ಬೆಂಗಳೂರು: ಕೊರೊನಾ ನಡುವೆಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ವರ್ಗದ ಹಿತ ಕಾಪಾಡುವಂತಹ ಬಜೆಟ್ ಮಂಡನೆ ಮಾಡಿದೆ. ಪ್ರಸ್ತುತ ಸಾಲಿನಲ್ಲಿ 9286.80 ಕೋಟಿ ರೂ. ಮೊತ್ತದ ಬಜೆಟ್ ಮಂಡನೆಯಾಗಿದೆ.
ಬಿಬಿಎಂಪಿ ಬಜೆಟ್ ಆಯವ್ಯಯ (ಕೋಟಿ ರೂ.ಗಳಲ್ಲಿ)
- ಸಿಬ್ಬಂದಿ ವೆಚ್ಚ- 1267.75
- ಆಡಳಿತ ವೆಚ್ಚ - 250.37
- ಬ್ಯಾಂಕ್ ಸಾಲ ಮತ್ತು ಬಡ್ಡಿ ಪಾವತಿ- 296.87
- ಕಾರ್ಯಕ್ರಮಗಳ ವೆಚ್ಚಗಳು- 424.25
- ಕಾರ್ಯಾಚರಣೆ ಮತ್ತು ನಿರ್ವಹಣೆ- 2115.63
- ಸಾರ್ವಜನಿಕ ಅಭಿವೃದ್ಧಿ ಕಾಮಗಾರಿ- 4587.68
- ಠೇವಣಿ ಮತ್ತು ಕರಗಳ ಮರುಪಾವತಿ- 344.25
- ಒಟ್ಟು- 9286.80
ಬಜೆಟ್ನ ಪ್ರಮುಖ ಅಂಶಗಳು :
- ಆಸ್ತಿ ತೆರಿಗೆ ದರ ಹೆಚ್ಚಳ ಇಲ್ಲ
- ಸಂಪನ್ಮೂಲ ಕ್ರೋಢೀಕರಣಕ್ಕೆ ಕೈ ಬಿಟ್ಟು ಹೋಗಿರುವ ಎಲ್ಲಾ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ
- ಕೆಆರ್ ಮಾರುಕಟ್ಟೆ ಕಟ್ಟಡ ಅಡಮಾನ ಮುಕ್ತ
- ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ಹತ್ತು ಕೋಟಿ ಅನುದಾನ
- ಆಸ್ತಿ ತೆರಿಗೆಯಿಂದ 2800 ಕೋಟಿ, ಕರಗಳಿಂದ 3500 ಕೋಟಿ ಸಂಗ್ರಹದ ನಿರೀಕ್ಷೆ
- 116 ಮಾರುಕಟ್ಟೆ ಸಂಕೀರ್ಣಗಳು, 5918 ಅಂಗಡಿಗಳಿಂದ ವರ್ಷಕ್ಕೆ 23 ಕೋಟಿ ರೂ ಮಾತ್ರ ಬಾಡಿಗೆ ಸಂಗ್ರಹ ಆಗುತ್ತಿದ್ದು, ಇದನ್ನು ಈ ವರ್ಷ 38 ಕೋಟಿ ನಿರೀಕ್ಷೆ
- ಆಸ್ತಿ ವಿವರ ತಪ್ಪಾಗಿ ಘೋಷಣೆ ಮಾಡಿದ 78 ಮಾಲೀಕರಿಗೆ ನೋಟಿಸ್ ಜಾರಿ
- ಕೇಂದ್ರ ಸರ್ಕಾರದಿಂದ 15 ನೇ ಹಣಕಾಸು ಆಯೋಗದ ಅನುದಾನ ನಿರೀಕ್ಷೆ
- ಈ ಬಾರಿ 3500 ಕೋಟಿ ಆಸ್ತಿ ತೆರಿಗೆ ಸಂಗ್ರಹ ನಿರೀಕ್ಷೆ
- ಆಸ್ತಿ ನೋಂದಣಿಗೆ ಶೇ 2 ರಷ್ಟು ಸ್ಟಾಂಪ್ ಡ್ಯೂಟಿ ಸಂಗ್ರಹಿಸಲು ಕ್ರಮ
- ಸ್ಟಾಂಪ್ ಡ್ಯೂಟಿಯಿಂದ 200 ಕೋಟಿ ಆದಾಯ ನಿರೀಕ್ಷೆ
- ಭಿಕ್ಷುಕರ ಸೆಸ್ ಹಣದಿಂದ ನಿರಾಶ್ರಿತರ ತಾಣ ನಿರ್ಮಾಣಕ್ಕೆ ಕ್ರಮ
- ಕಸ ಸಂಗ್ರಹಣೆಗೆ ಟೆಂಡರ್ ಕರೆಯಲು ಅಗತ್ಯ ಕ್ರಮ
- ಇಡೀ ನಗರದಲ್ಲಿ ಬ್ಲಾಕ್ ಸ್ಪಾಟ್ ಇಲ್ಲದ ರೀತಿ ಅಗತ್ಯ ಕ್ರಮ
- ಕಸ ನಿರ್ವಹಣೆಯಲ್ಲಿ ಬ್ಲಾಕ್ ಸ್ಪಾಟ್ ಇಲ್ಲದ ವಾರ್ಡ್ಗಳಿಗೆ 50 ಲಕ್ಷ ಪ್ರೋತ್ಸಾಹ ಹಣ ನೀಡಿಕೆ
- ಸಮಾಜ ಕಲ್ಯಾಣ ಇಲಾಖೆಗೆ 546 ಕೋಟಿ ಮೀಸಲು
- ಒಂಟಿ ಮನೆ ಯೋಜನೆಯಡಿ ನಿವೇಶನ ಕಟ್ಟಲು 900 ಕೋಟಿ ಮೀಸಲು
- ಪೌರ ಕಾರ್ಮಿಕರ ಮಕ್ಕಳಿಗೆ 1 ಲಕ್ಷ ಬೋಧನಾ ಶುಲ್ಕ ಮರುಪಾವತಿ
- ಸೈಕಲ್ ಪಾತ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ
- ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ 84 ಕೋಟಿ ಮೀಸಲು
- ನಮ್ಮ ಗಾರ್ಡನ್ ಸಿಟಿ ಯೋಜನೆಯಡಿ ಉದ್ಯಾನವನ ಅಭಿವೃದ್ಧಿ
- ವಾಯು ಗುಣಮಟ್ಟ ನಿರ್ವಹಣೆಗೆ 279 ಕೋಟಿ ಮೀಸಲು
- ಪ್ರಸ್ತುತ ವರ್ಷ 10 ಲಕ್ಷ ಸಸಿ ನೆಡಲು ಕ್ರಮ
- ಮಳೆ ಬಂದಾಗ ಆಗುವ ಅನಾಹುತ ತಪ್ಪಿಸಲು ಶೂನ್ಯ ಪ್ರವಾಹದಡಿ ರಾಜಕಾಲುವೆ ಹೂಳು ತೆಗೆಯಲು 60 ಕೋಟಿ
- ಸಾಂಸ್ಕೃತಿಕ , ಕ್ರೀಡಾ ಚಟುವಟಿಕೆಗಳಿಗೆ 21.75 ಕೋಟಿ ಮೀಸಲು
- ಬಿಬಿಎಂಪಿ ಕೌನ್ಸಿಲ್ ಕಟ್ಟಡ ನವೀಕರಣಕ್ಕೆ 10 ಕೋಟಿ ಮೀಸಲು
- ರಾಜ್ಯ ಸರ್ಕಾರದಿಂದ 3000 ಕೋಟಿ ಅನುದಾನ
- ಕೇಂದ್ರ ಸರ್ಕಾರ 15 ನೇ ಹಣಕಾಸು ಯೋಜನೆಯಡಿ 421 ಕೋಟಿ ಅನುದಾನ ನೀಡಿದೆ
- ಪಾಲಿಕೆ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ
- ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಶೇಕಡಾ 85 ರಷ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ 25 ಸಾವಿರ, ಶೇ 60 ರಷ್ಟು ವಿದ್ಯಾರ್ಥಿಗಳು ಶೇ 85 ರಷ್ಟು ಅಂಕ ಪಡೆದ ಶಿಕ್ಷಕರಿಗೆ 2 ಲಕ್ಷ ಪ್ರೋತ್ಸಾಹ ಧನ
- ನಗರದಲ್ಲಿ ಕೊರೊನಾ ನಿಯಂತ್ರಣಕ್ಕೆ 337 ಕೋಟಿ ಅನುದಾನ
- ಬೀದಿ ನಾಯಿಗಳ ಹಾವಳಿ ತಡೆಯಲು 5 ಕೋಟಿ ಮೀಸಲು
- ಉದ್ಯಾನವನಗಳ ನಿರ್ವಹಣೆಗೆ ಅಗತ್ಯ ಕ್ರಮ