ETV Bharat / state

ಬೆಂಗಳೂರು ಟೆಕ್ಕಿಗಳೇ ಎಚ್ಚರ: ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಕಂಪನಿಗೇ ಬರುತ್ತೆ ದೂರು

ಸಂಚಾರ ನಿಯಮ ಉಲ್ಲಂಘಿಸುವ ಟೆಕ್ಕಿಗಳ ಮಾಹಿತಿಯನ್ನು ಅವರು ಕೆಲಸ ಮಾಡುವ ಕಂಪನಿಗಳಿಗೆ ಕಳುಹಿಸುವ ವಿನೂತನ ವಿಧಾನವನ್ನು​ ಬೆಂಗಳೂರು ಸಂಚಾರ ವಿಭಾಗದ ಪೊಲೀಸರು ಜಾರಿಗೆ ತಂದಿದ್ದಾರೆ.

bengaluru-techies-follow-traffic-rules-or-your-firm-will-be-notified-about-your-violations
ಬೆಂಗಳೂರು ಟೆಕ್ಕಿಗಳೇ ಎಚ್ಚರ; ಸಂಚಾರ ನಿಯಮ ಉಲ್ಲಂಘಿಸಿದರೆ ನಿಮ್ಮ ಕಂಪನಿಗೇ ಬರುತ್ತೆ ದೂರು
author img

By ETV Bharat Karnataka Team

Published : Dec 16, 2023, 8:32 PM IST

ಬೆಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಆಫೀಸ್​ಗೆ ಲೇಟಾಯ್ತು, ಖಾಸಗಿ ಕಂಪನಿಯ ಉದ್ಯೋಗಿ ಎಂದು ಐಡಿ ಕಾರ್ಡ್ ತೋರಿಸಿ ಸಬೂಬು ಹೇಳುವ ಮುನ್ನ ಬೆಂಗಳೂರು ಟೆಕ್ಕಿಗಳೇ ಎಚ್ಚರ ವಹಿಸಿ. ಏಕೆಂದರೆ, ಸಂಚಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಾರಣ ನೀಡುವವರ ಕಂಪನಿಗಳಿಂದ ಮಾಹಿತಿ ಪಡೆದುಕೊಳ್ಳುವ ಕೆಲಸವನ್ನು ಬೆಂಗಳೂರು ಸಂಚಾರ ಪೊಲೀಸರು ಆರಂಭಿಸಿದ್ದಾರೆ.

ವೇಗದ ಚಾಲನೆ, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆ ಮಾಡಿ ಕಾರಣಗಳನ್ನು ನೀಡುವವರ ಕುರಿತು ಅವರ ಕಂಪನಿಗಳಿಗೆ ಇ-ಮೇಲ್ ಅಥವಾ ವಾಟ್ಸ್​ಆ್ಯಪ್​ ಮೂಲಕ ಮಾಹಿತಿ ರವಾನಿಸಲಾಗುತ್ತದೆ. ಜೊತೆಗೆ ಅವರ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಖಾಸಗಿ ಕಂಪನಿಗಳು ಹೆಚ್ಚಿರುವ ಸಂಚಾರ ಪೂರ್ವ ವಿಭಾಗ, ವೈಟ್ ಫೀಲ್ಡ್ ಪ್ರದೇಶಗಳಲ್ಲಿ ಈಗಾಗಲೇ ಪೊಲೀಸರು ಈ ಕೆಲಸಕ್ಕೆ ಮುಂದಾಗಿದ್ದಾರೆ.

''ನಿಯಮ ಉಲ್ಲಂಘಿಸಿ ಕಾರಣ ನೀಡುವುದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೀತಿ ಮಾಹಿತಿ ಪಡೆಯುವ ಕೆಲಸ ಆರಂಭಿಸಿದ್ದೇವೆ. ಮತ್ತಷ್ಟು ಸವಾಲುಗಳಿವೆ. ಪ್ರಾಯೋಗಿಕವಾಗಿ ಸಂಚಾರ ಪೂರ್ವ ವಿಭಾಗಕ್ಕೆ ಈ ನಿಯಮ ಜಾರಿಗೊಳಿಸಲಾಗಿದ್ದು, ಈ ಭಾಗದಲ್ಲಿ ಯಶಸ್ವಿಯಾದರೆ ಬೆಂಗಳೂರಿನ ಇತರ ಭಾಗಗಳಿಗೂ ವಿಸ್ತರಿಸುವ ಕುರಿತು ಚಿಂತಿಸಲಾಗುವುದು'' ಎಂದು ಪೂರ್ವ ವಿಭಾಗದ ಉಪ ಪೊಲೀಸ್​ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಬೈಕ್ ನಂಬರ್‌ಪ್ಲೇಟ್​ಗೆ ಮಾಸ್ಕ್ ತೊಡಿಸಿದ್ದ ಸವಾರನ ವಿರುದ್ಧ ಪ್ರಕರಣ ದಾಖಲು

ಅಪ್ರಾಪ್ತ ಬಾಲಕನಿಗೆ ಬೈಕ್ ಕೊಟ್ಟ ತಂದೆಗೆ ದಂಡ ವಿಧಿಸಿದ ಕೋರ್ಟ್​: ಅಪ್ರಾಪ್ತ ಬಾಲಕನಿಗೆ ಬೈಕ್ ಚಲಾಯಿಸಲು ಕೊಟ್ಟ ತಂದೆಗೆ 10 ಸಾವಿರದ 500 ರೂಪಾಯಿ ಮತ್ತು ಬಾಲಕನಿಗೆ 9 ಸಾವಿರ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಎನ್​ಆರ್​ಪುರ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ವಾಹನ ತಪಾಸಣೆ ಮಾಡುವಾಗ ಅಪ್ರಾಪ್ತ ಬಾಲಕ ಬೈಕ್ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿದ್ದಾನೆ. ವಾಹನ ಚಾಲನಾ ಪರವಾನಗಿ ಹಾಗೂ ವಾಹನದ ದಾಖಲಾತಿ ಪರಿಶೀಲಿಸಿದಾಗ ವಾಹನ ಸವಾರ ಅಪ್ರಾಪ್ತನಾಗಿರುವುದು ಕಂಡು ಬಂದಿದ್ದು, ನ್ಯಾಯಾಲಯಕ್ಕೆ ಈ ಬಗ್ಗೆ ಚಾರ್ಜ್​ಶೀಟ್​ ಅನ್ನು ಎನ್​ಆರ್​ಪುರ ಪೊಲೀಸ್ ಠಾಣೆಯ ಸಿಬ್ಬಂದಿ ಸಲ್ಲಿಸಿದ್ದರು.

ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಪ್ರಕರಣವನ್ನು ಆಲಿಸಿ, ಮಹತ್ವದ ಆದೇಶ ಹಾಗೂ ತೀರ್ಪು ನೀಡಿದ್ದು, ಬಾಲಕನಿಗೆ 9 ಸಾವಿರ ಹಾಗೂ ಆತನ ತಂದೆಗೆ 10 ಸಾವಿರದ 500 ರೂಪಾಯಿ ಪ್ರತ್ಯೇಕವಾಗಿ ದಂಡ ವಿಧಿಸಿದ್ದಾರೆ. ವಾಹನ ಚಾಲನಾ ಪರವಾನಗಿ ಇಲ್ಲದವರಿಗೆ ವಾಹನಗಳನ್ನು ಚಲಾಯಿಸಲು ಕೊಡದಂತೆ ಪಿಎಸ್​ಐ ಬಿ.ಎಸ್.ನಿರಂಜನ್ ಕುಮಾರ್ ಎಚ್ಚರಿಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಿರುವ ಎನ್ಆರ್​ಪುರ ಪೊಲೀಸರು ನಿತ್ಯ ವಾಹನ ಪರವಾನಿಗೆ ಹಾಗೂ ಅಪ್ರಾಪ್ತರ ಬೈಕ್ ಚಲಾಯಿಸುವ ಅವರ ಮೇಲೆ ಕಟ್ಟು ನಿಟ್ಟಿನ ಕ್ರಮವನ್ನು ಜರುಗಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.