ಬೆಂಗಳೂರು: 2019 ಫೆಬ್ರವರಿ 14ರಂದು ಪುಲ್ವಾಮದಲ್ಲಿ ಭಾರತೀಯ ಸೈನಿಕರ ರಕ್ತಪಾತ ಹರಿಸಿದ್ದ ಪಾಕಿಸ್ತಾನದ ಭಯೋತ್ಪಾದಕರ ದಾಳಿಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ದುರುಳನಿಗೆ ಸೋಮವಾರ ಇಲ್ಲಿನ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತು.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ವಿಧ್ವಂಸಕ ಕೃತ್ಯದಲ್ಲಿ ಹಲವು ಯೋಧರು ಹುತಾತ್ಮರಾಗಿದ್ದರು. ದೇಶದ ಜನ ಶೋಕಸಾಗರದಲ್ಲಿ ಮುಳುಗಿದ್ದರೆ ದೇಶದ್ರೋಹಿಯೊಬ್ಬ ಭಯೋತ್ಪಾದಕರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಫೈಜ಼್ ರಶೀದ್ ಎಂಬ ದೇಶದ್ರೋಹಿ ನಗರದ ಬಾಣಸವಾಡಿಯಲ್ಲಿ ಕುಳಿತು ಇಂಥದ್ದೊಂದು ದುಷ್ಕೃತ್ಯ ಎಸಗಿದ್ದು, ನಾಡಿನಾದ್ಯಂತ ವಿರೋಧ ವ್ಯಕ್ತವಾಗಿತ್ತು.
ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದ ಸಿಸಿಬಿ ಪೊಲೀಸರು ನೀಡಿದ್ದ ವರದಿ ಆಧರಿಸಿ ಇದೀಗ ಕೋರ್ಟ್ ಆರೋಪಿಗೆ ಐದು ವರ್ಷ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದೆ. ಆರೋಪಿಯು ಬಂಧನವಾದಾಗಿನಿಂದ ಇಲ್ಲಿಯವರೆಗೂ ಜೈಲಿನಲ್ಲೇ ಇದ್ದಾನೆ.
ಇದನ್ನೂ ಓದಿ: ಪ್ರಿಯಕರನ ಮಣಿಕಟ್ಟಿನ ರಕ್ತನಾಳ ಕತ್ತರಿಸಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ