ETV Bharat / state

ಬೆಂಗಳೂರು: ಸಚಿವರ ಮನೆ ಸಮೀಪ ರೌಡಿಶೀಟರ್​ ಬರ್ಬರ ಹತ್ಯೆ - ETV Bharath Kannada news

ರೌಡಿಶೀಟರ್​ ಜಯಪ್ರಕಾಶ್ ಎಂಬಾತನನ್ನು ಲಕ್ಕಸಂದ್ರ ಸಮೀಪ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

Jayaprakash
Jayaprakash
author img

By ETV Bharat Karnataka Team

Published : Dec 24, 2023, 9:22 PM IST

Updated : Dec 24, 2023, 10:34 PM IST

ಬೆಂಗಳೂರು: ಸಾರಿಗೆ ಸಚಿವರ ಮನೆಯ ಸಮೀಪದಲ್ಲೇ ರೌಡಿಶೀಟರ್‌ವೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿರುವ ಘಟನೆ ಇಂದು ಸಂಜೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಕಸಂದ್ರ ಬಳಿ ನಡೆದಿದೆ. ಜಯಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಹತ್ಯೆಯಾದ ರೌಡಿಶೀಟರ್.

ಹನುಮ ಜಯಂತಿ ಹಿನ್ನೆಲೆಯಲ್ಲಿ ಲಕ್ಕಸಂದ್ರ ಬಸ್ ನಿಲ್ದಾಣದ ಸಮೀಪದ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಭಾಗಿಯಾಗಿದ್ದ. ಈ ಬಗ್ಗೆ ಅರಿತುಕೊಂಡು ಮೊದಲೇ ಹೊಂಚು ಹಾಕಿದ್ದ ನಾಲ್ಕೈದು ಜನರು ಸಂಜೆ 7ರ ಸುಮಾರಿಗೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಜಯಪ್ರಕಾಶ್ ಸಮೀಪದಲ್ಲಿದ್ದ ವಿಜಯ ಸಾಗರ ಹೋಟೆಲ್‌ಗೆ ನುಗ್ಗಿದ್ದಾನೆ. ಆದರೂ ಬಿಡದ ಆರೋಪಿಗಳು ಹೋಟೆಲ್‌ನಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಆಡುಗೋಡಿ ಪೊಲೀಸರು, ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಯಪ್ರಕಾಶ್ 2006ರಲ್ಲಿ ಹತ್ಯೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ ನಡೆದಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

''ಸಂಜೆ‌ 6.30ರಿಂದ 6.40ರ ಸುಮಾರಿಗೆ ಘಟನೆ ನಡೆದಿದೆ. ಜಯಪ್ರಕಾಶ್ ಅನ್ನದಾನ ಆಯೋಜಿಸಿದ್ದ. ಘಟನಾ ಸ್ಥಳದಿಂದ ಅಟ್ಟಿಸಿಕೊಂಡು ಬಂದ ನಾಲ್ಕೈದು ಜನ ಹೋಟೆಲಿನೊಳಗಡೆ ಹತ್ಯೆಗೈದಿದ್ದಾರೆ. ಕೊಲೆಯಾದವನ ಮೇಲೆ 2005-06ರಲ್ಲಿ‌ ಒಂದು ಹತ್ಯೆ ಪ್ರಕರಣ ದಾಖಲಾಗಿತ್ತು. ಆ ನಂತರ ಆಟೋ ಚಾಲಕನಾಗಿದ್ದು ಬೇರೆ ಪ್ರದೇಶದಲ್ಲಿ ವಾಸವಿದ್ದ. ನಂತರ ಅಪರಾಧ ಕೃತ್ಯಗಳಲ್ಲಿ ಸಕ್ರಿಯವಾಗಿದ್ದುದರ ಕುರಿತು ಮಾಹಿತಿ ಇಲ್ಲ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆಗೈದಿರುವ ಶಂಕೆ ಇದೆ. ಆರೋಪಿಗಳ ಪತ್ತೆಗೆ ಐದು ತಂಡಗಳನ್ನು ರಚಿಸಲಾಗಿದೆ'' ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಹೇಳಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಕಾಂಗ್ರೆಸ್ ಮುಖಂಡನ ಪುತ್ರ ಕೊಲೆ, ಪೊಲೀಸರಿಗೆ ಶರಣಾದ ಆರೋಪಿ

ಕಾಂಗ್ರೆಸ್ ಮುಖಂಡನ ಪುತ್ರ ಬರ್ಬರ ಹತ್ಯೆ: ಕಲಬುರಗಿಯ ಆಳಂದ ತಾಲೂಕಿನ ಕಾಂಗ್ರೆಸ್ ಮುಖಂಡನ ಪುತ್ರನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರ ಆಪ್ತ, ಕಾಂಗ್ರೆಸ್ ಮುಖಂಡ ಬಸವರಾಜ ಚೌಲ್ ಅವರ ಪುತ್ರ ಚಂದ್ರಶೇಖರ್ ಚೌಲ್ (21) ಕೊಲೆಯಾದ ಯುವಕ. ಶನಿವಾರ ರಾತ್ರಿ ಚಂದ್ರಶೇಖರ್ ತನ್ನ ಸ್ನೇಹಿತ ಮಿಲನ್ ಎಂಬಾತನೊಂದಿಗೆ ಆಳಂದ ಪಟ್ಟಣದ ಹೊರವಲಯ ಜಿಡಗಾ ಬಳಿ ನಿರ್ಜನ ಪ್ರದೇಶದಲ್ಲಿ ಪಾರ್ಟಿಗೆಂದು ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ‌. ಮಿಲನ್ ತನ್ನ ಬಳಿ ಇದ್ದ ಚಾಕುವಿನಿಂದ ಚಂದ್ರಶೇಖರ್​ಗೆ ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ಮಿಲನ್ ನೇರವಾಗಿ ಆಳಂದ ಠಾಣೆ ಪೊಲೀಸರ ಮುಂದೆ ಶರಣಾಗಿದ್ದಾನೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಜಯಪುರ: ಹಾಡಹಗಲೇ ಯುವಕನಿಗೆ ಚಾಕು ಇರಿದು ಹತ್ಯೆ, ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

Last Updated : Dec 24, 2023, 10:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.