ETV Bharat / state

ನಾಳೆ 'ಭಾರತ್​ ಬಂದ್'​: ರೈತ ಒಕ್ಕೂಟಗಳ ಕರೆಗೆ ವಿವಿಧ ಸಂಘಟನೆಗಳ ಬೆಂಬಲ - Bharat Bandh on March 26

ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ದೆಹಲಿಯ ಗಡಿ ಭಾಗದಲ್ಲಿ ನಿರಂತರವಾಗಿ ಮುಂದುವರೆದಿರುವ ರೈತರ ಪ್ರತಿಭಟನೆ ನಾಳೆಗೆ ನಾಲ್ಕು ತಿಂಗಳು ಪೂರೈಸಲಿದೆ. ಈ ಹಿನ್ನೆಲೆ ದೇಶವ್ಯಾಪಿ ಬಂದ್​ಗೆ ಸಂಯುಕ್ತ ಕಿಸಾನ್​ ಮೋರ್ಚಾ ಕರೆ ನೀಡಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಹಲವಾರು ಸಂಘಟನೆಗಳು ತಮ್ಮ ನೈತಿಕ ಬೆಂಬಲವನ್ನು ಸೂಚಿಸಿವೆ.

bharath-bundh-on-march-26-all-you-need-to-know
ಬಡಗಲಪುರ ನಾಗೇಂದ್ರ
author img

By

Published : Mar 25, 2021, 5:52 PM IST

Updated : Mar 25, 2021, 6:31 PM IST

ಬೆಂಗಳೂರು: ಕೇಂದ್ರ ಸರ್ಕಾರ ಭೂ ಸುಧಾರಣಾ ಮಸೂದೆಗಳನ್ನು ವಾಪಸ್​ ಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ನಾಳೆ ಭಾರತ್​ ಬಂದ್​ಗೆ ನಡೆಸಲಿವೆ. ಈ ಹಿನ್ನೆಲೆ ಕರ್ನಾಟಕದಲ್ಲಿ ಸ್ವಯಂಪ್ರೇರಿತ ಬಂದ್​ಗೆ ಕರೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರದ ವಿರುದ್ಧ ಶವಯಾತ್ರೆ ಮಾಡಿ ಪ್ರತಿಭಟಿಸುವುದಾಗಿ ರಾಜ್ಯ ರೈತ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

ಭಾರತ್​ ಬಂದ್​ ಕರೆಗೆ ವಿವಿಧ ಸಂಘಟನೆಯ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ

ಪ್ರತಿಭಟನೆಯ ರೂಪುರೇಷೆಯ ಕುರಿತು ನಗರದಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ 10 ಗಂಟೆಗೆ ಟೌನ್​ಹಾಲ್​ನಿಂದ ಶವಯಾತ್ರೆ ನಡೆಸಲಾಗುತ್ತೆ. ನಂತರ ಮೈಸೂರು ಬ್ಯಾಂಕ್ ಸರ್ಕಲ್​ನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನಾಯಂಡಹಳ್ಳಿ, ಆನೇಕಲ್​ ಸುತ್ತಮುತ್ತ ಭಾಗಗಳಲ್ಲೂ ಬಂದ್ ನಡೆಯಲಿದೆ. ಕಡಿಮೆ ಸಮಯದಲ್ಲೇ ಬಂದ್​ಗೆ ಕರೆ ನೀಡಲಾಗಿದ್ರೂ ಇದು ಯಶಸ್ವಿಯಾಗಲಿದೆ. ಸಾರ್ವಜನಿಕರು ರೈತರ ಪರವಾಗಿ ನಿಂತು ಬಂದ್​ಗೆ ಬೆಂಬಲ ನೀಡಬೇಕೆಂದು ಎಂದು ವಿನಂತಿಸಿದ್ದಾರೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ನಾಳೆಗೆ 4 ತಿಂಗಳು ಪೂರೈಸಲಿದೆ. ಹೀಗಾಗಿ, ನಾಳೆ ( ಮಾರ್ಚ್​ 26) ಭಾರತ್​ ಬಂದ್​ಗೆ ಕಿಸಾನ್​ ಸಂಯುಕ್ತ ಮೋರ್ಚಾ ಕರೆ ನೀಡಿದೆ. ಈ ಕುರಿತು ವಿವಿಧ ಸಂಘಟನೆಯ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಬಂದ್​ಗೆ ನೈತಿಕ ಬೆಂಬಲ ನೀಡುತ್ತೇವೆ: ಕೋವಿಡ್ ಹಿನ್ನೆಲೆ ಆಟೋ‌ ಚಾಲಕರಂತೆಯೇ ಬೀದಿಬದಿ ವ್ಯಾಪಾರಿಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ರೈತರ ಹೋರಾಟಕ್ಕೆ ಸದಾ ನಮ್ಮ ಬೆಂಬಲ ಇರುತ್ತದೆ. ರೈತರು ಇದ್ರೆ ಬೀದಿಬದಿ ವ್ಯಾಪಾರಿಗಳು ವ್ಯಾಪಾರ ಮಾಡಲು‌ ಸಾಧ್ಯ. ರೈತರ ಹೋರಾಟಕ್ಕೆ ಜಯವಾಗಲಿ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವರ ಬೆಂಬಲಕ್ಕೆ ನಿಂತುಕೊಳ್ಳಬೇಕು. ರೈತರ ಬಂದ್​ಗೆ ನಾವು ನೈತಿಕ ಬೆಂಬಲ ನೀಡುತ್ತೇವೆ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ.

ಸಂಚಾರ ನಿಲ್ಲಿಸಿ ಬಂದ್​ಗೆ ಬೆಂಬಲಿಸಲು ಸಾಧ್ಯವಿಲ್ಲ: ಕೋವಿಡ್-19 ಹಿನ್ನೆಲೆ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ, ಸಂಚಾರ ನಿಲ್ಲಿಸಿ ಬಂದ್​ಗೆ ಬೆಂಬಲ ಸೂಚಿಸಲು ಸಾಧ್ಯವಿಲ್ಲ. ಆದ್ದರಿಂದ, ರೈತರು ಕರೆ ನೀಡಿರುವ ಬಂದ್​ಗೆ ನೈತಿಕ ಬೆಂಬಲವನ್ನಷ್ಟೇ ನೀಡುತ್ತೇವೆ ಎಂದು ಪೀಸ್ ಆಟೋ ಚಾಲಕರ ಸಂಘಟನೆಯ ಅಧ್ಯಕ್ಷ ರಘು ಹೇಳಿದ್ದಾರೆ.

ವಿನೂತನ ಪ್ರತಿಭಟನೆ ಮೂಲಕ ಬಂದ್​ಗೆ ಬೆಂಬಲ: ವಾಟಾಳ್​ ನಾಗರಾಜ್​

ಕೇಂದ್ರದ ಕೃಷಿ ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ಸಾಕಷ್ಟು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರೈತರ ಬೇಡಿಕೆಗಳನ್ನ ಈಡೇರಿಸುತ್ತಿಲ್ಲ. ಆದ್ದರಿಂದ, ರೈತ ಸಮುದಾಯ ಭಾರತ್ ಬಂದ್​ಗೆ ಕರೆ ಕೊಟ್ಟಿದೆ. ನಾವು ಭಾರತ್ ಬಂದ್​ಗೆ ಸಂಪೂರ್ಣ ಬೆಂಬಲ ಸೂಚಿಸುತ್ತೇವೆ. ರೈತರ ಪರವಾಗಿ ಯಾವಾಗಲೂ ಇರುತ್ತೇವೆ. ನಾಳೆ ಮೆಜೆಸ್ಟಿಕ್​ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 11.30 ಕ್ಕೆ ವಿನೂತನ ಪ್ರತಿಭಟನೆ ಮಾಡುವ ಮೂಲಕ ಬೆಂಬಲ ಸೂಚಿಸಲಿದ್ದೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಓದಿ: ಭಾರತ ಬಂದ್​ಗೆ ವಿವಿಧ ಸಂಘಟನೆಗಳಿಂದ ಬೆಂಬಲ: ರೈತ ಮುಖಂಡ ಸಿದ್ದಣ್ಣ ತೇಜಿ

Last Updated : Mar 25, 2021, 6:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.