ETV Bharat / state

ನಮ್ಮ ಮೆಟ್ರೋ ಸಂಚಾರಕ್ಕೆ ಸಿಕ್ಕಿತು ಗ್ರೀನ್ ಸಿಗ್ನಲ್​​: ಸೋಮವಾರದಿಂದ ಷರತ್ತು ಬದ್ಧ ಸಂಚಾರ ಆರಂಭ

ವೀಕೆಂಡ್​ ಕರ್ಫ್ಯೂ ಸಂದರ್ಭದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಪ್ರತಿ ಶುಕ್ರವಾರ ಸಂಜೆ ಆರು ಗಂಟೆಯಿಂದ ಸೋಮವಾರ ಬೆಳಗ್ಗೆ ಏಳು ಗಂಟೆಯವರೆಗೂ ಮೆಟ್ರೋ ಸೇವೆ ಪ್ರಯಾಣಿಕರಿಗೆ ಲಭ್ಯವಿರುವುದಿಲ್ಲ

author img

By

Published : Jun 19, 2021, 10:35 PM IST

ಮೆಟ್ರೋ ಸಂಚಾರಕ್ಕೆ ಅನುಮತಿ
ಮೆಟ್ರೋ ಸಂಚಾರಕ್ಕೆ ಅನುಮತಿ

ಬೆಂಗಳೂರು‌: ಲಾಕ್​ ಡೌನ್​ನಿಂದ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋಗೆ ಕೊನೆಗೂ ಪುನಾರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಸೋಮವಾರದಿಂದ ಪ್ರಯಾಣಿಕರ ಸೇವೆಗೆ ನಮ್ಮ ಮೆಟ್ರೋ ವಾರದ 5 ದಿನಗಳು ಲಭ್ಯವಿರಲಿದೆ. ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆ ಹಾಗೂ ಹಾಗೂ ಸಂಜೆ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚಾರ ಮಾಡಲಿದೆ. ಪ್ರತಿ ಐದು‌ ನಿಮಿಷಕ್ಕೆ ಮೆಟ್ರೋ ಟ್ರೈನ್ ಸಂಚರಿಸಲಿದೆ.

ಇನ್ನು ವೀಕೆಂಡ್​ ಕರ್ಫ್ಯೂ ಸಂದರ್ಭದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುತ್ತದೆ. ಪ್ರತಿ ಶುಕ್ರವಾರ ಸಂಜೆ ಆರು ಗಂಟೆಯಿಂದ ಸೋಮವಾರ ಬೆಳಗ್ಗೆ ಏಳು ಗಂಟೆಯವರೆಗೂ ಮೆಟ್ರೋ ಸೇವೆ ಪ್ರಯಾಣಿಕರಿಗೆ ಲಭ್ಯ ಇರುವುದಿಲ್ಲ. ಮತ್ತು ಕೇವಲ ಶೇಕಾಡ 50 ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಟಿಕೆಟ್ ಕೌಂಟರ್​ಗಳಲ್ಲಿ ಟಿಕೆಟ್ ಕಾಯಿನ್‌ಗಳು ಲಭ್ಯವಿರುವುದಿಲ್ಲ. ಕೇವಲ ಮೆಟ್ರೋ ಕಾರ್ಡ್ ರೀಚಾರ್ಜ್ ಮಾಡ್ಸಿ ಮೆಟ್ರೋ ದಲ್ಲಿ ಪ್ರಯಾಣಿಸಬಹುದಾಗಿದೆ..

ಮೆಟ್ರೋ ಸಂಚಾರಕ್ಕೆ ಅನುಮತಿ
ಮೆಟ್ರೋ ಸಂಚಾರಕ್ಕೆ ಅನುಮತಿ
ವಿಶೇಷ ಎಂದರೆ ಇದೇ ಮೊದಲ ಬಾರಿ ಪೀಕ್ ಅವರ್ ಅಲ್ಲದ ವೇಳೆಯಲ್ಲಿ ಬಿಎಂಆರ್‌ಸಿಎಲ್ ಮೆಟ್ರೋ ಸಂಚಾರ ಬಂದ್ ಮಾಡಲಿದೆ. ಇನ್ನು ಪೀಕ್ ಅವರ್ ಇಲ್ಲದ ಸಂದರ್ಭದಲ್ಲಿ ಆಗುವ ನಷ್ಟ ತುಂಬಿಸಲು ಹೊಸ ಉಪಾಯಕ್ಕೆ ನಮ್ಮ ಮೆಟ್ರೋ ಮುಂದಾಗಿದೆ. ಮೆಟ್ರೋ ಓಡುತ್ತಲ್ಲ ಅಂತ ಪ್ರಯಾಣಿಕರು 11 ಗಂಟೆ ನಂತರ ಮೆಟ್ರೋ ಸ್ಟೇಷನ್​ಗೆ ಬಂದ್ರೆ ಮೆಟ್ರೋ ಸಂಚಾರಿ ಇರೋದಿಲ್ಲ. ಸೋಮವಾರದಿಂದ ಮೆಟ್ರೋ ಸೇವೆ ಇದ್ದರೂ ಮಧ್ಯಾಹ್ನದ ವೇಳೆಯಲ್ಲಿ ಬಿಎಂಆರ್‌ಸಿಎಲ್ ಸಂಚಾರ ಸ್ಥಗಿತಗೊಳಿಸಲಿದೆ. ಹೀಗಾಗಿ ವಾರದ 5 ದಿನ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸಂಚಾರ ಇರೋದಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.