ETV Bharat / state

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಬಿಜೆಪಿ ಶಾಸಕರು

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ, ಸರ್ಕಾರ ಪತನವಾಗಿ ನಮ್ಮ ಸರ್ಕಾರ ಬರಲಿದೆ ಎಂದು ಸಿದ್ದರಾಮಯ್ಯ ಅಧಿಕಾರದ ಕನಸು ಕಾಣುತ್ತಿದ್ದಾರೆ. ಆದರೆ ಪ್ರತಿಪಕ್ಷ ಸ್ಥಾನದಿಂದ ಸಿದ್ದರಾಮಯ್ಯರನ್ನು ತೆಗೆಯಲು ಕಾಂಗ್ರೆಸ್​​ನವರೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಸ್​.ಆರ್.ವಿಶ್ವನಾಥ್ ಟಾಂಗ್ ನೀಡಿದರು.

mlas
mlas
author img

By

Published : May 26, 2021, 4:51 PM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ. ಇನ್ನು ಎರಡು ವರ್ಷ ಯಡಿಯೂರಪ್ಪನವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಂದಿನ ಚುನಾವಣೆಯೂ ಯಡಿಯೂರಪ್ಪ ನೇತೃತ್ವದಲ್ಲಿ ನಡೆಸುತ್ತೇವೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪಗೆ ಬಹುಮತ ಇಲ್ಲ ಅದಕ್ಕೆ ಸಭೆ ಕರೆಯುತ್ತಿಲ್ಲ. ನಾಯಕತ್ವ ಬದಲಾವಣೆ ಅಂತಿಮ ಹಂತಕ್ಕೆ ಬಂದಿದೆ ಎಂದು ಸಿಎಂ ಬಗ್ಗೆ ಸಿದ್ದರಾಮಯ್ಯ ಇಷ್ಟೊಂದು ಹೀನಾಯವಾಗಿ ಮಾತಾಡಬಾರದಿತ್ತು. ಪ್ರತಿಪಕ್ಷ ಸ್ಥಾನದಿಂದ ಸಿದ್ದರಾಮಯ್ಯರನ್ನು ತೆಗೆಯಲು ಕಾಂಗ್ರೆಸ್​​ನವರೇ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲಿದೆ, ಸರ್ಕಾರ ಪತನವಾಗಿ ನಮ್ಮ ಸರ್ಕಾರ ಬರಲಿದೆ ಎಂದು ಸಿದ್ದರಾಮಯ್ಯ ಅಧಿಕಾರದ ಕನಸು ಕಾಣುತ್ತಿದ್ದಾರೆ. ಅದಕ್ಕೆ 60-70 ಪಂಚೆ ತೆಗೆದುಕೊಂಡಿದ್ದಾರೆ ಅನ್ಸುತ್ತೆ. ಕೆಲವರು ದೆಹಲಿಗೆ ಹೋಗಿದ್ದಾರೆ ಅಂದಾಕ್ಷಣ ಸಿಎಂ ಬದಲಾಗಲ್ಲ ಎಂದು ಸಿದ್ದರಾಮಯ್ಯರನ್ನು ಕುಟುಕಿದರು.

ದೆಹಲಿಗೆ ಹೋದ ಕೂಡಲೇ ಮಾಧ್ಯಮಗಳಲ್ಲಿ ಸುದ್ದಿ ಬಂತು, ಶಾಸಕಾಂಗ ಪಕ್ಷದ ಸಭೆಗೆ ಯಾರೂ ಆಗ್ರಹ ಮಾಡುತ್ತಿಲ್ಲ. ನಮ್ಮವರ್ಯಾರೂ ಸಭೆಗೆ ಆಗ್ರಹ ಮಾಡುತ್ತಿಲ್ಲ. ನಮ್ಮ ಪಕ್ಷದ ನಾಯಕರು ಯಾರಾದರೂ ಮುಂದಿನ ಸಿಎಂ ಆಗುತ್ತೇವೆ ಅಂತ ಹೊಸ ಬಟ್ಟೆ ಹೊಲಿಸಿದ್ದರೆ ಅದರ‌ ಆಸೆ ಬಿಡಲಿ ಎಂದು ಸ್ವಪಕ್ಷೀಯ ರೆಬೆಲ್ ನಾಯಕರಿಗೂ ಟಾಂಗ್ ನೀಡಿದರು.

ನಂತರ ಮಾತನಾಡಿದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ನಮ್ಮ ಪಕ್ಷದ ಬಗ್ಗೆ ಮಾತಾಡಲು ಸಿದ್ದರಾಮಯ್ಯಗೆ ಏನು ಅಧಿಕಾರವಿದೆ? ಯಡಿಯೂರಪ್ಪ ಬದಲಾವಣೆ ಬಗ್ಗೆ ಕೆಲ ಶಾಸಕರು ಪ್ರಯತ್ನ ಮಾಡುತ್ತಿದ್ದರೆ, ಅದು ಆಗದ ಕೆಲಸ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಸಿಎಂ. ಯಡಿಯೂರಪ್ಪರನ್ನ ಬದಲಾಯಿಸುವ ಸಂದರ್ಭ ಇಲ್ಲ. ದೆಹಲಿಗೆ ಒಂದಿಬ್ಬರು ಶಾಸಕರು ಹೋಗಿರಬಹುದು. ಆದರೆ ಅವರಿಗೆ ವರಿಷ್ಠರ ಭೇಟಿ ಸಾಧ್ಯವಾಗಲಿಲ್ಲ ಎಂದರು.

ಈಗ ಉಳಿದ ಅವಧಿಗೆ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ, ನಾವು ಯಡಿಯೂರಪ್ಪ ಪರ ಸಹಿ ಸಂಗ್ರಹ ಮಾಡುವ ಅಗತ್ಯ ಇಲ್ಲ. ಯಾವ ಶಾಸಕರಿಗೆ ಭಿನ್ನಾಭಿಪ್ರಾಯ ಇದೆಯೋ ಮುಂದಿನ ದಿನಗಳಲ್ಲಿ ಅವರೇ ಯಡಿಯೂರಪ್ಪ ಪರ ಮಾತಾಡ್ತಾರೆ ಎಂದರು‌.

ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಕಳೆದುಕೊಳ್ಳೋದಿಕ್ಕೆ ಹೈಕಮಾಂಡ್​ಗೆ ಇಷ್ಟ ಇಲ್ಲ. ಪ್ರಧಾನಿಯವರ ಜತೆ ಸಿಎಂಗೆ ಉತ್ತಮ ಬಾಂಧವ್ಯ ಇದೆ. ಚುನಾವಣೆಯಲ್ಲಿ ಯಡಿಯೂರಪ್ಪನವರೇ ಸಿಎಂ‌ ಅಂತ ಘೋಷಣೆ ಮಾಡಲಾಗಿದೆ. ಸಿಎಂ ಬದಲಾವಣೆ ಮಾಡಲು ಯಡಿಯೂರಪ್ಪ ಏನ್ ತಪ್ಪು ಮಾಡಿದ್ದಾರೆ? ಕೆಲವು ಶಾಸಕರ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು.

ಶಾಸಕ ನಿರಂಜನ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಇಂತಹ ಹೇಳಿಕೆ ನೀಡುವುದನ್ನು ಬಿಡಲಿ. ಕೋವಿಡ್​​​ಗೆ ಕೆಲಸ ಮಾಡಿ ಸಿದ್ದರಾಮಯ್ಯನವರೇ! ಮೈಸೂರು ಕಡೆ ಕೋವಿಡ್ ಹೆಚ್ಚಾಗುತ್ತಿದೆ, ಅತ್ತ ಗಮನ ಕೊಡಿ ಎಂದರು.

ಸಿಎಂಗೆ ದೆಹಲಿ ರಾಜಕೀಯ ಕಾರ್ಯದರ್ಶಿ ಶಂಕರ್ ಗೌಡ ಪಾಟೀಲ್ ಮಾತನಾಡಿ, ದೆಹಲಿಗೆ ಶಾಸಕರು, ಸಚಿವರು ಬರ್ತಾರೆ ಹೋಗ್ತಾರೆ. ದೆಹಲಿಗೆ ಬಿಜೆಪಿ ನಾಯಕರು ಹೋದರೆ ರಾಜಕೀಯ ಮಾಡಲು ಹೋಗುತ್ತಾರೆ ಅನ್ನೋದು ಸುಳ್ಳು. ದೆಹಲಿಗೆ ಹೋದವರು ನಿನ್ನೆ ಯಾರನ್ನೂ ಭೇಟಿ ಮಾಡಿಲ್ಲ. ಯಾವುದೋ ಬೇರೆ ಕೆಲಸಕ್ಕೆ ಅವರು ಹೋಗಿರಬಹುದು ಎಂದು ಸಿಪಿವೈ, ಬೆಲ್ಲದ್ ದೆಹಲಿ ಭೇಟಿ ಬಗ್ಗೆ ಶಂಕರ್ ಗೌಡ ಪಾಟೀಲ್ ಸಮರ್ಥನೆ ಮಾಡಿಕೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.