ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎರಡನೇ ಹಂತದ ವಿವಿಧ ಬಡಾವಣೆಗಳ 308 ನಿವೇಶನಗಳನ್ನು ಹರಾಜಿಗೆ ಇಟ್ಟಿತ್ತು. 20-7-2020 ರಿಂದ ಆರಂಭವಾಗಿದ್ದ ಇ ಹರಾಜಿನಲ್ಲಿ 1601 ಬಿಡ್ಡುದಾರರು ಭಾಗವಹಿಸಿದ್ದರು. ಸದ್ಯ 240 ನಿವೇಶನಗಳು ಮಾರಾಟವಾಗಿದ್ದು, 172 ಕೋಟಿ ರೂ. ಗಳಿಕೆಯಾಗಿದೆ.
![BDA Phase II E-Auction Process Finish: Gains 172 crores from 240 residents](https://etvbharatimages.akamaized.net/etvbharat/prod-images/kn-bng-07-bda-7202707_13082020225417_1308f_1597339457_184.jpg)
ಮಾರಾಟವಾಗಿದ್ದ 240 ನಿವೇಶನಗಳಲ್ಲಿ ಒಂದು ನಿವೇಶನ ಹಿಂಪಡೆಯಲಾಗಿದೆ ಎಂದು ಬಿಡಿಎ ಮಾಹಿತಿ ನೀಡಿದೆ. ನಿವೇಶನಗಳ ಒಟ್ಟು ಮೂಲ ಬೆಲೆ 103.87 ಕೋಟಿ ರೂ ಆಗಿದ್ದು, ಒಟ್ಟು ಹರಾಜು ಮೌಲ್ಯ 171.99 ಕೋಟಿ ಆಗಿದೆ. ಅಂದರೆ 68.12 ಕೋಟಿ ರೂಪಾಯಿ ಗಳಿಕೆಯಾಗಿದ್ದು, ಶೇಕಡಾ 65.58ರಷ್ಟು ಹೆಚ್ಚು ಮೊತ್ತಕ್ಕೆ ನಿವೇಶನಗಳು ಮಾರಾಟ ಆಗಿವೆ.
ಇನ್ನೂ 45 ನಿವೇಶನಗಳ ಹರಾಜಿನಲ್ಲಿ ಯಾವುದೇ ಬಿಡ್ಡುದಾರರು ಭಾಗವಹಿಸಿಲ್ಲ. 22 ನಿವೇಶನಗಳಿಗೆ ಮೂಲ ದರಕ್ಕಿಂತ ಶೇ. 5 ಕ್ಕಿಂತ ಕಡಿಮೆ ಮೊತ್ತವನ್ನು ಬಿಡ್ಡುದಾರರು ದಾಖಲಿಸಿದ್ದು, ಅವು ಹರಾಜು ಆಗಿಲ್ಲ.
ಒಟ್ಟು ಎರಡು ಹಂತದ ಈ ಹರಾಜು ಪ್ರಕ್ರಿಯೆಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಮೂರನೇ ಹಂತದ ಹರಾಜು ಪ್ರಕ್ರಿಯೆಗೂ ಸಿದ್ಧತೆಗಳಾಗಿದ್ದು, ಸದ್ಯದಲ್ಲೆ ಅಧಿಸೂಚನೆ ಪ್ರಕಟಿಸಲಿದೆ.