ETV Bharat / state

ವಾಹನಗಳ ದಂಡ ಪಾವತಿಯಲ್ಲಿ ಶೇ 50ರಷ್ಟು ಡಿಸ್ಕೌಂಟ್‌: ಒಂದೇ ದಿನ ಸಂಗ್ರಹವಾದ ಮೊತ್ತ ಎಷ್ಟು ಗೊತ್ತೇ? - ಸಾಂಚಾರಿ ನಿಯಮ ಉಲ್ಲಂಘನೆ ದಂಡಕ್ಕೆ ರಿಯಾಯಿತಿ

ಫೆಬ್ರವರಿ 11ರೊಳಗೆ ವಾಹನಗಳ ಮೇಲಿನ ದಂಡವನ್ನು ಪಾವತಿಸಿದರೆ ಶೇ 50ರಷ್ಟು ರಿಯಾಯಿತಿ ಪ್ರಕಟಿಸಲಾಗಿತ್ತು.

50-percent-discount-on-fines-on-vehicles
ವಾಹನಗಳ ಮೇಲಿನ ದಂಡಕ್ಕೆ ರಿಯಾಯಿತಿ
author img

By

Published : Feb 3, 2023, 8:16 PM IST

Updated : Feb 3, 2023, 9:40 PM IST

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಕಟ್ಟದೆ ಬಾಕಿ ಉಳಿಸಿಕೊಂಡಿರುವ ಮತ್ತು ಪ್ರಕರಣ ಕೋರ್ಟ್​ನಲ್ಲಿ ಇರುವವರಿಗೆ ಫೆಬ್ರವರಿ 11ರೊಳಗೆ ದಂಡ ಪಾವತಿಸಿದರೆ ಶೇಕಡಾ 50ರಷ್ಟು ರಿಯಾಯಿತಿ ಘೋಷಿಸುತ್ತಿದ್ದಂತೆ ದಂಡ ಪಾವತಿಸುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆಯಾಗಿದೆ. ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿರುವ ಹಿನ್ನೆಲೆಯಲ್ಲಿ ದಂಡ ಪಾವತಿಯಲ್ಲಿ ರಿಯಾಯಿತಿ ನೀಡಲು ಹೈಕೋರ್ಟ್‌ ಹಿರಿಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ಜನವರಿ 27ರಂದು ನಡೆದ ಸಭೆಯಲ್ಲಿ ತೆಗೆದುಗೊಂಡ ನಿರ್ಣಯದಂತೆ ಸಾರಿಗೆ ಇಲಾಖೆ ಈ ಕ್ರಮ ಕೈಗೊಂಡಿತ್ತು‌.

ಟ್ರಾಫಿಕ್ ದಂಡ ಪಾವತಿಸಲು ಶೇ 50 ರಿಯಾಯಿತಿ ಘೋಷಿಸುತ್ತಿದ್ದಂತೆ ಇಂದು‌ ಒಂದೇ ದಿನ (ರಾತ್ರಿ 9 ಗಂಟೆಯವರೆಗೆ) 1 ಕೋಟಿ 42 ಲಕ್ಷದ 859 ಸಾವಿರ ಕ್ಕೂ ಅಧಿಕ ಪ್ರಕರಣಗಳ ಪೈಕಿ 201828 ಪ್ರಕರಣಗಳ ಒಟ್ಟು 5ಕೋಟಿ 61ಲಕ್ಷದ 45 ಸಾವಿರ ರೂಪಾಯಿ ದಂಡ ಪಾವತಿಯಾಗಿದೆ. ಪೊಲೀಸ್ ಠಾಣೆಗಳಲ್ಲಿ 2 ಕೋಟಿ 17 ಲಕ್ಷ 24 ಸಾವಿರದ 950 ರೂಪಾಯಿ ದಂಡ ಪಾವತಿಯಾಗಿದ್ದು, ಸಂಚಾರಿ ಆಯುಕ್ತರ ಕಚೇರಿಯಲ್ಲಿ 89,650 ಬೆಂಗಳೂರು ಒನ್ ಸೆಂಟರಿನಲ್ಲಿ 16,21,600 ಪಾವತಿಯಾಗಿದ್ದು, ಪೇಟಿಎಂ ಮೂಲಕ 3 ಕೋಟಿ 23 ಲಕ್ಷ 68 ಸಾವಿರದ 900 ರೂ ದಂಡ ಪಾವತಿಯಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಬೆಂಗಳೂರಿನಲ್ಲಿ ಮಾತ್ರವಲ್ಲದೇ ರಾಜ್ಯವ್ಯಾಪಿ ಫೆ.11ರೊಳಗೆ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಸಿದರೆ ಶೇ 50ರಷ್ಟು ರಿಯಾಯಿತಿ ದೊರೆಯಲಿದೆ. ರಾಷ್ಟ್ರೀಯ ಲೋಕ ಅದಾಲತ್ ಹಿನ್ನೆಲೆಯಲ್ಲಿ ಈ ರಿಯಾಯಿತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸುಮಾರು 1300 ಕೋಟಿ ರೂ ಗೂ ಅಧಿಕ ದಂಡದ ಮೊತ್ತ ಬಾಕಿ ಇದೆ.

2 ಕೋಟಿ ಪ್ರಕರಣಗಳು ಬಾಕಿ: ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದಲ್ಲಿ ಅಂದಾಜು 2 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. ಸರ್ಕಾರ ಕೊಟ್ಟಿರುವ ಅವಕಾಶವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಆನ್‌ಲೈನ್ ಅಥವಾ ಸಂಚಾರ ಪೊಲೀಸ್ ಠಾಣೆಯಲ್ಲಿ ದಂಡದ ಮೊತ್ತವನ್ನು ಪಾವತಿಸಿ ವಿನಾಯಿತಿ ಪಡೆಯವಂತೆ ಪೊಲೀಸ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸವಾರರಿಗೆ ಸರ್ಕಾರದ ಆಫರ್: ಗಾಡಿ ಮೇಲೆ ಟ್ರಾಫಿಕ್ ಫೈನ್ ಇದೆಯಾ? ದಂಡ ಕಟ್ಟಿ ಶೇ.50 ರಿಯಾಯಿತಿ ಪಡೆಯಿರಿ

Last Updated : Feb 3, 2023, 9:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.