ETV Bharat / state

ಮಾಜಿ ಸಿಎಂ ಧರಂಸಿಂಗ್ ಸಂಬಂಧಿ ಕೊಲೆ ಪ್ರಕರಣ.. ಮಲತಾಯಿ ಇಂದೂ ಚೌಹಾಣ್ ಪೊಲೀಸ್ ವಶಕ್ಕೆ.. - ಚೌಹಾಣ್ ಶ್ಯಾಮ್

ಕೊಲೆ ಯಾವ ಕಾರಣಕ್ಕಾಗಿ ಮಾಡಿದ್ದಾರೆ, ವಶಕ್ಕೆ ಪಡೆದುಕೊಂಡ ಆರೋಪಿಯ ಪಾತ್ರ ಹಾಗೂ ಯಾವ ರೀತಿಯಲ್ಲಿ ಸಿದ್ದಾರ್ಥ್‌ನನ್ನು ಹತ್ಯೆಗೈಯಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು..

aunty-indu-chauhan-detained-by-police-in-link-with-siddarth-murder-case
ಚಿಕ್ಕಮ್ಮ ಇಂದೂ ಚೌಹಾಣ್ ಪೊಲೀಸ್ ವಶಕ್ಕೆ
author img

By

Published : Feb 3, 2021, 9:43 PM IST

Updated : Feb 4, 2021, 10:58 AM IST

ಬೆಂಗಳೂರು : ಮಾಜಿ ಸಿಎಂ ಧರಂಸಿಂಗ್ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣದಲ್ಲಿ ಅಮೃತಹಳ್ಳಿ ಠಾಣಾ ಪೊಲೀಸರು ಸಿದ್ಧಾರ್ಥ್ ಮಲತಾಯಿ ಇಂದೂ ಚೌಹಾಣ್‌ರನ್ನು ವಶಕ್ಕೆ ಪಡೆದಿದ್ದಾರೆ.

ಸಿದ್ಧಾರ್ಥ್ ತಂದೆ ದೇವೇಂದರ್ ಸಿಂಗ್​​ನ ಎರಡನೇ ಪತ್ನಿಯಾಗಿದ್ದ ಇಂದೂ ಚೌಹಾಣ್ ಶ್ಯಾಮ್ ಹಾಗೂ ವಿನೋದ್‌​​ಗೆ ಸುಪಾರಿ ಕೊಟ್ಟಿದ್ದ ಆರೋಪ ಹಿನ್ನೆಲೆ ಬಂಧಿಸಲಾಗಿದೆ. ಅಮೃತಹಳ್ಳಿ ಪೊಲೀಸರಿಂದ ಇಂದೂ ಚೌಹಾಣ್​​ರನ್ನು ವಿಚಾರಣೆಗೊಳಪಡಿಸಿದ್ದು, ತನಿಖೆ ಮುಂದುವರೆದಿದೆ.

ಪ್ರಕರಣದ ಹಿನ್ನಲೆ : ಮಾಜಿ‌ ಮುಖ್ಯಮಂತ್ರಿ ಧರಂಸಿಂಗ್ ಸಂಬಂಧಿ ಸಿದ್ದಾರ್ಥ್​​​ನನ್ನು ಅಪಹರಿಸಿ ಕೊಲೆ ಪ್ರಕರಣ ಸಂಬಂಧ ಅಮೃತಹಳ್ಳಿ ಪೊಲೀಸರು ಆರೋಪಿಯೋರ್ವನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದರು.

ತಿರುಪತಿ ಮೂಲದ ವಿನೋದ್ ನೀಡಿದ ಮಾಹಿತಿ ಮೇರೆಗೆ ಅಮೃತಹಳ್ಳಿ ಪೊಲೀಸ್ ಠಾಣೆಯ ವಿಶೇಷ ತಂಡ ನೆಲ್ಲೂರಿನ ನಲ್ಲಮಲ್ಲ‌ ಅರಣ್ಯಪ್ರದೇಶದಲ್ಲಿ ಸಿದ್ದಾರ್ಥ್ ಶವ ಪತ್ತೆ ಮಾಡಲು ಸ್ಥಳಕ್ಕೆ ದೌಡಾಯಿಸಿದ್ದರು. ಸ್ಥಳೀಯ ತಹಶೀಲ್ದಾರ್ ಹಾಗೂ ವೈದ್ಯರ ಅನುಮತಿ ಬಳಿಕ ಹೂಳಿರುವ ಶವ ಹೊರ ತೆಗೆಯಲಾಗಿತ್ತು.

ಅಮೆರಿಕಾದಲ್ಲಿ ವ್ಯಾಸಂಗ ಮಾಡಿದ್ದ 28 ವರ್ಷದ ಸಿದ್ದಾರ್ಥ್ ಅಮೃತಹಳ್ಳಿಯ ದಾಸರಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದರು. ಸ್ಟಾರ್ಟ್ ಅಪ್ ಕಂಪನಿ ತೆರೆದು ಕಾರ್ಯನಿರ್ವಹಿಸುತ್ತಿದ್ದರು. ಒಬ್ಬರೇ ಮನೆಯಲ್ಲಿದ್ದರು.

ಜನವರಿ 19ರಂದು ತಂದೆ ದೇವೆಂದರ್ ಸಿಂಗ್​​​ಗೆ ಕೊನೆ ಬಾರಿ ಮಾಡಿದ ಮೇಸೆಜ್​​ನಲ್ಲಿ ಸ್ನೇಹಿತರನ್ನು ಭೇಟಿಯಾಗಲು ಅಮೆರಿಕಾಗೆ ಹೋಗುತ್ತಿರುವುದಾಗಿ ಸಿದ್ದಾರ್ಥ್ ವಾಟ್ಸ್‌ಆ್ಯಪ್ ಮಾಡಿದ್ದ. ಅನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು‌. ಎರಡು ಮೂರು ದಿನ ಕಳೆದ್ರೂ ಮಗ ಅಮೆರಿಕಾಗೆ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿರುವುದರಿಂದ ಆತಂಕಗೊಂಡು ಜನವರಿ 25ರಂದು ಅಮೃತಹಳ್ಳಿ‌‌ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಕಾರ್ಯಪ್ರವೃತ್ತರಾದ ವಿಶೇಷ ತಂಡ ತಾಂತ್ರಿಕ ಸಾಕ್ಷ್ಯ ಆಧಾರದ ಮೇರೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ಆತ ನೀಡಿದ ಸುಳಿವಿನ ಮೇರೆಗೆ ನಲ್ಲೂರು ಅರಣ್ಯ ಪ್ರದೇಶದಲ್ಲಿ ಶವ ಹೂತು ಹಾಕಿರುವುದಾಗಿ ಮಾಹಿತಿ ನೀಡಿದ್ದನು.

ಕೊಲೆ ಯಾವ ಕಾರಣಕ್ಕಾಗಿ ಮಾಡಿದ್ದಾರೆ, ವಶಕ್ಕೆ ಪಡೆದುಕೊಂಡ ಆರೋಪಿಯ ಪಾತ್ರ ಹಾಗೂ ಯಾವ ರೀತಿಯಲ್ಲಿ ಸಿದ್ದಾರ್ಥ್‌ನನ್ನು ಹತ್ಯೆಗೈಯಲಾಗಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.

ಕೊಲೆ ಪ್ರಕರಣದಲ್ಲಿ ಹಲವು ಆರೋಪಿಗಳು ಭಾಗಿಯಾಗಿದ್ದ ಶಂಕೆ ಮೇರೆಗೆ ಅವರ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ‌. ಕೊಲೆ ಹಿಂದೆ ವೈಯಕ್ತಿಕ ದ್ವೇಷ ಹಾಗೂ ಹಣಕಾಸಿನ ವೈಷಮ್ಯ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಯಿತು. ಶೀಘ್ರದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗುವುದು ಎಂದು ನಗರ ಈಶಾನ್ಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದರು.

ಇದನ್ನೂ ಓದಿ: ಮಾಜಿ ಸಿಎಂ ದಿ.ಧರಂಸಿಂಗ್​ ಸಂಬಂಧಿ ಕೊಲೆ ಪ್ರಕರಣ: ಸಿದ್ದಾರ್ಥ್​ ಮೃತದೇಹ ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು!

Last Updated : Feb 4, 2021, 10:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.