ETV Bharat / state

ರದ್ದಾದ 'ಕನಕಾಂಬರಿ' ನೋಟು ನೇಪಾಳದಲ್ಲಿ ಚಲಾವಣೆಗೆ ಯತ್ನ: ಇಬ್ಬರು ಆರೋಪಿಗಳು ಅಂದರ್ - ನಿಷೇಧಿತ ಕರೆನ್ಸಿ ನೋಟ್​​ ವಿನಿಮಯ

ಬೆಂಗಳೂರಿನಲ್ಲಿ ಕಮಿಷನ್​ಗಾಗಿ ನಿಷೇಧಿತ ನೋಟುಗಳ ವಿನಿಮಯ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ 1 ಕೋಟಿ ಮೌಲ್ಯದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

banned money exchange accuses arrested
ಇಬ್ಬರು ಆರೋಪಿಗಳು ಅಂದರ್
author img

By

Published : Oct 4, 2020, 3:06 PM IST

ಬೆಂಗಳೂರು; ನಿಷೇಧಿತ ನೋಟುಗಳನ್ನ ಕಮಿಷನ್​ಗಾಗಿ ವಿನಿಮಯ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಉತ್ತರ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ ‌.

banned money exchange accuses arrested
ಇಬ್ಬರು ಆರೋಪಿಗಳು ಅಂದರ್

ಶೇಕ್ ತುಫೆಲ್ ಆಲಿ ಅಲಿಯಾಸ್ ಸಲ್ಮಾನ್, ಮುದಾಸೀರ್ ನಜೀರ್ ಬಂಧಿತ ಆರೋಪಿಗಳು.ಮತ್ತೋರ್ವ ಒಡಿಶಾ ಮೂಲದ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರ್.ಟಿ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯ ಬಳಿ ಇರುವ ಮುದಾಸೀರ್ ನಜೀರ್ ಮನೆಯಲ್ಲಿ ಕೇಂದ್ರ ಸರ್ಕಾರ ನಿಷೇಧ ಮಾಡಿರುವ ಸಾವಿರ ಮುಖ ಬೆಲೆಯ ಹಳೆ ನೋಟುಗಳನ್ನ ಕಮಿಷನ್​ಗಾಗಿ ಸಾರ್ವಜನಿಕರಿಗೆ ಕೊಡಲು ಇಟ್ಟುಕೊಂಡ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು‌. ಈ ಮಾಹಿತಿ ಮೇರೆಗೆ ದಾಳಿ ನಡೆಸಿ ತನಿಖೆಗೆ ಒಳಪಡಿಸಿದಾಗ ಆರೋಪಿ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬನನ್ನ ಖೆಡ್ಡಾಕ್ಕೆ ಕೆಡವಿದ್ದಾರೆ.

banned money exchange accuses arrested
ಇಬ್ಬರು ಆರೋಪಿಗಳು ಅಂದರ್
ಆರೋಪಿಗಳು ಈ ಹಣವನ್ನ ಬೆಂಗಳೂರಿನ ರೆಹಮಾನ್ ಎಂಬುವವನಿಂದ 2.5ಲಕ್ಷ ಚಲಾವಣೆಯಲ್ಲಿರುವ ಹಣ ಕೊಟ್ಟು ಖರೀದಿಸಿ ಸಾರ್ವಜನಿಕರನ್ನ ನಂಬಿಸಿ ಹಳೇ ನೋಟು ಕೊಟ್ಟು ಲಾಭ ಗಳಿಸುವ ಪ್ಲಾನ್​ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆರೋಪಿ ಶೇಕ್ ತುಫೆಲ್ ಮುದಾಸೀರ್ ನಿಂದ ನಿಷೇಧಿತ ನೋಟುಗಳನ್ನ ನೇಪಾಳ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಅಮಾಯಕ ಜನರಿಗೆ ಕೊಟ್ಟು ಬದಲಾವಣೆ ಮಾಡಿರುವ ವಿಚಾರ ಬಯಲಾಗಿದೆ. ಸದ್ಯ ಬಂಧಿತರಿಂದ 1 ಕೋಟಿ ಮೌಲ್ಯದ ನಿಷೇಧಿತ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನಿಷೇಧಿತ ನೋಟುಗಳಿಂದ ಸಾರ್ವಜನಿಕರಿಗೆ ಹೇಗೆ ಲಾಭ,ಮತ್ತಿತರ ಮಾಹಿತಿಗಳನ್ಜು ಪೊಲೀಸರು ಕಲೆ ಹಾಕುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.