ETV Bharat / state

'ಕಾರ್ಲ್ ಮಾರ್ಕ್ಸ್, ಮಾವೋ ಪಠ್ಯ ಇರಬಹುದು; ದೇಶಭಕ್ತ ಡಾ.ಹೆಡ್ಗೆವಾರ್ ಪಾಠ ಇರಬಾರದು ಎಂಬುದು ಅಸಹಿಷ್ಣುತೆ' - ಹೆಡ್ಗೆವಾರ್ ಪಾಠ ಇರಬಾರದು ಎಂಬುದು ಅಸಹಿಷ್ಠುತೆ

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಬಿಜೆಪಿ ಮುಖಂಡ ಸಿ.ಟಿ‌.ರವಿ ಅವರು ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

bjp-national-general-secretary-ct-ravi-spoke-about-textbook-revision
ಕಾರ್ಲ್ ಮಾರ್ಕ್ಸ್, ಮಾವೋ ಪಠ್ಯ ಇರಬಹುದು, ಡಾ. ಹೆಡ್ಗೆವಾರ್ ಪಾಠ ಇರಬಾರದು ಎಂಬುದು ಅಸಹಿಷ್ಣುತೆ: ಸಿ.ಟಿ‌ ರವಿ
author img

By

Published : Jun 8, 2023, 4:42 PM IST

Updated : Jun 8, 2023, 8:28 PM IST

ಬಿಜೆಪಿ ಮುಖಂಡ ಸಿ.ಟಿ‌.ರವಿ ಹೇಳಿಕೆ

ಬೆಂಗಳೂರು : ಪಠ್ಯದಲ್ಲಿ ಕಾರ್ಲ್ ಮಾರ್ಕ್ಸ್, ಮಾವೋ ಕುರಿತಾದ ಪಠ್ಯಗಳು ಇರಬಹುದು. ಆದರೆ ಆರ್​​ಎಸ್ಎಸ್ ಸಂಸ್ಥಾಪಕ ಡಾ. ಹೆಡ್ಗೆವಾರ್ ಅವರ ಪಾಠ ಇರಬಾರದು ಎಂಬುದು ಅಸಹಿಷ್ಣುತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ‌.ರವಿ ವಾಗ್ದಾಳಿ ನಡೆಸಿದರು.

ಬಿಜೆಪಿ ಕಚೇರಿಯಲ್ಲಿ ಪಠ್ಯ ಪರಿಷ್ಕರಣೆ ವಿಚಾರವಾಗಿ ಇಂದು ಮಾತನಾಡಿದ ಅವರು, ಶಾಲಾ ಪಠ್ಯದಲ್ಲಿ ಪ್ರಜಾಪ್ರಭುತ್ವ ಒಪ್ಪದ ಕಾರ್ಲ್ ಮಾರ್ಕ್ಸ್, ಮಾವೋ ಪಠ್ಯ ಇರಬಹುದು. ಅವರು ಈ ದೇಶಕ್ಕೆ ಸಂಬಂಧಪಟ್ಟವರೇ ಅಲ್ಲ. ಕಾರ್ಲ್ ಮಾರ್ಕ್ಸ್, ಮಾವೋ ಇಬ್ಬರೂ ಪ್ರಜಾಪ್ರಭುತ್ವ ವಿರೋಧಿಗಳು. ಮಾವೋವಾದಿಗಳ ಪಾಠ ಇರಬಹುದು, ಮಾರ್ಕ್ಸ್ ವಾದಿಗಳ ಪಾಠ ಇರಬಹುದು. ಆದರೆ ದೇಶಭಕ್ತ ಡಾ. ಹೆಡ್ಗೇವಾರ್ ಪಾಠ ಇರಬಾರದು ಎಂಬುದು ಅಸಹಿಷ್ಣುತೆ ಎಂದು ಟೀಕಿಸಿದರು.

ಸೈದ್ಧಾಂತಿಕವಾಗಿ ಹೆಡ್ಗೆವಾರ್ ಅವರನ್ನು ವಿರೋಧಿಸಬಹುದು. ಆದರೆ, ಅವರ ದೇಶಭಕ್ತಿಯನ್ನು ಪ್ರಶ್ನಿಸುವ ನೈತಿಕತೆ ಯಾರಿಗೂ ಇಲ್ಲ. ಅವರು ಪಠ್ಯ ಪರಿಷ್ಕರಣೆ ಮಾಡಲಿ. ಜನ ಅವರಿಗೆ ಅಧಿಕಾರ ಕೊಟ್ಟಿದ್ದಾರೆ. ಹಾಗಂತ ಏನೂ ಬೇಕಾದರೂ ಮಾಡುತ್ತೇವೆ ಎಂದರೆ ಅದಕ್ಕೂ ಜನರು ತಕ್ಕ ಪಾಠ ಕಲಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ಕಾದು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಚುನಾವಣೆಯ ಬಳಿಕ ಇದು ಪ್ರಥಮ ವಿಜೇತ ಶಾಸಕರ ಸಭೆಯಾಗಿದೆ. ಸಭೆಯಲ್ಲಿ 22 ಮಂದಿ ಮೊದಲ ಬಾರಿ ಆಯ್ಕೆ ಆದ ಸದಸ್ಯರ ಪರಿಚಯ ಮಾಡಲಾಗಿದೆ. ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಜನ ವಿರೋಧಿ ಕೆಲಸ ಮಾಡಿದರೆ ಹಾಗೂ ರಾಜ್ಯಕ್ಕೆ ಘಾತಕವಾದ ನಿರ್ಧಾರ ಕೈಗೊಂಡರೆ, ಸದನದ ಒಳಗೆ ಹೊರಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸಭೆಯಲ್ಲಿ ರಾಜ್ಯ ರಾಜಕೀಯ ಪರಿಸ್ಥಿತಿ ಅವಲೋಕನ ಮಾಡಲಾಗಿದೆ. 1985ರ ಹೊರತಾಗಿ ರಾಜ್ಯದ ಇತಿಹಾಸದಲ್ಲಿ ಒಂದೇ ಪಕ್ಷ ಎರಡು ಬಾರಿ ಅಧಿಕಾರಕ್ಕೆ ಬಂದ ಇತಿಹಾಸ ಇಲ್ಲ. ಪ್ರತಿ ಐದು ವರ್ಷಕ್ಕೊಮ್ಮೆ ಬದಲಾವಣೆ ಸ್ವಾಭಾವಿಕ. ಕಳೆದ ನಾಲ್ಕು ದಶಕದಿಂದ ಇದು ನಡೆದಿದೆ ಎಂದರು.

ಈ‌ ಬಾರಿಯ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್, ಒಳಮೀಸಲಾತಿಯ ಒಳ ಏಟು ಹಾಗೂ ಕೆಲವು ವಿಚಾರಗಳನ್ನು ಪರಿಣಾಮಕಾರಿಯಾಗಿ ಎದುರಿಸದೇ ಇದ್ದದ್ದು ಬಿಜೆಪಿಯ ಸೋಲಿಗೆ ಪ್ರಮುಖ ಕಾರಣ. ಆದರೆ ಬಿಜೆಪಿ ಎದೆಗುಂದಿಲ್ಲ. ಈ ಬಾರಿ ನಮ್ಮ ಪಾತ್ರ ಬದಲಾವಣೆ ಆಗಿದೆ, ಆದರೆ ಬದ್ಧತೆ ಬದಲಾವಣೆ ಆಗಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ಕೊಟ್ಟು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಶಾಸಕರ ವೈಯಕ್ತಿಕ ಅಭಿಪ್ರಾಯ ಸಂಗ್ರಹ ಮಾಡಿ ಅದರ ಆಧಾರದಲ್ಲಿ ಹಿರಿಯರ ಜೊತೆಗೆ ಸಮಾಲೋಚನೆ ಮಾಡಲಿದ್ದಾರೆ. ಆ ಬಳಿಕ ಪಕ್ಷ ನಿರ್ಧಾರ ಆಯ್ಕೆ ನಿರ್ಧಾರ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ : ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ: ಡಿ.ಕೆ.ಸುರೇಶ್

Last Updated : Jun 8, 2023, 8:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.