ಬೆಂಗಳೂರು: ಹೈದರಾಬಾದ್ ನಲ್ಲಿ ನಡೆದ ಪಶು ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.
ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೋಮವಾರಷ್ಟೇ ಎಲ್ಲಾ ವಲಯದ ಪೊಲೀಸರಿಗೆ ಮಹಿಳೆಯರ ಭದ್ರತೆ ದೃಷ್ಟಿಯಿಂದ ಸರಿಯಾಗಿ ಕಾರ್ಯ ನಿರ್ವಹಣೆ ಮಾಡಿ ಸುರಕ್ಷತೆ ನೋಡಿಕೊಳ್ಳುವಂತೆ ಸೂಚಿಸಿದ್ರು.
ಈ ಸೂಚನೆ ಮೇರೆಗೆ ಅಲರ್ಟ್ ಆಗಿರುವ ಪೊಲೀಸರು, ದಕ್ಷಿಣ ವಿಭಾಗದಲ್ಲಿ ಪೊಲೀಸ್ ವಾಹನಗಳ ತಪಾಸಣೆಯನ್ನ ಡಿಸಿಪಿ ರೋಹಿಣಿ ಕಟೋಚ್ ಸಪೆಟ್ ನಡೆಸಿದ್ದಾರೆ. ಜಯನಗರದ 5 ನೇ ಬ್ಲ್ಯಾಕ್ ನಲ್ಲಿರುವ ಕ್ರೀಡಾ ಮೈದಾನದಲ್ಲಿ ಹೊಯ್ಸಳ, ಚೀತಾ ವಾಹನ ಸೇರಿದಂತೆ 180ಕ್ಕೂ ಹೆಚ್ಚು ಪೊಲೀಸ್ ವಾಹನಗಳನ್ನು ಪರಿಶೀಲನೆ ಮಾಡಿ ತೊಂದರೆ ಆದಾಗ ವಾಹನಗಳು ಯಾವ ರೀತಿ ಸ್ಪಂದಿಸುತ್ತವೆ. ತೊಂದರೆ ಆದ ಜಾಗಕ್ಕೆ ಎಷ್ಟು ಬೇಗ ತಲುಪುತ್ತವೆ ಎಂಬುದರ ಮಾಹಿತಿ ಸಂಗ್ರಹಿಸಿದ್ದಾರೆ.