ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಸೋಂಕಿನ ಲಕ್ಷಣ ಹೆಚ್ಚುತ್ತಿರುವ ಕಾರಣ ಸದ್ಯ ಜನರಲ್ಲಿ ಅರಿವು ಮೂಡಿಸಲು ಸರ್ಕಾರ ಮುಂದಾಗಿದೆ.
ಈಗಾಗಲೇ ಬಿಬಿಎಂಪಿ ಹಾಗೂ ಮಾರ್ಷಲ್ಗಳು, ಪೊಲೀಸರು ಫೀಲ್ಡಿಗೆ ಇಳಿದಿದ್ದು, ಇವರಿಗೆ ಇನ್ಮುಂದೆ ನಗರದ ಡಿಸಿಪಿಗಳು ಕೂಡ ಸಾಥ್ ನೀಡಲಿದ್ದಾರೆ ಎಂದು ಸ್ವತಃ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸಿಟಿ ಜನತೆ ಯಾರಾದರೂ ಮಾಸ್ಕ್ ಹಾಕಿಲ್ಲ ಎಂದರೆ ಕ್ರಿಮಿನಲ್ ಕೇಸ್ ದಾಖಲಿಸಿ, ಎಲ್ಲ ಬೆಂಗಳೂರು ಜನತೆ ಮಾಸ್ಕ್ ಧರಿಸಬೇಕು. ಒಂದು ವೇಳೆ, ಯಾರಾದರೂ ಮಾತು ಕೇಳಿಲ್ಲ ಎಂದರೆ ನಮ್ಮ 100 ನಂಬರ್ಗೆ ಕರೆ ಮಾಡಿ ಹಾಗೆ ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಕರು ನೀಡುವಂತೆ ಮನವಿ ಮಾಡಿದ್ದಾರೆ.
ಹೀಗಾಗಿ ಸಿಟಿ ಜನತೆ ಎಲ್ಲಿಗೇ ತೆರಳಿ ಮುಖಗವಸು ಹಾಕೋದು ಕಡ್ಡಾಯವಾಗಿದೆ. ಒಂದು ವೇಳೆ ಹಾಕದೇ ಇದ್ದರೆ ಖಾಕಿ ನಿಮ್ಮ ಮೇಲೆ ಕಣ್ಣಿಡಲಿದೆ ಎಂದು ಆಯುಕ್ತರು ವಾರ್ನ್ ಮಾಡಿದ್ದಾರೆ.