ETV Bharat / state

ಚಿಂಚೋಳಿ ಗೆದ್ದ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ, ಈಗಲೂ ಆ ಸಂದರ್ಭ ಬರಲಿದೆ: ಸೋಮಣ್ಣ

1972 ರಿಂದ ಚಿಂಚೋಳಿಯಲ್ಲಿ ನಡೆದಿರುವ ವಿದ್ಯಮಾನ ಗಮನಿಸಿದರೆ ಕಾಕತಾಳಿಯವೋ, ಪವಾಡವೋ, ನಂಬಿಕೆಯೋ ಗೊತ್ತಿಲ್ಲ. ಅಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದೆ. ಈಗಲೂ ಕೂಡ ಸುಸೂತ್ರವಾಗಿ ನಮ್ಮ ಸರ್ಕಾರ ರಚನೆಯಾಗುವ ಸಂದರ್ಭ, ಸನ್ನಿವೇಶ ಸೃಷ್ಠಿಯಾಗಲಿದೆ ಎಂದರು.

author img

By

Published : May 24, 2019, 4:53 PM IST

ಮಾಜಿ ಸಚಿವ ವಿ.ಸೋಮಣ್ಣ

ಬೆಂಗಳೂರು: ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೆಯೋ ಆ ಪಕ್ಷದ ಸರ್ಕಾರ ರಚನೆಯಾಗುವ ಪರಿಪಾಠ ಇದ್ದು, ಈಗಲೂ ಅದೇ ಸಂದರ್ಭ ಬರಲಿದೆ ಎನ್ನುವ ಮೂಲಕ ರಾಜ್ಯದಲ್ಲಿ ಆದಷ್ಟು ಬೇಗ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಮ್ಮ ಕೆಲಸ ಮಾಡಿದ್ದೇವೆ. ಚುನಾವಣೆಯಲ್ಲಿ ಯಾರು ಯಾರಿಗೂ ದೊಡ್ಡವರಲ್ಲ. ಮತದಾರರೇ ದೊಡ್ಡವರು. ಜನರ ತೀರ್ಪು ಅಂತಿಮ. ನಾನು ತುಮಕೂರು ಉಸ್ತುವಾರಿ ವಹಿಸಿಕೊಂಡಿದ್ದೆ. ನಮ್ಮ ಮುಂದೆ ಯಾರು ನಿಂತಿದ್ದರು ಎನ್ನುವುದು ಗೌಣ. ಈಗ ಅವರು ಹಾಸನದಲ್ಲಿ ನಿಲ್ಲುವುದಾದರೆ ಬೇಡ ಅನ್ನುವುದಿಲ್ಲ ಎಂದು ದೇವೇಗೌಡರ ಮತ್ತೊಂದು ಸ್ಪರ್ಧೆಯನ್ನು ಟೀಕಿಸಿದರು.

ಮಾಜಿ ಸಚಿವ ವಿ.ಸೋಮಣ್ಣ

ಯಾರು ಯಾರು ಏನೇನು ಮಾಡಿರುತ್ತಾರೋ ಅದರ ಫಲವನ್ನು ಅವರೇ ಅನುಭವಿಸಬೇಕು. 2009 ರಲ್ಲಿ ನನಗೂ ಹೀಗೇ ಆಗಿತ್ತು. ವಿಧಿ ನಿಯಮಕ್ಕೆ ತಲೆಬಾಗಲೇಬೇಕು. ಒಂದು ಹುಲ್ಲು ಕಡ್ಡಿ ಕೂಡ ನೆರವಿಗೆ ಬರುತ್ತದೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಇಲ್ಲದಿದ್ದರೆ ಹೀಗೆ ಆಗುತ್ತದೆ ಎಂದು ಹಿಂದೆ ದೇವೇಗೌಡರಿಂದ ಆಗಿದ್ದ ಕಹಿ ಘಟನೆಯನ್ನು ಮೆಲುಕು ಹಾಕಿದರು.

ಲೋಕಸಭಾ ಚುನಾವಣೆಯಲ್ಲಿ ಜನ ಇಷ್ಟೆಲ್ಲಾ ತೀರ್ಮಾನ ಕೊಟ್ಟಿದ್ದರೂ ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುತ್ತೇವೆ ಎಂದರೆ ನಾವೇನೂ ಮಾಡಲು ಸಾಧ್ಯವಿಲ್ಲ. ಅದಕ್ಕೂ ಕಾಲ ಬರಲಿದೆ. ಯಾವಾಗ ಏನು ಆಗಬೇಕೋ ಅದು ಆಗಲಿದೆ ಎಂದು ಸೋಮಣ್ಣ ಹೇಳಿದರು.

Intro:ಬೆಂಗಳೂರು:ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಪಕ್ಷ ಗೆಲ್ಲುತ್ತದೆಯೋ ಆ ಪಕ್ಷದ ಸರ್ಕಾರ ರಾಜ್ಯದಲ್ಲಿ ರಚನೆಯಾಗುವ ಪರಿಪಾಠ ಇದ್ದು ಈಗಲೂ ಅದೇ ಸಂದರ್ಭ ಬರಲಿದೆ ಎಂದು ರಾಜ್ಯದಲ್ಲಿ ಆದಷ್ಟು ಬೇಗ ಬಿಜೆಪಿ ಸರ್ಕಾರ ರಚನೆಯಾಗುತ್ತದೆ ಎಂದು ಮಾಜಿ ಸಚಿವ ವಿ.ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Body:
ಯಡಿಯೂರಪ್ಪ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ನಮ್ಮ ಕೆಲಸ ಮಾಡಿದ್ದೇವೆ, ಚುನಾವಣೆಯಲ್ಲಿ ಯಾರು ಯಾರಿಗೂ ದೊಡ್ಡವರಲ್ಲ ಮತದಾರನೇ ದೊಡ್ಡವನು, ಅವನ ತೀರ್ಪು ಅಂತಿಮ, ನಾನು ತುಮಕೂರು ಉಸ್ತುವಾರಿ ವಹಿಸಿಕೊಂಡಿದ್ದೆ, ನಮ್ಮ ಮುಂದೆ ಯಾರು ನಿಂತಿದ್ದರು ಎನ್ನುವುದು ಗೌಣ ಈಗ ಅವರು ಹಾಸನದಲ್ಲಿ ನಿಲ್ಲುವುದಾದರೆ ಬೇಡ ಅನ್ನುವುದಿಲ್ಲ ಎಂದು ದೇವೇಗೌಡರ ಮತ್ತೊಂದು ಸ್ಪರ್ಧೆಯನ್ನು ಟೀಕಿಸಿದರು.

ಯಾರು ಯಾರು ಏನೇನು ಮಾಡಿರುತ್ತಾರೋ ಅದರ ಫಲವನ್ನು ಅವರೇ ಅನುಭವಿಸಬೇಕು ,2009 ರಲ್ಲಿ ನನಗೂ ಹೀಗೇ ಆಗಿತ್ತು, ವಿಧಿ ನಿಯಮ ಭಗವಂತ ಕೊಟ್ಟಿದಕ್ಕೆ ತಲೆಬಾಗಲೇಬೇಕು, ಒಂದು ಹುಲ್ಲು ಕಡ್ಡಿ ಕೂಡ ನೆರವಿಗೆ ಬರುತ್ತದೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು, ಇಲ್ಲಿದಿದ್ದರೆ ಹೀಗೆ ಆಗುತ್ತದೆ ಎಂದು ಹಿಂದೆ ದೇವೇಗೌಡರಿಂದ ಆಗಿದ್ದ ಕಹಿ ಘಟನೆಯನ್ನು ಮೆಲುಕು ಹಾಕಿದರು.

ಲೋಕಸಭಾ ಚುನಾವಣೆಯಲ್ಲಿ ಜನ ಇಷ್ಟೆಲ್ಲಾ ತೀರ್ಮಾನ ಕೊಟ್ಟಿದ್ದರೂ ನಾವು ಅಧಿಕಾರಕ್ಕೆ ಅಂಟಿಕೊಂಡು ಕೂರುತ್ತೇವೆ ಎಂದರೆ ನಾವೇನೂ ಮಾಡಲು ಸಾಧ್ಯವಿಲ್ಲ ಅದಕ್ಕೂ ಕಾಲ ಬರಲಿದೆ ಯಾವಾಗ ಏನು ಆಗಬೇಕೋ ಅದು ಆಗಲಿದೆ ಎಂದು ಸೋಮಣ್ಣ ಹೇಳಿದರು.

1972 ರಿಂದ ಚಿಂಚೋಳಿಯಲ್ಲಿ ನಡೆದಿರುವ ವಿದ್ಯಮಾನ ಗಮನಿಸಿದರೆ ಕಾಕತಾಳೀಯವೋ,ಪವಾಡವೋ,ನಂಬಿಕೆಯೋ ಅಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದೆ ಈಗಲೂ ಕೂಡ ಸುಸೂತ್ರವಾಗಿ ನಮ್ಮ ಸರ್ಕಾರ ರಚನೆಯಾಗುವ ಸಂದರ್ಭ,ಸನ್ನಿವೇಶ ಸೃಷ್ಠಿಯಾಗಲಿದೆ ಎಂದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.