ಬೆಂಗಳೂರು: ಕಳಪೆ ಕೈ ಸ್ಯಾನಿಟೈಸರ್ ಹಾವಳಿ ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೆ ಜಾಸ್ತಿಯಾಗ್ತಿದೆ. ಕೋವಿಡ್ 19 ಸಾಂಕ್ರಾಮಿಕ ರೋಗವನ್ನ ತಡೆಗಟ್ಟಲು ಸ್ಯಾನಿಟೈಸರ್ ಬಳಕೆ ಮಾಡುವಂತೆ ಆರೋಗ್ಯ ಇಲಾಖೆ ಸಜೆಸ್ಟ್ ಮಾಡ್ತಿದೆ. ಆದರೆ, ಇದನ್ನೆ ಬಂಡವಾಳವಾಗಿಟ್ಟುಕೊಂಡು ಕೆಲ ಕಿಡಿಗೇಡಿಗಳು ಸ್ಫೋಟಕ ರಾಸಾಯನಿಕವನ್ನ ಉಪಯೋಗಿಸಿಕೊಂಡು ಸ್ಯಾನಿಟೈಸರ್ ತಯಾರಿ ಮಾಡ್ತಿದ್ದು ಇದು ಸ್ಕೀನ್ ಮತ್ತು ಜೀವಕ್ಕೆ ಬಹಳ ಅಪಾಯಕಾರಿಯಾಗಿದೆ.
ಇನ್ನು ಈ ಕಳಪೆ ಸ್ಯಾನಿಟೈಸರ್ ಬಗ್ಗೆ ಚರ್ಮ ವೈದ್ಯ ಡಾ.ಗಿರೀಶ್ ಅವರು ಹೇಳುವ ಪ್ರಕಾರ ವಿಶ್ವ ಆರೋಗ್ಯ ಸಂಸ್ಥೆಯ ನಿಯಮದ ಪ್ರಕಾರ ಹ್ಯಾಂಡ್ ಸ್ಯಾನಿಟೈಸರ್ ನಿಯಮ ಹೀಗಿರಬೇಕು. ಹಿಥೈಲ್ ಅಲ್ಕೋಹಾಲ್ , ಎಥೋನಾಲ್
ಶೇಕಡ 80 ರಷ್ಟು 833ಮಿಲಿ, ಹೈಡ್ರೋಜನ್ ಪರಾಕ್ಸೈಡ್ ಶೇ3 41ಮಿಲಿ, ಗ್ಲಿಜಾರೋನ್ ಶೇ98-14.5ಮಿ ಲೀ,ಈ ಮೂರು ವಸ್ತುಗಳ ಮಿಶ್ರಣ ಮಾಡಿ ಕಾದು ಆರಿಸಿದ ನಂತರ 1ಲೀಟರ್ ಸ್ಯಾನಿಟೈಸರ್ ಆಗುತ್ತೆ.
ಆದರೆ ಕಳಪೆಯಾಗಿ ತಯಾರು ಮಾಡುವ ಕಿಡಿಗೇಡಿಗಳು ಅಪಾಯಕಾರಿ ಸ್ಫೋಟಕ ರಾಸಾಯನಿಕ ಅಂಶಗಳನ್ನು ಬಳಸಿ ಅಂದ್ರೆ 400 ಲೀಟರ್ ಐಸೋ ಪ್ರೊಫೈಲ್ ಅಲ್ಕೋಹಾಲ್, 210ಲೀಟರ್ ಟಾಲಿನ್, 100ಲೀಟರ್ ಟರ್ಪಂಟೈನ್, 600ಲೀಟರ್ ಅಸಿಟೋನ್, 50ಲೀಟರ್ ಬೆಂಜಾಯಲ್ ಆಲ್ಕೋಹಾಲ್, ನೈಟ್ರೋ ಬೆಂಜಿನ್, ಸಿಲಿಕಾನ್ ಆಯಿಲ್, ಲಿಕ್ವಿಡ್ ಪ್ಯಾರಾಫೀನ್, ಗ್ಲಿಜರಿನ್, ಮಿಥಿಲಿನ್ ಕ್ಲೋರೈಡ್, ಪ್ರೊಪಿಲಿನ್ ಗ್ಲೈಕಾಲ್, ಪಾಲಿ ಎಥಿಲಿನ್ ಗ್ಲೈ ಕಾನ್ ಬಳಸಿ ಸಾವಿರಾರು ಲೀಟರ್ ನಕಲಿ ಸ್ಯಾನಿಟೈಸರ್ ತಯಾರಿ ಮಾಡಿ ಬ್ರಾಂಡೆಡ್ ಸ್ಯಾನಿಟೈಸರ್ ಎಂದು ಜನರಿಗೆ ಮಾರಾಟ ಮಾಡಿ ಅಧಿಕ ಹಣಗಳಿಸ್ತಿದ್ದಾರೆ.
ಹಾಗೆ ಕಳಪೆ ಗುಣ ಮಟ್ಟದಿಂದ ಚರ್ಮದ ಆಯಿಲ್ ಅಂಶ ಹೊಗುತ್ತೆ. ನಕಲಿಯಲ್ಲಿ ಅಲ್ಕೋ ಹಾಲ್ ಕಂಟೆಟ್ ಕಮ್ಮಿ ಇರುತ್ತೆ. ಹಾಗೆ ಅತಿ ಹೆಚ್ಚು ಬಳಕೆ ಮಾಡುವುದರಿಂದ ಚರ್ಮ ಕೂಡ ಬಿರುಕು ಬೀಳುತ್ತೆ ,ಹೀಗಾಗಿ ಒಳ್ಳೆ ಬ್ರಾಂಡ್ ಡೆಡ್ ಸ್ಯಾನಿಟೈಸರ್ ಬಳಕೆ ಮಾಡಿದ್ರೆ ಮಾತ್ರ ಕೊರೊನಾವನ್ನ ತಡೆಗಟ್ಟಬಹುದು ಎಂದು ವೈದ್ಯರು ತಿಳಿಸಿದ್ದಾರೆ.