ETV Bharat / state

ನಾಳೆ ಬಿಬಿಎಂಪಿ ಬಜೆಟ್​​ ಮಂಡನೆ: ನಗರದ ಜನರಿಗೆ ಸಿಗುತ್ತಾ ಸಿಹಿ ಸುದ್ದಿ? - ಬಿಬಿಎಂಪಿ ಬಜೆಟ್​ 2021

ಈ ಬಾರಿ ಬಿಬಿಎಂಪಿ ವೈಜ್ಞಾನಿಕವಾಗಿ ಹೆಚ್ಚು ಆರ್ಥಿಕ ಹೊರೆ ಆಗದಂತೆ 8 ಸಾವಿರ ಕೋಟಿ ಅಂದಾಜು ಮೊತ್ತದ ಬಜೆಟ್ ಮಂಡಿಸಲಾಗುತ್ತೆ ಎಂದು ಹೇಳಲಾಗಿದೆ.

bbmp budget to present tomorrow
ಬಿಬಿಎಂಪಿ ಬಜೆಟ್​
author img

By

Published : Mar 26, 2021, 12:57 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2021-22ರ ಸಾಲಿನ ಬಜೆಟ್ ನಾಳೆ ಬೆಳಗ್ಗೆ 10 ಗಂಟೆಗೆ ಮಂಡನೆಯಾಗಲಿದೆ. ಆದ್ರೆ ಬಿಬಿಎಂಪಿ ಕೇಂದ್ರ ಕಚೇರಿಯ ಬದಲಾಗಿ ಈ ‌ಬಾರಿ ಮಲ್ಲೇಶ್ವರ ಐ.ಪಿ.ಪಿ ತರಬೇತಿ ಕೇಂದ್ರದಲ್ಲಿ ಆಡಳಿತಗಾರರಾದ ಗೌರವ್ ಗುಪ್ತಾ ಅಧ್ಯಕ್ಷತೆಯಲ್ಲಿ ಬಜೆಟ್​​ ಮಂಡನೆಯಾಗಲಿದೆ.

ಕೋವಿಡ್​ನಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿ, ಯಾವ ಹೊಸ ಯೋಜನೆಗಳನ್ನು ಘೋಷಿಸಲಿದೆ ಎಂಬ ಕುತೂಹಲ ಮೂಡಿದೆ. ಈ ಬಾರಿ ವೈಜ್ಞಾನಿಕವಾಗಿ ಹೆಚ್ಚು ಆರ್ಥಿಕ ಹೊರೆ ಆಗದಂತೆ 8 ಸಾವಿರ ಕೋಟಿ ರೂ. ಅಂದಾಜು ಮೊತ್ತದ ಬಜೆಟ್ ಮಂಡಿಸಲಾಗುತ್ತೆ ಎಂದು ಹೇಳಲಾಗಿದೆ. ಅಲ್ಲದೆ ಹೊಸ ಯೋಜನೆಗಳ ಬದಾಲಾಗಿ ಈಗಾಗಲೇ ಜಾರಿಯಲ್ಲಿರುವ ಕಾಮಗಾರಿಗಳನ್ನು ಮುಕ್ತಾಯಗೊಳಿಸಲು ಹಾಗೂ ಪಾಲಿಕೆಯ ವಾರ್ಷಿಕ ನಿರ್ವಹಣೆಗೆ ಹೆಚ್ಚಿನ ಅನುದಾನ ಬೇಕಾಗಿರುವುದರಿಂದ ಇದಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ತಿಳಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.