ETV Bharat / state

ಮೋದಿ ಸರ್ಕಾರ ಬಂದ ಮೇಲೆ ದೇಶದ ಬಡತನ ರೇಖೆ ಶೇ.22ರಿಂದ 10ಕ್ಕೆ ಇಳಿಕೆ: ಬೊಮ್ಮಾಯಿ ಸರ್ಕಾರಕ್ಕೂ ನಡ್ಡಾ ಮೆಚ್ಚುಗೆ

ಸಮಾಜವಾದಿ, ಡಿಎಂಕೆ, ಆರ್​ಜೆಡಿ, ಜನತಾದಳದಂತಹ ಪಕ್ಷಗಳಲ್ಲಿ ಯಾರೂ ಪ್ರಧಾನಿಯಾಗಲು ಅಥವಾ ರಾಜ್ಯಾಧ್ಯಕ್ಷ, ರಾಷ್ಟ್ರೀಯ ಅಧ್ಯಕ್ಷರಾಗಲೂ ಸಾಧ್ಯವಿಲ್ಲ. ಇಂತಹ ಪಕ್ಷಗಳಲ್ಲಿ ಕುಟುಂಬದ ಸದಸ್ಯರಷ್ಟೇ ಅಧಿಕಾರ ಅನುಭವಿಸಲು ಸಾಧ್ಯ ಎಂದು ಜೆ.ಪಿ.ನಡ್ಡಾ ಟೀಕಿಸಿದರು.

bjp-national-president-jp-nadda-appreciate-to-basavaraj-bommai-government
ಮೋದಿ ಸರ್ಕಾರ ಬಂದ ಮೇಲೆ ದೇಶದ ಬಡತನ ರೇಖೆ ಶೇ.22ರಿಂದ 10ಕ್ಕೆ ಕುಸಿತ: ಬೊಮ್ಮಾಯಿ ಸರ್ಕಾರಕ್ಕೂ ನಡ್ಡಾ ಮೆಚ್ಚುಗೆ
author img

By

Published : Jun 18, 2022, 9:29 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ಆಡಳಿತಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಮಾಜಿಕ ನ್ಯಾಯವಷ್ಟೇ ಅಲ್ಲ, ಸಾಮಾಜಿಕ ಅವಕಾಶವನ್ನೂ ಸರ್ಕಾರ ನೀಡಿದೆ. ಒಬಿಸಿ ಬಲವರ್ಧನೆಗೆ ಶ್ರಮಿಸುತ್ತಿದೆ ಎಂದು ಹಾಡಿ ಹೊಗಳಿದ್ದಾರೆ.

ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ಖಾಸಗಿ ರೆಸಾರ್ಟ್​​ನಲ್ಲಿ ಆಯೋಜಿಸಿದ್ದ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಭೂಮಿಯಲ್ಲಿ ಹಿಂದುಳಿದ ವರ್ಗಗಳಿಗಾಗಿ ಪ್ರತ್ಯೇಕ ಹಾಸ್ಟೆಲ್‍ಗಳು, ಪ್ರತ್ಯೇಕ ವಸತಿ ಶಾಲೆಗಳು, ಉದ್ಯೋಗ ನೀಡುವಂತಾಗಬೇಕು. ಇದನ್ನು ಬಿಜೆಪಿ ಸರ್ಕಾರ ಮಾಡುತ್ತದೆ. ದೇಶದ ಪ್ರತಿಯೊಂದು ಪ್ರದೇಶದಲ್ಲಿ ಹಿಂದುಳಿದ ವರ್ಗಗಳಿಗೆ ಆದ ಕೆಲಸಗಳ ಮಾಹಿತಿ ನೀಡುವಂತೆ ರಾಷ್ಟ್ರೀಯ ಒಬಿಸಿ ಮೋರ್ಚಾದ ಅಧ್ಯಕ್ಷ ಡಾ. ಲಕ್ಷ್ಮಣ್ ಅವರಿಗೆ ನಡ್ಡಾ ಸೂಚಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆ ಭಾರತದ ಬಡತನ ರೇಖೆಗಿಂತ ಕೆಳಗಿನ ಮಟ್ಟ ಶೇ.22ರಿಂದ 10ಕ್ಕೆ ಕಡಿಮೆಯಾಗಿದೆ. ಕೋವಿಡ್ ಕಾಲದಲ್ಲಿಯೂ ಸರ್ಕಾರ ಮಾಡಿದ ಸಾಧನೆಯಾಗಿದೆ. ಹೀಗಾಗಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಎಲ್ಲ ನಾಯಕರು ಇಡಬೇಕೆಂದು ಕರೆ ನೀಡಿದರು.

ಮಾದರಿ ಕಾರ್ಯಕರ್ತರಾಗಬೇಕು: ಬಿಜೆಪಿ ಕಾರ್ಯಕರ್ತರು ಪರಸ್ಪರ ಪ್ರೀತಿ ಭಾವನೆಯಿಂದ ಗೌರವಯುತವಾಗಿ ಕಾರ್ಯ ನಿರ್ವಹಿಸಬೇಕು. ಸಮಾಜದಲ್ಲಿ ಬಿಜೆಪಿ ಕಾರ್ಯಕರ್ತರು ಮಾದರಿಯಾಗಿ ನಿಲ್ಲಬೇಕು. ನಾವು ಬೇರೆ ಪಕ್ಷಗಳಿಂದ ಹೇಗೆ ಭಿನ್ನವಾಗಿದ್ದೇವೆ ಎಂಬುದನ್ನು ಅರಿಯಬೇಕು. ಕೇವಲ ಬಿಜೆಪಿ ಎಲ್ಲ ಪಕ್ಷಗಳಿಗಿಂತ ಶ್ರೇಷ್ಠ ಮತ್ತು ಮಹತ್ವದ್ದಾಗಿದೆ. ಬೇರೆ ಪಕ್ಷಗಳಲ್ಲಿ ರಾಜಕೀಯ ಸಂಘಟನೆ ಬಿಜೆಪಿಯಂತಿಲ್ಲ. ಅನ್ಯ ಪಕ್ಷಗಳಲ್ಲಿ ಒಬ್ಬರನ್ನೊಬ್ಬರು ಕಾಲೆಳೆಯುವುದರಲ್ಲಿಯೇ ತಲ್ಲೀನರಾಗಿದ್ದಾರೆ. ಅನಿವಾರ್ಯ ಮತ್ತು ಅತ್ಯಗತ್ಯ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲೂ ಪಕ್ಷಕ್ಕಾಗಿ ದುಡಿಯುವವರು ನಮ್ಮ ಬಿಜೆಪಿಯಲ್ಲಿದ್ದಾರೆ ಎಂದು ನಡ್ಡಾ ನುಡಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದನ್ನು ಅರಿತು ಜನರಿಗೆ ತಿಳಿ ಹೇಳಬೇಕು. ರಾಜಕೀಯ ಕಾರ್ಯಕರ್ತರು ಸದಾ ಜಾಗೃತಾವಸ್ಥೆಯಲ್ಲಿರಬೇಕು. ರಾಜಕೀಯ ಪಕ್ಷಗಳ ಕಾರ್ಯಕರ್ತರಾಗಿ ರಾಜಕೀಯ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ? ವಾತಾವರಣ ಹೇಗಿದೆ? ವಿಪಕ್ಷಗಳ ಬಗ್ಗೆ ಏನು ಮಾಹಿತಿ ಇದೆ ಎಂಬುದನ್ನು ಅರಿತಿರಬೇಕಾದ ಕುತೂಹಲ ಪ್ರವೃತ್ತಿ ಮತ್ತು ಜವಾಬ್ದಾರಿ ಇರಲೇಬೇಕು. ಪ್ರತಿಯೊಬ್ಬರು ಪಕ್ಷಕ್ಕಾಗಿ, ಪಕ್ಷ ಸಂಘಟನೆಗಾಗಿ ಎಷ್ಟು ಕಾರ್ಯಕರ್ತರು ತಮ್ಮ ಬಳಿಯಿದ್ದಾರೆ ಎಂದು ವೈಯಕ್ತಿಕವಾಗಿ ಮನಸಿನಲ್ಲಿ ಅವಲೋಕನ ಮಾಡಿಕೊಳ್ಳಿ ಎಂದರು.

ಎಲ್ಲ ವರ್ಗಗಳ ಬಗ್ಗೆ ಬೊಮ್ಮಾಯಿ ಆಲೋಚನೆ: ಹಿಂದುಳಿದ ವರ್ಗಗಳ ಮೀಸಲಾತಿ ಇಲ್ಲದೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಬೊಮ್ಮಾಯಿ ಅವರೊಬ್ಬ ಜಾಗೃತ ನಾಯಕರೆಂಬುದನ್ನು ತೋರಿಸುತ್ತದೆ. ಈ ವರ್ಗಗಳ ಬಗ್ಗೆ ಅವರು ಆಲೋಚಿಸುತ್ತಿದ್ದಾರೆ ಎಂಬುದನ್ನು ತೋರಿಸುವುದೇ ಜಾಗೃತಾವಸ್ಥೆ. ಎಲ್ಲರ ಜಾತಿ ಬಿಜೆಪಿಯಾಗಬೇಕು. ಇಂತಹ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ನಡ್ಡಾ ಸಲಹೆ ನೀಡಿದರು.

ಬಿಜೆಪಿ ಎನ್ನುವ ಜಾತಿಯೊಂದಿಗೆ ಎಲ್ಲರೂ ತಮ್ಮನ್ನು ಜೋಡಿಸಿಕೊಳ್ಳಬೇಕು. ನಮ್ಮ ಜಾತಿಯ ವ್ಯಕ್ತಿ ಬಿಜೆಪಿಯಲ್ಲಿದ್ದಾನೆ ಎಂಬ ಹೆಮ್ಮೆ ಜಾತಿ ಸಮುದಾಯದಲ್ಲಿ ಬರಬೇಕು. ಹಿಂದುಳಿದ ವರ್ಗಗಳ ಸಮುದಾಯ ಬಹಳ ದೊಡ್ಡ ಸಮುದಾಯವಾಗಿದೆ. ಈ ವರ್ಗದಿಂದ ಯಾರೊಬ್ಬರೂ ಬಿಜೆಪಿಯಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು. ಹಿಂದುಳಿದ ಜಾತಿಗಳ ಪ್ರಭಾವಿ ಯಾರು? ನಾಯಕ ಯಾರು? ಎಂಬುದನ್ನು ತಿಳಿಯಬೇಕು. ನಮ್ಮ ನಮ್ಮಲ್ಲಿ ಜಾತಿ ದ್ವೇಷ ಬರಬಾರದು ಎಂದು ಹೇಳಿದರು.

ಏಕಾಗ್ರತೆಯಿಂದ ಚಿಂತನೆ ಮಾಡಿ: ಒಂದು ದಿನ ಮೊಬೈಲ್ ಸ್ವಿಚ್ ಆಫ್ ಮಾಡಿ ಯಾರೊಂದಿಗೂ ಮಾತನಾಡದೇ ಏಕಾಗ್ರತೆಯಿಂದ ನಮ್ಮ ಆರ್ಥಿಕತೆ ಸ್ಥಿತಿಯೇನಿದೆ?, ನಮ್ಮ ಅಭಿವೃದ್ಧಿ ಏನಾಗಿದೆ?, ನಾವೆಲ್ಲಿದ್ದೇವೆ? ನಾವು ಎಷ್ಟು ಕಾಲಾವಧಿಯಲ್ಲಿ ಎಲ್ಲಿಗೆ ಹೋಗಬೇಕು ಎಂಬುದನ್ನು ಚಿಂತನೆ ಮಾಡಬೇಕೆಂದು ನಡ್ಡಾ ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಬೆಂಗಳೂರು ರೋಡ್ ಶೋ ರದ್ದು: ವಾಯು ಮಾರ್ಗದಲ್ಲೇ ಸಂಚಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.