ETV Bharat / state

ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್: ಕಾರು ಚಾಲಕನಿಗಾಗಿ ಶೋಧ - hit and run case

ಬೆಂಗಳೂರಿನ ಲಾವೆಲ್ಲೆ ರೋಡ್​ ಬಳಿಯ ರಸ್ತೆಯಲ್ಲಿ ನಿಂತಿದ್ದ ಆಟೋಗೆ ಐಷಾರಾಮಿ ಕಾರೊಂದು ಹಿಂಬದಿಯಿಂದ ಗುದ್ದಿದೆ. ಅಲ್ಲದೆ ಅಲ್ಲೇ‌ ನಿಂತಿದ್ದ ಡಿಯೊ ಬೈಕ್​ಗೂ ಕೂಡ ಡಿಕ್ಕಿ ಹೊಡೆದು ಕ್ಷಣಾರ್ಧದಲ್ಲಿ ಕಾರಿನ ಚಾಲಕ ಪರಾರಿಯಾಗಿದ್ದಾನೆ‌.

Bangalore
ಆಟೋ, ಬೈಕ್​ಗೆ ಗುದ್ದಿ ಕಾರು ನಿಲ್ಲಿಸದೆ ಎಸ್ಕೇಪ್ ಆದ ಚಾಲಕ
author img

By

Published : Feb 7, 2021, 7:51 PM IST

ಬೆಂಗಳೂರು: ಹಿಂಬದಿಯಿಂದ ಆಟೋ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾಗಿದ್ದಾನೆ‌. ಅದೃಷ್ಟವಶಾತ್ ಘಟನೆಯಲ್ಲಿ ಸಾವು-ನೋವು ಉಂಟಾಗಿಲ್ಲ.

ಆಟೋ, ಬೈಕ್​ಗೆ ಗುದ್ದಿ ಕಾರು ನಿಲ್ಲಿಸದೆ ಎಸ್ಕೇಪ್ ಆದ ಚಾಲಕ

ಇಂದು ಮಧ್ಯಾಹ್ನ ನಗರದ ಲಾವೆಲ್ಲೆ ರೋಡ್ ಬಳಿಯ ರಸ್ತೆಯಲ್ಲಿ ನಿಂತಿದ್ದ ಆಟೋಗೆ ಐಷಾರಾಮಿ ಕಾರೊಂದು ಹಿಂಬದಿಯಿಂದ ಗುದ್ದಿದೆ. ಅಲ್ಲದೆ ಅಲ್ಲೇ‌ ನಿಂತಿದ್ದ ಡಿಯೊ ಬೈಕ್​ಗೂ ಕೂಡ ಡಿಕ್ಕಿ ಹೊಡೆದು ನೋಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಕಾರಿನ ಚಾಲಕ ಪರಾರಿಯಾಗಿದ್ದಾನೆ‌.

ಮಾಹಿತಿ ಆಧರಿಸಿ ಸ್ಥಳಕ್ಕೆ ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪಘಾತ‌ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾರು ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.