ಬೆಂಗಳೂರು: ಈಗಾಗಲೇ ಲಾಕ್ಡೌನ್ ಮೇ 17ವರೆಗೆ ವಿಸ್ತರಣೆ ಮಾಡಿರುವ ಹಿನ್ನೆಲೆ ಕೇಂದ್ರ ಸರ್ಕಾರ ಹಸಿರು, ಕಿತ್ತಳೆ, ಕೆಂಪು ಹಾಗೂ ನಿಯಂತ್ರಿತ ವಲಯಗಳಲ್ಲಿ ಯಾವ ಯಾವ ಸೌಲಭ್ಯಗಳು ಇರಲಿದೆ ಎಂಬ ಮಾಹಿತಿ ಬಿಡುಗಡೆ ಮಾಡಿದೆ.
ಈ ವಿಚಾರವಾಗಿ ರಾಜ್ಯ ಸರ್ಕಾರ ಚರ್ಚಿಸಿ ಸಂಜೆಯೊಳಗೆ ಬೆಂಗಳೂರು ನಗರದ ಯಾವ ಯಾವ ಪ್ರದೇಶದಲ್ಲಿ ಯಾವ ಸೌಲಭ್ಯಗಳು ಇರಲಿವೆ ಎಂಬುದು ಖಚಿತವಾಗಲಿದೆ. ಆದರೆ ರಾಜ್ಯ ಸರ್ಕಾರ ನೀಡಿರುವ ನಿಯಮದಂತೆಯೇ ಸ್ವಲ್ಪ ಬದಲಾವಣೆಗಳೊಂದಿಗೆ ನಿಯಮಗಳನ್ನು ಮಾಡಬಹುದು ಎಂದು ಪಾಲಿಕೆ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದ್ದಾರೆ. ಪ್ರಸ್ತುತ ನಗರದಲ್ಲಿ 25 ಕಂಟೇನ್ಮೆಂಟ್ ಝೋನ್ಗಳಿವೆ. ಇಲ್ಲಿ ಯಾವ ಸೌಲಭ್ಯಗಳೂ ಸಿಗುವುದಿಲ್ಲ, ಜನರೂ ಹೊರಬರುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿರ್ಬಂಧಗಳಿವೆ. ಯಾವ್ ಯಾವ ವಲಯದಲ್ಲಿ ಏನೇನು ಸಿಗುತ್ತದೆ..? ಇಲ್ಲಿದೆ ಮಾಹಿತಿ.
- ಮೆಡಿಕಲ್
- ಕ್ಲಿನಿಕ್
- ಹೊರರೋಗಿ ಕೇಂದ್ರ
- ಕಾರಿನಲ್ಲಿ ಮೂವರ ಸಂಚಾರಕ್ಕೆ ಅವಕಾಶ
- ದ್ವಿಚಕ್ರ ವಾಹನದಲ್ಲಿ ಇಬ್ಬರ ಸಂಚಾರ
- ಅಗತ್ಯ ವಸ್ತುಗಳ ಮಳಿಗೆ ಓಪನ್
- ಸರಕು ಸಾಗಣೆ ವಾಹನಗಳ ಸಾಗಾಟ
- ಬ್ಯಾಂಕ್ ವ್ಯವಹಾರ
- ಕೊರಿಯರ್, ಅಂಚೆಗೆ ಅವಕಾಶ
- ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಎಲ್ಲವೂ ಬಂದ್
ಆರೆಂಜ್ ಝೋನ್ನಲ್ಲಿ ಏನಿರುತ್ತದೆ..?
- ಕ್ಷೌರ ಅಂಗಡಿ
- ಮೆಡಿಕಲ್
- ಕ್ಲಿನಿಕ್
- ಓಪಿಡಿ ಓಪನ್
- ಆಟೋ, ಟ್ಯಾಕ್ಸಿ, ದ್ವಿಚಕ್ರದಲ್ಲಿ (ನಿಗದಿತ ಸಂಖ್ಯೆಯಲ್ಲಿ ಪ್ರಯಾಣ)
- ಜಿಲ್ಲಾ ಬಸ್ಗಳ ಸಂಚಾರ ಪ್ರಮಾಣ ನಿರ್ಧಾರ
- ಕೈಗಾರಿಕೆಗಳು ನಿರ್ಬಂಧಗಳೊಂದಿಗೆ ತೆರೆಯುವ ಬಗ್ಗೆ ಪ್ರಸ್ತಾಪ
- ಕಟ್ಟಡ ನಿರ್ಮಾಣಕ್ಕೆ ಅವಕಾಶ
- ಎಲ್ಲಾ ರೀತಿಯ ಅಂಗಡಿ ತೆರೆಯುವ ಬಗ್ಗೆಯೂ ಪ್ರಸ್ತಾಪ
- ಬ್ಯಾಂಕ್ ಟ್ರಾಫಿಕ್, ಸರಕು ಸಾಗಣೆಗೆ ಅವಕಾಶ
ಆರೆಂಜ್ ಝೋನ್ನಲ್ಲಿ ಏನಿರುವುದಿಲ್ಲ
- ಮೆಟ್ರೋ, ರೈಲು, ವಿಮಾನ
- ಶಾಲೆ, ಕಾಲೇಜು
- ಹೋಟೆಲ್, ಸಿನಿಮಾ, ಮಾಲ್
- ದೇವಾಲಯ, ಸಭೆ, ಸಮಾರಂಭ
- 65 ಮೇಲ್ಪಟ್ಟ ವೃದ್ಧ, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹೊರಬರುವಂತಿಲ್ಲ
ಹಸಿರು ವಲಯದಲ್ಲಿ ಏನಿರುತ್ತದೆ..?
- ಕ್ಷೌರ ಅಂಗಡಿ
- ಮೆಡಿಕಲ್
- ಕ್ಲಿನಿಕ್
- ಓಪಿಡಿ
- ಆಟೋ, ಟ್ಯಾಕ್ಸಿ, ದ್ವಿಚಕ್ರ ವಾಹನ (ನಿಗದಿತ ಸಂಖ್ಯೆಯಲ್ಲಿ ಪ್ರಯಾಣ)
- ಜಿಲ್ಲಾ ಬಸ್ಗಳ ಸಂಚಾರ ಪ್ರಮಾಣ ಇಂದು ನಿರ್ಧಾರ
- ಕೈಗಾರಿಕೆಗಳು ನಿರ್ಬಂಧಗಳೊಂದಿಗೆ ತೆರೆಯುವ ಬಗ್ಗೆ ಪ್ರಸ್ತಾಪ
- ಕಟ್ಟಡ ನಿರ್ಮಾಣಕ್ಕೆ ಅವಕಾಶ
- ಎಲ್ಲಾ ರೀತಿಯ ಅಂಗಡಿ ತೆರೆಯುವ ಬಗ್ಗೆಯೂ ಪ್ರಸ್ತಾಪ
- ಬ್ಯಾಂಕ್, ಟ್ರಾಫಿಕ್, ಸರಕುಸಾಗಣೆಗೆ ಅವಕಾಶ
ಹಸಿರು ವಲಯದಲ್ಲಿ ಏನಿರುವುದಿಲ್ಲ..?
- ಮೆಟ್ರೋ, ರೈಲು, ವಿಮಾನ
- ಶಾಲೆ, ಕಾಲೇಜು
- ಹೋಟೆಲ್, ಸಿನಿಮಾ, ಮಾಲ್
- ದೇವಾಲಯ, ಸಭೆ, ಸಮಾರಂಭ
- 65 ಮೇಲ್ಪಟ್ಟ ವೃದ್ಧ, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಹೊರಬರುವಂತಿಲ್ಲ