ಬೆಂಗಳೂರು: ಬಿಬಿಎಂಪಿಯ ನಾಲ್ವರು ವಿಶೇಷ ಆಯುಕ್ತರನ್ನು ನಗರದ ಎಂಟು ವಲಯಗಳಲ್ಲಿ ಎರಡೆರಡು ವಲಯಗಳ ಉಸ್ತುವಾರಿ ಅಧಿಕಾರಿಗಳಾಗಿ ನೇಮಿಸಿ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರ ಆಡಳಿತ ವಿಕೇಂದ್ರೀಕರಣ ಮಾಡಿದ್ದು, ವಿಶೇಷ ಆಯುಕ್ತರಿಗೆ ಹಾಲಿ ಜವಾಬ್ದಾರಿಯ ಜೊತೆಗೆ ವಲಯಗಳ ಉಸ್ತುವಾರಿ ಹೊಣೆ ನೀಡಲಾಗಿದೆ. ಕೆಎಂಸಿ ಕಾಯ್ದೆಯಡಿ ವಿಶೇಷ ಆಯುಕ್ತರು ಎರಡು ವಲಯಗಳಿಗೆ ಸಂಬಂಧಿಸಿದ ಕಾಮಗಾರಿ, ಘನತ್ಯಾಜ್ಯ ನಿರ್ವಹಣೆ, ತೋಟಗಾರಿಕೆ, ರಸ್ತೆ ಗುಂಡಿ ಅಭಿವೃದ್ಧಿ, ಕಾಮಗಾರಿ, ವಿದ್ಯುತ್, ಆರೋಗ್ಯ, ಶಿಕ್ಷಣ ಹಾಗೂ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ವಲಯಗಳಿಗೆ ಸಂಬಂಧಿಸಿದ ಆಡಳಿತಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಬಹುದಾಗಿದೆ.
ವಲಯ ವಿಶೇಷ ಆಯುಕ್ತರು:
ಪೂರ್ವ ಮತ್ತು ಯಲಹಂಕ- ಡಾ. ರವಿಕುಮಾರ್ ಸುರಪುರ (ಯೋಜನೆ ವಿಭಾಗ)
ದಕ್ಷಿಣ ಮತ್ತು ಆರ್.ಆರ್.ನಗರ- ಎಂ.ಲೋಕೇಶ್ (ಹಣಕಾಸು)
ಪಶ್ಚಿಮ ಮತ್ತು ದಾಸರಹಳ್ಳಿ - ಅನ್ಬುಕುಮಾರ್ (ಆಡಳಿತ)
ಮಹಾದೇವಪುರ ಮತ್ತು ಬೊಮ್ಮನಹಳ್ಳಿ- ಡಿ.ರಂದೀಪ್ (ಘನ ತ್ಯಾಜ್ಯ ನಿರ್ವಹಣೆ)