೀಯರ ಕ್ಷಮೆ ಕೋರಬೇಕು.#ರಾಷ್ಟ್ರದ್ರೋಹಿಕಾಂಗ್ರೆಸ್
— BJP Karnataka (@BJP4Karnataka) November 27, 2022
ಬ್ರಿಟಿಷರು ವಂದೇ ಮಾತರಂ ಹಾಡನ್ನು ವಿರೋಧಿಸಿದ್ದರು. ಈಗ ಅದೇ ಸಾಲಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರ್ಪಡೆಯಾಗಿದ್ದಾರೆ. ವಂದೇ ಮಾತರಂ ಗೀತೆಗೆ ವಿರೋಧ ವ್ಯಕ್ತಪಡಿಸಿರುವುದು, ಅವರಿಗೆ ದೇಶದ ಏಕತೆಗಿಂತ ಅಧಿಕಾರಕ್ಕಾಗಿ ಸಮಾಜ ಒಡೆಯುವುದೇ ಮುಖ್ಯ ಎನ್ನುವುದನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: ಶರಾವತಿ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲ : ಧ್ರುವನಾರಾಯಣ್