ETV Bharat / state

ಕಡಲೆಕಾಯಿ ಪರಿಷೆಗೆ ಸಜ್ಜಾಗುತ್ತಿದೆ ಬೆಂಗಳೂರಿನ ಬಸವನಗುಡಿ - ಬಸವನಗುಡಿ ಕಡಲೆಕಾಯಿ ‌ಪರಿಷೆ

ನವೆಂಬರ್​ 29ರಿಂದ (ಸೋಮವಾರ) ಮೂರು ದಿನಗಳ ಕಾಲ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದ ಆವರಣದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಆರಂಭವಾಗಲಿದೆ. ಆದರೆ ಈಗಿನಿಂದಲೇ ಕಡಲೆಕಾಯಿ ವ್ಯಾಪಾರ ಶುರುವಾಗಿದೆ.

Basavanagudi Kadalekai parishe
ಬಸವನಗುಡಿ ಕಾಡಲೆಕಾಯಿ ಪರಿಷೆ
author img

By

Published : Nov 25, 2021, 10:09 PM IST

ಬೆಂಗಳೂರು: ಕಾರ್ತಿಕ ಮಾಸದ ಕೊನೆಯ ಸೋಮವಾರ (ನ.29) ರಂದು ಅದ್ಧೂರಿಯಾಗಿ ನಡೆಯುವ ಕಡಲೆಕಾಯಿ‌ ಪರಿಷೆಗೆ ಮೂರು ದಿನಗಳಷ್ಟೇ ಬಾಕಿ ಉಳಿದಿದ್ದು, ಈಗಾಗಲೇ ಬಸವನಗುಡಿಯಲ್ಲಿ ವ್ಯಾಪಾರ ಆರಂಭವಾಗಿದೆ.

ನಗರದ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದ ಆವರಣದಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಗುಲವನ್ನು ಸುಣ್ಣಬಣ್ಣಗಳಿಂದ ಸಿಂಗಾರ ಮಾಡಲಾಗುತ್ತಿದ್ದು, ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಪರಿಷೆಯಲ್ಲಿ ಕಡಲೆಕಾಯಿ ಹಾಗೂ ಇತರ ಸಣ್ಣಪುಟ್ಟ ಆಟಿಕೆಗಳ ಅಂಗಡಿ ಹಾಗೂ ದಿನಬಳಕೆ ವಸ್ತುಗಳು ಮಾರಾಟಕ್ಕೆ ಸಾವಿರಕ್ಕೂ ಹೆಚ್ಚು ಮಳಿಗೆಗಳಿಗೆ ಅನುಮತಿ ನೀಡಲಾಗಿದೆ.

ಈಗಾಗಲೇ ಫುಟ್​​​ಪಾತ್​​​ಗಳಲ್ಲಿ ಕಡೆಲೆಕಾಯಿ ವ್ಯಾಪಾರ ಆರಂಭವಾಗಿದ್ದು, 1 ಕೆಜಿಗೆ 60 ರೂ ನಂತೆ, 1 ಸೇರಿಗೆ 25 ರಿಂದ 30 ರೂ. ನಂತೆ ಮಾರಾಟವಾಗುತ್ತಿದೆ. ಕಡಲೆಕಾಯಿ‌ ಪರಿಷೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಬಂದು ಕಡಲೆಕಾಯಿ ವ್ಯಾಪಾರದಲ್ಲಿ ತೊಡಗುತ್ತಾರೆ.

ಪರಿಷೆಗೆ ಅಧಿಕೃತವಾಗಿ ಸೋಮವಾರ ಚಾಲನೆ ಸಿಗುತ್ತದೆಯಾದರೂ ವೀಕೆಂಡ್​​​​​​​ನಲ್ಲೇ ಜನ ಖರೀದಿಗೆ ತುಂಬಿಕೊಳ್ಳುತ್ತಾರೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಕಡಲೆಕಾಯಿ ಪರಿಷೆಯನ್ನು ಒಂದು ದಿನ ಮಾತ್ರ ಮಾಡಲಾಗಿತ್ತು. ಆದರೆ ಈ ಬಾರಿ ವಿಜೃಂಭಣೆಯಿಂದ ನ.29 ರಿಂದ ಮೂರು ದಿನಗಳ ಕಾಲ ಆಚರಿಸಲು ಸಿದ್ಧತೆ ನಡೆಯುತ್ತಿದೆ.

ಕಡಲೆಕಾಯಿ ಪರಿಷೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವ ಸಾಧ್ಯತೆ ಇದ್ದು, ಜನರ ನಿಯಂತ್ರಣ, ಪೊಲೀಸ್​​ ಭದ್ರತೆ, ವಾಹನ ಸಂಚಾರದ ವ್ಯವಸ್ಥೆ ಕುರಿತು ಚರ್ಚೆ ನಡೆಯುತ್ತಿದೆ.

ಇದನ್ನೂ ಓದಿ: COVID: ರಾಜ್ಯದಲ್ಲಿಂದು 306 ಮಂದಿಗೆ ಕೋವಿಡ್‌ ಸೋಂಕು, ಇಬ್ಬರು ಬಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.