ETV Bharat / state

ಸಿಎಂ ಆಗ್ಬೇಕು ಎಂದ್ರೆ HDD ಮನೇಲಿ, PM ಸ್ಥಾನ ಬೇಕೆಂದರೆ ನೆಹರೂ ಮನೇಲಿ ಹುಟ್ಬೇಕು: ಅಶೋಕ್​​​ ವ್ಯಂಗ್ಯ - ಸಚಿವ ಅಶ್ವತ್ಥ್​​ ನಾರಾಯಣ್​​​

ರಾಜ್ಯ ರಾಜಧಾನಿ ತಲುಪಿರುವ ಬಿಜೆಪಿ ಪಕ್ಷದ ಜನಾರ್ಶೀವಾದ ಯಾತ್ರೆಯಲ್ಲಿ ಕಮಲಪಾಳಯದ ನಾಯಕರು ಕಾಂಗ್ರೆಸ್​ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಮೋದಿ ಸಾಧನೆ ಕೊಂಡಾಡಿರುವ ಬಿಜೆಪಿಗರು ಕಾಂಗ್ರೆಸ್​​​ 70 ವರ್ಷದಿಂದ ಮಾಡಲಾಗದ್ದನ್ನು ಬಿಜೆಪಿ 7 ವರ್ಷದಲ್ಲಿ ಮಾಡಿದೆ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್​ ಹೇಳ ಹೆಸರಿಲ್ಲದಂತೆ ನಾಶವಾಗಲಿದೆ ಎಂದು ಕಿಡಿಕಾರಿದರು.

bjp-leaders-statement-on-congress-injanashirvada-yatra
ಬಿಜೆಪಿ ಪಕ್ಷದ ಜನಾರ್ಶೀವಾದ ಯಾತ್ರೆ
author img

By

Published : Aug 19, 2021, 3:47 PM IST

ಬೆಂಗಳೂರು: ರಾಜ್ಯದಲ್ಲಿ ಸಿಎಂ ಆಗಬೇಕು‌ ಎಂದರೆ ದೇವೇಗೌಡರ ಮನೆಯಲ್ಲಿ ಹುಟ್ಟಬೇಕು, ‌ಪ್ರಧಾನಿ ಆಗಬೇಕು ಎಂದರೆ ನೆಹರು ಕುಟುಂಬದಲ್ಲಿ ಹುಟ್ಟಬೇಕು. ಆದರೆ, ಬಿಜೆಪಿಯಲ್ಲಿ ಹಾಗಲ್ಲ, ಸಮಾನ್ಯ ಕಾರ್ಯಕರ್ತರು ಸಿಎಂ, ಪಿಎಂ ಆಗಲಿದ್ದಾರೆ. ಅದೇ ಇತರ ಪಕ್ಷಕ್ಕೂ ನಮ್ಮ ಪಕ್ಷಕ್ಕೂ ಇರುವ ವ್ಯತ್ಯಾಸ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

ಬಿಜೆಪಿ ಪಕ್ಷದ ಜನಾರ್ಶೀವಾದ ಯಾತ್ರೆ

ನಗರದ ಜ್ಞಾನಜ್ಯೋತಿ ಆಡಿಟೋರಿಯಂನಲ್ಲಿ ನಡೆದ ಬಿಜೆಪಿ 'ಜನಾಶೀರ್ವಾದ ಯಾತ್ರೆ'ದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ದೇಶದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಪ್ರಾದೇಶಿಕ ಪಕ್ಷಕ್ಕಿಂತಲೂ ದುರ್ಬಲವಾಗಿದೆ. ಮೋದಿಗೆ ಪರ್ಯಾಯ ಯಾರು ಎನ್ನುವುದಕ್ಕೆ ಪ್ರತಿಪಕ್ಷಗಳಲ್ಲಿ ಉತ್ತರವಿಲ್ಲ. ಒಂದೊಂದು ರಾಜ್ಯದಲ್ಲಿ ಒಬ್ಬೊಬ್ಬ ಪ್ರಧಾನಿ ಅಭ್ಯರ್ಥಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ಸ್ಥಿತಿ ದಯನೀಯವಾಗಿದೆ, ರಾಜ್ಯದಲ್ಲಿಯೂ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದರು.

ಕೊರೊನಾ ವೇಳೆ ಮನವೋಹನ್ ಸಿಂಗ್ ಪ್ರಧಾನಿ ಆಗಿದ್ದರೆ ಏನು ಕಥೆಯಾಗುತ್ತಿತ್ತು. ನಡೆಯಲ್ಲ, ಮಾತನಾಡಲ್ಲ, ಬರೀ ಮೌನವಾಗಿರುತ್ತಿದ್ದರು. ಸೂತ್ರದ ಬೊಂಬೆಯಂತೆ ವರ್ತಿಸುತ್ತಿದ್ದರು. ಸೋನಿಯಾ ಬರೆದುಕೊಟ್ಟದ್ದು ಕ್ಯಾಬಿನೆಟ್ ನಲ್ಲಿ ಪಾಸ್ ಆಗಬೇಕಿತ್ತು ಎಂದು ವ್ಯಂಗ್ಯವಾಡಿದರು. ಕೊರೊನಾ ವ್ಯಾಕ್ಸಿನ್ ಅಭಿಯಾನ ಉತ್ತಮವಾಗಿದೆ, ಲಸಿಕಾ ಅಭಿಯಾನದಡಿ ಡಿಸೆಂಬರ್ ಒಳಗೆ ಎಲ್ಲರಿಗೂ ಸಂಪೂರ್ಣವಾಗಿ ಲಸಿಕೆ ನೀಡಲಾಗುತ್ತದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಬಿಜೆಪಿಯಿಂದ ಲ್ಯಾಂಡ್ ಮಾರ್ಕ್ ಕೊಡುಗೆ: ತಾತ, ಮಗಳು, ಮೊಮ್ಮಗ ಹೀಗೆ ಮೂರು ತಲೆಮಾರು ದೇಶವನ್ನು ಆಳಿದರು. ಆದರೆ, ಬೆಂಗಳೂರಿಗೆ ಮೆಟ್ರೋ ಕೊಟ್ಟಿದ್ದು ವಾಜಪೇಯಿ. ದಕ್ಷಿಣ ಭಾರತದಲ್ಲಿ ನಮ್ಮದು ಮೊದಲ ಮೆಟ್ರೋ, ನಮಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕೊಟ್ಟಿದ್ದು ವಾಜಪೇಯಿ, ಉಪನಗರ ರೈಲು ಕೊಟ್ಡಿದ್ದು ಮೋದಿ ಹೀಗೆ ಮೂರು ಪ್ರಮುಖ ಯೋಜನೆ ಬೆಂಗಳೂರಿಗೆ ಕೊಟ್ಟಿದ್ದು ಬಿಜೆಪಿ ಪ್ರಧಾನಿಗಳು ಮಾತ್ರ. ಕಾಂಗ್ರೆಸ್ ಬೆಂಗಳೂರಿಗೆ ಯಾವುದೇ ಮುಖ್ಯ ಯೋಜನೆ ಕೊಡಲಿಲ್ಲ ಎಂದು ಅಶೋಕ್ ಟೀಕಿಸಿದರು.

ನೆಹರೂ ಹುಕ್ಕಾಬಾರ್ ಹೇಳಿಕೆ ಸಮರ್ಥನೆ: ಸಿಟಿ ರವಿ ಹುಕ್ಕಾಬಾರ್ ಹೇಳಿಕೆ ವ್ಯಾಪಕ ಚರ್ಚೆ ಆಗುತ್ತಿದೆ, ಇದರ ಆರಂಭ ಮಾಡಿದ್ದು ನೀವೇ ಅಲ್ಲವೆ? ಶೌಚಾಲಯಕ್ಕೆ ಮೋದಿ, ವಾಜಪೇಯಿ ಹೆಸರಿಡಿ ಎಂದಿರಿ ಅದಕ್ಕೆ ಪ್ರತಿಯಾಗಿ ರವಿ ಹೀಗೆ ಹೇಳಿದ್ದಾರೆ, ನೀವೂ ಸರಿಯಾಗಿ ಹೇಳಿದ್ದರೆ ಅದಕ್ಕೆ ತಕ್ಕದಾಗಿ ಸರಿಯಾದ ಪ್ರತಿಕ್ರಿಯೆ ಬರುತ್ತಿತ್ತು, ಮೊದಲು ನೀವು ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಿರಿ ಎಂದು ಸಿಟಿ ರವಿ ಹೇಳಿಕೆಯನ್ನು ಅಶೋಕ್ ಸಮರ್ಥಿಸಿಕೊಂಡರು.

ಕಾಂಗ್ರೆಸ್ ಗಿಡದ ಕಳೆನಾಶ ಮಾಡಲಾಗಿದೆ: ದೇಶದಲ್ಲಿ ಕಾಂಗ್ರೆಸ್ ಗಿಡದ ಕಳೆನಾಶ ಮಾಡಲಾಗಿದೆ. ಇನ್ನು 15 ವರ್ಷ ಕಾಂಗ್ರೆಸ್ ಪಕ್ಷ ದೇಶದಲ್ಲಿ ತಲೆ ಎತ್ತಲು ಸಾಧ್ಯವಿಲ್ಲ. ನೂತನ ಸಿಎಂ ಬೊಮ್ಮಾಯಿ ಅವರಿಂದ ಹೊಸತನದ ಆಡಳಿತ ನಿರೀಕ್ಷೆ ಇದೆ. ಅಧಿಕಾರಕ್ಕೆ ಬರುತ್ತಿದ್ದಂತೆ ಬಡವರ ಪರ ಕೆಲಸ‌ ಮಾಡಿದ್ದಾರೆ. ಬೆಂಗಳೂರಿಗೆ ನಗರೋತ್ಥಾನ ಯೋಜನೆಯಡಿ ಎಂಟು ಸಾವಿರ ಕೋಟಿ ಕೊಡುವುದಾಗಿ ಸ್ವಾತಂತ್ರ್ಯ ದಿನದಂದು ಘೋಷಣೆ ಮಾಡಿದ್ದಾರೆ. ಕೇಂದ್ರ, ರಾಜ್ಯದಲ್ಲು ಬಿಜೆಪಿ ಪರಿವರ್ತನೆ ತರಲು ಹೊರಟಿದೆ ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.

60 ಆಗದೇ ಇರುವುದನ್ನು 7 ವರ್ಷದಲ್ಲಿ ಮಾಡಿದ್ದೇವೆ: ಸಚಿವ ಅಶ್ವತ್ಥ​​ ನಾರಾಯಣ​​​

ಸಚಿವ ಅಶ್ವತ್ಥನಾರಾಯಣ್ ಮಾತನಾಡಿ, ಕೇಂದ್ರ ಸರ್ಕಾರ ಹಲವಾರು ಸುಧಾರಣೆ ತಂದಿದೆ. ಕಾಂಗ್ರೆಸ್ 60 ವರ್ಷದಲ್ಲಿ ಆಗದೇ ಇರುವುದನ್ನು ಕೇವಲ 7 ವರ್ಷದಲ್ಲಿ ತಂದಿದ್ದಾರೆ. ಆದರೆ ಕಾಂಗ್ರೆಸ್ ಇಂದು ಜನತೆಯ ದಿಕ್ಕು ತಪ್ಪಿಸುವ, ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಾಣದ ಹಂಗು ಬಿಟ್ಟು ಜನರ ಮಧ್ಯದಲ್ಲಿ ಕೋವಿಡ್ ಕೆಲಸ ಮಾಡಲಾಗುತ್ತಿದ್ದೇವೆ, ಆದರೆ ಲಸಿಕೆ ಕೊಡುವ ಕೆಲಸದಲ್ಲಿಯೂ ಕಾಂಗ್ರೆಸ್ ಗೊಂದಲ ಮೂಡಿಸುವ ಕೆಲಸವನ್ನು ಮಾಡಿದರು.

ಪ್ರತಿಪಕ್ಷಗಳೇ ಹಲವಾರು ವರ್ಷ ಅಧಿಕಾರಿ ನಡೆಸಿದ್ದವರು. ಅವರೇ ಸಮಾಜದ ದಿಕ್ಕು ತಪ್ಪು ತಲುಪಿಸುವ ಕೆಲಸ ಮಾಡಿದರು‌. ಯಾವ ಕೀಳು ಮಟ್ಟಕ್ಕೆ ಬೇಕಾದರೂ ಇಳಿಯುವ ಪ್ರತಿಪಕ್ಷಗಳು ದೇಶದಲ್ಲಿವೆ, ಅವರಿಗೆ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಏಕಕಾಲಕ್ಕೆ 135 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ: ಇಂದು ಲಸಿಕೆ ಎಲ್ಲಿದೆ ಎನ್ನುತ್ತಿದ್ದಾರೆ. ಆದರೆ 135 ಕೋಟಿ ಜನತೆಗೆ ಏಕಕಾಲಕ್ಕೆ ಲಸಿಕೆ ನೀಡಲು ಯಾವ ದೇಶಕ್ಕೂ ಸಾಧ್ಯವಿಲ್ಲ. ಆಸ್ಟ್ರೇಲಿಯಾ, ರಷ್ಯಾದಲ್ಲೂ ಲಸಿಕೆ ಶೇ. 20 ಮಾತ್ರ ಆಗಿದೆ. ನಮ್ಮಲ್ಲಿ ಶೇ.60 ರಷ್ಟು ಜನರಿಗೆ ಮೊದಲ ಡೋಸ್ ಕೊಡಲಾಗಿದೆ. ದೊಡ್ಡ ಸಂಖ್ಯೆಯ ಲಸಿಕೆ ನಮಗೆ ಸವಾಲಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಲಸಿಕೆ ಕೊಟ್ಟಿದ್ದೇವೆ, ದೇಶದ ಎಲ್ಲರಿಗೂ ಮೊದಲ ಡೋಸ್ ಡಿಸೆಂಬರ್ ಒಳಗೆ ಕೊಡುವ ಗುರಿ ತಲುಪಲಿದ್ದೇವೆ ಎಂದರು.

ನೂತನ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ದಿಕ್ಸೂಚಿ: ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲಾಗುತ್ತಿದೆ.‌ ದೇಶಕ್ಕೆ‌ದೊಡ್ಡ ದಿಕ್ಸೂಚಿ ಆಗಲಿದೆ. ವಿದ್ಯಾರ್ಥಿಗಳಿಗೆ ವಿರುದ್ಧವಾದ ನೀತಿ ಇತ್ತು, ಆದರೆ, ಇನ್ಮುಂದೆ ವಿದ್ಯಾರ್ಥಿಗಳಿಗೆ ಪೂರಕವಾದ ನೀತಿ ಇರಲಿದೆ. ಶಿಕ್ಷಣ ಮತ್ತು ಕೌಶಲ್ಯದ ಮೂಲಕ ಸಬಲೀಕರಣ ಸಾಧ್ಯ. ಗುಣಮಟ್ಟದ ಶಿಕ್ಷಣ ಕೊಡುವವರೆಗೂ ಸಮಾಜದ ಪ್ರಗತಿ ಸಾಧ್ಯವಿಲ್ಲ.

ಶಿಕ್ಷಣ ಕ್ಷೇತ್ರದಲ್ಲಿ ನಾವು ಬಹಳ ದೂರು ಇದ್ದೇವೆ, ವಿಶ್ವ ಮಟ್ಟದ ಸಂಸ್ಥೆಗಳಲ್ಲಿ ಬೆರಳೆಣಿಕೆ ಸಂಸ್ಥೆ ಮಾತ್ರ ಇವೆ. ಹಾಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ ನಮಗೆ ದೊಡ್ಡ ಶಕ್ತಿಯಾಗಲಿದೆ. ನಿಜವಾದ ಸ್ವಾತಂತ್ರ್ಯ, ಅಭಿವೃದ್ಧಿ ಕಾಣಬೇಕಾದರೆ ಶಿಕ್ಷಣದಲ್ಲಿ ಅಭಿವೃದ್ಧಿ ಸಾಧಿಸಬೇಕು ಎಂದರು.

ಕಾಂಗ್ರೆಸ್ ಮುಳುಗಿರುವ ಹಡಗು: ಸಂಸದ ಪಿ.ಸಿ. ಮೋಹನ್​​

ಹೊಸದಾಗಿ ಸಚಿವರಾದವರನ್ನು ಲೋಕಸಭೆಯಲ್ಲಿ ಪ್ರಧಾನಿಗಳು ಪರಿಚಯಿಸುವುದು ಸಂಪ್ರದಾಯ. ಆದರೆ, ಆ ಅವಕಾಶ ಮಾಡಿಕೊಡದ ಕಾಂಗ್ರೆಸ್​​​ಗೆ ತಕ್ಕ ಪಾಠ ಕಲಿಸಲು ಜನಾಶೀರ್ವಾದ ಯಾತ್ರೆ ಮಾಡಲಾಗುತ್ತಿದೆ ಎಂದು ಸಂಸದ ಪಿಸಿ ಮೋಹನ್ ಹೇಳಿದರು.

ಸದನದಲ್ಲಿ ಕೊರೊನಾ, ಗಡಿ ವಿಚಾರ ಪ್ರಸ್ತಾಪ ಮಾಡದೇ ಅಧಿವೇಶನದ ಸಮಯ ವ್ಯರ್ಥ ಮಾಡಿದ್ದಾರೆ. ಜಗತ್ತೇ ಮೆಚ್ಚುವಂತೆ ಮೋದಿ ಕೊರೊನಾ ನಿರ್ವಹಣೆ ಉತ್ತಮವಾಗಿ ಮಾಡಿದ್ದು, ಅದನ್ನು ಸಹಿಸದೆ ಕಾಂಗ್ರೆಸ್ ಕಲಾಪ ಹಾಳು ಮಾಡಿತು.

ದೇಶದ ಜನ ಕಾಂಗ್ರೆಸ್ ಅನ್ನು ನಂಬಲ್ಲ, ಕಾಂಗ್ರೆಸ್ ಮುಳುಗುತ್ತಿರುವ ಹಡಗಲ್ಲ, ಮುಳುಗಿರುವ ಹಡಗಾಗಿದೆ. ಮೋದಿ ಹಿಂದುಳಿದ ವರ್ಗಕ್ಕ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮೋದಿ ಆದ್ಯತೆ ನೋಡಿ ಇಲ್ಲಿ ಡಿ.ಕೆ ಶಿವಕುಮಾರ್ ಹಿಂದುಳಿದ ವರ್ಗದ ಸಭೆ ಮಾಡಲು ಹೊರಟಿದ್ದಾರೆ. ಆದರೆ, ಅವರನ್ನು ಜನ ನಂಬಲ್ಲ ಎಂದು ಟೀಕಿಸಿದರು.

ನೆರೆ ರಾಷ್ಟ್ರಗಳ ಜೊತೆ ಒಳಗಿನ ಶಕ್ತಿಗಳು ಕೈಜೋಡಿಸಿವೆ: ಕೇಂದ್ರ ಸಚಿವ ರಾಜೀವ್​ ಚಂದ್ರಶೇಖರ್​​​

ಸಂಸತ್ ನಲ್ಲಿ ಮೊನ್ನೆ ನಡೆದದ್ದು ರಾಜಕಾರಣವಲ್ಲ, ದುರುದ್ದೇಶಪೂರಕ ಅಡಚಣೆ, ಸುಳ್ಳುಗಳ ಅಬ್ಬರ. ದೇಶದ ಏಳಿಗೆಯನ್ನು ಸಹಿಸದ ಪಟ್ಡಭದ್ರ ಹಿತಾಸಕ್ತಿಗಳ ಸಂಚು. ದೇಶವನ್ನು ಅದಮಿಡಲು ಉತ್ತರ ಮತ್ತು ಪಶ್ಚಿಮದಲ್ಲಿರುವ ನೆರೆ ರಾಷ್ಟ್ರಗಳ ಜತೆಗೆ ಒಳಗಿನ ಶಕ್ತಿಗಳು ಕೈಜೋಡಿಸಿವೆ.

ಇಂತಹ ಕುತ್ಸಿಕತೆಯ ರಾಜಕಾರಣ, ಪಿತೂರಿಗಳ ಬಗ್ಗೆ ಪಕ್ಷದ ಕಾರ್ಯಕರ್ತರು ಜಾಗೃತರಾಬೇಕು. ಪ್ರಧಾನಿ ಮೋದಿ ಕೈಬಲಪಡಿಸಲು, ಭವಿಷ್ಯತ್ತಿನ ಭಾರತ ರೂಪಿಸುವ ನಿಟ್ಟಿನಲ್ಲಿ ಸುಳ್ಳು, ಕಪಟ, ಪಟ್ಟಭದ್ರ ಹಿತಾಸಕ್ತಿ ರಾಜಕಾರಣವನ್ನು ಸೋಲಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಕರೆ ನೀಡಿದರು.

ರಾಜ್ಯಕ್ಕೆ ಸಹಕಾರ: ನನ್ನ ಖಾತೆಯಲ್ಲಿ ಬೆಂಗಳೂರು, ಕರ್ನಾಟಕಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ, ಎಲೆಕ್ಟ್ರಾನಿಕ್ ಉತ್ಪಾದನೆಗೆ ಉತ್ತಮ ಅವಕಾಶವಿದೆ, ಉದ್ಯೋಗ ಸೃಷ್ಟಿಯಾಗಲಿದೆ. ಕರ್ನಾಟಕಕ್ಕೆ ಕೌಶಲ್ಯಾಭಿವೃದ್ದಿಯಲ್ಲಿ ಉಜ್ವಲ ಭವಿಷ್ಯವಿದೆ. ಕೌಶಲ್ಯ ವೃದ್ಧಿಗೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಅಗತ್ಯ ಸಹಕಾರ ನೀಡಲಿದ್ದೇವೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.

ಇಂದು ನಾಲ್ಕನೇ ದಿನದ ಜನಾಶೀರ್ವಾದ ಯಾತ್ರೆ ಮಾಡುತ್ತಿದ್ದೇನೆ, ಹುಬ್ಬಳ್ಳಿಯಿಂದ ಆರಂಭಗೊಂಡು ಬೆಂಗಳೂರು ತಲುಪಿದ್ದೇನೆ. ಜನಾಶೀರ್ವಾದ ಯಾತ್ರೆ ವೈಯಕ್ತಿಕವಾಗಿ ನನ್ನ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ, ಯಾತ್ರೆಯಲ್ಲಿ ಕಾರ್ಯಕರ್ತರ ಬದ್ದತೆ ನೋಡಿದ್ದೇನೆ, ಪಕ್ಷದ ಶಕ್ತಿ ಕಾರ್ಯಕರ್ತರ ಉತ್ಸಾಹವೇ ಆಗಿದೆ ಎಂದರು.

ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ರಾಜೀವ್​ ಚಂದ್ರಶೇಖರ್​

ಕಳೆದ 75 ವರ್ಷದಲ್ಲಿ ದೇಶ ಎಷ್ಟು ಪ್ರಗತಿಯಾಗಿದೆ, ಇನ್ನು ಭವಿಷ್ಯಕ್ಕೆ ಬೇಕಾದ ಪ್ರಗತಿ ಏನು ಎನ್ನುವ ಚಿಂತನೆ ಅಗತ್ಯ. ಸ್ವಾತಂತ್ರ್ಯ ನಂತರದ 75 ವರ್ಷದಲ್ಲಿ 60 ವರ್ಷ ಕಾಂಗ್ರೆಸ್ ಪಕ್ಷದ ಆಡಳಿತ ನಡೆದಿದೆ. 7 ವರ್ಷ ಮೋದಿ ಸರ್ಕಾರ ನಡೆದಿದೆ, ಈ ಎರಡು ಆಡಳಿತವನ್ನು ಹೋಲಿಕೆ ಮಾಡಿ ನೋಡಬೇಕು. ರಾಷ್ಟ್ರೀಯ ಏಕತೆ ವಿಷಯದಲ್ಲಿ ಕಳೆದ 60 ವರ್ಷದಲ್ಲಿ ಕಾಂಗ್ರೆಸ್ ಗೆ ಬದ್ದತೆ ಇರಲಿಲ್ಲ.

ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಆರ್ಕಟಿಕ್ 370 ಬಗ್ಗೆ ಅವರ ನಿಲುವೇನಾಗಿತ್ತು, ರಾಮಮಂದಿರ ವಿಚಾರದಲ್ಲಿ ಏನಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ, ಆದರೆ ಕೇವಲ ಏಳು ವರ್ಷದಲ್ಲಿ ಆ ಎರಡು ಸಮಸ್ಯೆ ಪರಿಹಾರಗೊಂಡಿದೆ.

ಹಿಂದೆ ಒಂದು ರೂಪಾಯಿಯಲ್ಲಿ 85 ಪೈಸೆ ನಷ್ಟವಾಗಿ ಕೇವಲ15 ಪೈಸೆ ಜನರಿಗೆ ತಲುಪುತ್ತಿತ್ತು ಆದರೆ, ಮೋದಿ ಸರ್ಕಾರದಲ್ಲಿ ಎಲ್ಲ ಡಿಜಿಟಲ್ ಮಾಡಿದ್ದು ಪ್ರತಿ ಪೈಸೆಯೂ ಜನರಿಗೆ ತಲುಪುತ್ತಿದೆ, ಎಲ್ಲಿಯೂ ಹಣ ಪೋಲಾಗುತ್ತಿಲ್ಲ, ಭ್ರಷ್ಟಾಚಾರ ನಡೆಯುತ್ತಿಲ್ಲ, 60 ವರ್ಷದಲ್ಲಿ ಎಣಿಸಲಾಗದ ಭ್ರಷ್ಟಾಚಾರ ಆರೋಪ ಬಂದಿದೆ. ಆದರೆ ಮೋದಿ ಆಳ್ವಿಕೆಯ 7 ವರ್ಷದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಬಂದಿಲ್ಲ ಎಂದರು.

25 ವರ್ಷ ಬಿಜೆಪಿ ಆಡಳಿತ ಬೇಕು ಎನ್ನುವ ಕೂಗು ಜನರಿಂದ ಬರುತ್ತಿದೆ. ಆದರೆ, ಕೆಲವು ಶಕ್ತಿಗಳು ದೇಶದ ಅಭಿವೃದ್ಧಿಗೆ, ವಿಶ್ವಮಟ್ಟದಲ್ಲಿ ಮುನ್ನುಗ್ಗುವ ಪ್ರಯತ್ನಕ್ಕೆ ಅಡ್ಡಗಾಲು ಹಾಕಲು ಉದ್ದೇಶಪೂರ್ವಕ ಪ್ರಯತ್ನ ನಡೆಸುತ್ತಿವೆ, ನಾರ್ತ್ ನಲ್ಲಿ ಒಂದು, ವೆಸ್ಟ್ ಒಂದು ಶಕ್ತಿ ಇದೆ ಎಂದು ಪರೋಕ್ಷವಾಗಿ ಪ್ರತಿಪಕ್ಷ ನಾಯಕರ ಹೆಸರು ಉಲ್ಲೇಖಿಸದೇ ವಾಗ್ದಾಳಿ ನಡೆಸಿದರು.

ಸನ್ಮಾನ: ಇನ್ನು ಕಾರ್ಯಕ್ರಮದಲ್ಲಿ ಕೇಂದ್ರದ ನೂತನ ಸಚಿವ ರಾಜೀವ್ ಚಂದ್ರಶೇಖರ್​​​​ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವರಾದ ವಿ.ಸೋಮಣ್ಣ, ಗೋಪಾಲಯ್ಯ,ಮುನಿರತ್ನ,ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜ್ ಉಪಸ್ಥಿತರಿದ್ದರು.

ಕೊರೊನಾ ನಿಯಮ ಉಲ್ಲಂಘನೆ: ಬಿಜೆಪಿಯ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಸಂಪೂರ್ಣ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಲಾಯಿತು. ವೇದಿಕೆಯಲ್ಲಿ ಹಾಗೂ ವೇದಿಕೆಯ ಕೆಳಭಾಗಲ್ಲಿ ಅಂತರ ಕಾಯ್ದುಕೊಳ್ಳದೇ ನಿಯಮವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಯಿತು. ಆಡಳಿತ ಪಕ್ಷದಿಂದಲೇ ಈ ರೀತಿ ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿರುವುದು ಟೀಕೆಗೆ ಗುರಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.