ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನವೆಂಬರ್ 11 ರಂದು ಪ್ರಧಾನಿಮಂತ್ರಿ ನರೇಂದ್ರ ಮೋದಿಯವರಿಂದ ಲೋಕಾರ್ಪಣೆಯಾಗಲಿದೆ. ನೋಡಲು ಉದ್ಯಾನದಂತಿರುವ ಹೊಸ ಟರ್ಮಿನಲ್‌ನಲ್ಲಿ ಕಲಾತ್ಮಕವಾಗಿ ಬಿದಿರು ಬಳಕೆ ಮಾಡಿರುವುದು ಎಲ್ಲರನ್ನೂ ಆಕರ್ಷಿಸುತ್ತಿದೆ.
-
Here are glimpses from Terminal 2 of the Kempegowda International Airport, Bengaluru. This will lead to capacity expansion of the airport and will boost commerce. I am glad that the terminal building accords topmost importance to sustainability. @BLRAirport pic.twitter.com/9MxVyClhig
— Narendra Modi (@narendramodi) November 9, 2022 " class="align-text-top noRightClick twitterSection" data="
">Here are glimpses from Terminal 2 of the Kempegowda International Airport, Bengaluru. This will lead to capacity expansion of the airport and will boost commerce. I am glad that the terminal building accords topmost importance to sustainability. @BLRAirport pic.twitter.com/9MxVyClhig
— Narendra Modi (@narendramodi) November 9, 2022Here are glimpses from Terminal 2 of the Kempegowda International Airport, Bengaluru. This will lead to capacity expansion of the airport and will boost commerce. I am glad that the terminal building accords topmost importance to sustainability. @BLRAirport pic.twitter.com/9MxVyClhig
— Narendra Modi (@narendramodi) November 9, 2022
ಬೆಂಗಳೂರು ನಗರಕ್ಕೆ ಗಾರ್ಡನ್ ಸಿಟಿ ಎಂಬ ಖ್ಯಾತಿ ಇದೆ. ಇದೇ ಮಾದರಿಯಲ್ಲಿ ಏರ್‌ಪೋರ್ಟ್‌ನ ಟರ್ಮಿನಲ್ ಅನ್ನು ಉದ್ಯಾನವನದಂತೆ ಸಿದ್ಧಪಡಿಸಲಾಗಿದೆ. ಟರ್ಮಿನಲ್ ಇನ್ ಎ ಗಾರ್ಡನ್ ಎಂಬ ವಿಷಯದ ಮೇಲೆ ಅಮೆರಿಕನ್ ಆರ್ಕಿಟೆಕ್ಚರಲ್ ಸಂಸ್ಥೆ ಸ್ಕಿಡ್ಮೋರ್, ಓವಿಂಗ್ಸ್ & ಮೆರಿಲ್ ವಿನ್ಯಾಸಗೊಳಿಸಿದ್ದು ಎಲ್ ಆ್ಯಂಡ್ ಟಿ ಕಂಪನಿ ಕಾಮಗಾರಿಯ ಉಸ್ತುವಾರಿ ವಹಿಸಿಕೊಂಡಿತ್ತು.
ವಿಮಾನ ನಿಲ್ದಾಣದ ಒಳಾಂಗಣವನ್ನು ನೈಸರ್ಗಿಕವಾಗಿ ಮಾಡಲು ಬಿದಿರನ್ನು ಹೆಚ್ಚಾಗಿ ಬಳಸಲಾಗಿದೆ. ಬೆಂಗಳೂರು ಮೂಲದ ಬ್ಯಾಂಬೂಜ್-ಫರ್ನ್ ಬಾಂಬು ಪ್ರೈವೇಟ್ ಲಿಮಿಟೆಡ್ ನಿಲ್ದಾಣದ ಒಳಾಂಗಣ ವಿನ್ಯಾಸ ಮಾಡಿದೆ.
ಗ್ರೀನ್ ಏರ್ ಪೋರ್ಟ್ ಪರಿಕಲ್ಪನೆ: ಏರ್ ಪೋರ್ಟ್ ಒಳಗೆ ಮೆಟ್ಟಿಲುಗಳನ್ನು ಇಳಿಯಲು ಮತ್ತು ಹತ್ತಲು ಸಹಾಯವಾಗುವ ಕೈಕಂಬಕ್ಕೆ ಬಿದಿರು ಬಳಕೆ ಮಾಡಲಾಗಿದೆ. ಸುಮಾರು 2 ಕಿ.ಮೀ ನಷ್ಟು ದೂರ ಕೈಕಂಬಗಳನ್ನು ಹಾಕಲಾಗಿದೆ.
ಛಾವಣಿ, ಮೆಟ್ಟಿಲು, ಕಂಬ, ರೇಲಿಂಗ್‌ಗಳಿಗೆ ವ್ಯಾಪಕವಾಗಿ ಬಿದಿರು ಬಳಕೆ ಮಾಡಲಾಗಿದೆ. ಬಿದಿರು ಬಳಕೆ ಪರಿಸರಸ್ನೇಹಿ ಮತ್ತು ಶೂನ್ಯ ಇಂಗಾಲವಾಗಿದೆ ಎಂದು ಬ್ಯಾಂಬೂಜ್ ಫರ್ನ್ ಬಾಂಬು ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕಿ ಇಂದ್ರಾಣಿ ಮುಖರ್ಜಿ ಅಭಿಪ್ರಾಯಪಟ್ಟರು.