ETV Bharat / state

ಬೀದಿನಾಯಿಗೆ ಊಟ ಹಾಕುವ ವಿಚಾರಕ್ಕೆ ಗಲಾಟೆ: ಮಹಿಳಾ ಟೆಕ್ಕಿ‌ಗೆ ಚಪ್ಪಲಿಯಿಂದ ಹಲ್ಲೆ ಯತ್ನ - Bangalore latest update news

ನಿತ್ಯ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದ ಮಹಿಳಾ ಟೆಕ್ಕಿಗೆ ಸ್ಥಳೀಯ ಯುವಕನೋರ್ವ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ್ದಾನೆ. ಮಾ.5 ರ ರಾತ್ರಿ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.

Attempted assault on women's techie
ಮಹಿಳಾ ಟೆಕ್ಕಿ‌ ಮೇಲೆ ಚಪ್ಪಲಿಯಿಂದ ಹಲ್ಲೆ ಯತ್ನ
author img

By

Published : Mar 7, 2021, 2:37 PM IST

ಬೆಂಗಳೂರು: ಬೀದಿ ನಾಯಿಗೆ ಊಟ ಹಾಕುವ ವಿಚಾರಕ್ಕೆ ಮಹಿಳಾ ಟೆಕ್ಕಿ‌ ಮೇಲೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಿತ್ಯ ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದ ಮಹಿಳಾ ಟೆಕ್ಕಿ ನಾಗರಭಾವಿ ನಿವಾಸಿ. ಈಕೆ ನಿತ್ಯ ಊಟ ಹಾಕಲು ಬರುವುದರಿಂದ ನಾಯಿಗಳು ರಸ್ತೆಯಲ್ಲಿ ಒಂದೆಡೆ ಸೇರುತ್ತವೆ. ರಸ್ತೆಯಲ್ಲಿ ಓಡಾಡೋ ಬೈಕ್ ಸವಾರರನ್ನ ಹಿಂಬಾಲಿಸಿ ಕಚ್ಚಲು ಬರ್ತವೆ ಎಂದು ಟೆಕ್ಕಿ ಜೊತೆ ಸ್ಥಳೀಯರು ಗಲಾಟೆ ಮಾಡಿದ್ದರು.

ಮಹಿಳಾ ಟೆಕ್ಕಿ‌ ಮೇಲೆ ಚಪ್ಪಲಿಯಿಂದ ಹಲ್ಲೆ ಯತ್ನ ವಿಡಿಯೋ

ಬೀದಿ ನಾಯಿಗಳಿಗೆ ಆಹಾರ ಹಾಕುವುದಾದರೆ ನಿನ್ನ ಮನೆಯಲ್ಲಿ ಸಾಕಿ ಊಟ ಹಾಕು. ಇದೇನು ನಿನ್ನ ಸ್ವಂತ ಮನೆಯಲ್ಲ ಎಂದು ಸ್ಥಳೀಯರು ಟೆಕ್ಕಿಗೆ ಅವಾಜ್ ಹಾಕಿದ್ದಾರೆ. ಆಗ ನಾನೇನು ಹೊಸದಾಗಿ ಊಟ ಹಾಕುತ್ತಿಲ್ಲ, ಪ್ರತಿನಿತ್ಯ ನಾಯಿಗಳಿಗೆ ಊಟ ಹಾಕುತ್ತಿದ್ದೇನೆ ಎಂದು ಸ್ಥಳೀಯರ ಜೊತೆ ವಾಗ್ವಾದಕ್ಕಿಳಿದಾಗ, ಮಾತಿಗೆ ಮಾತು ಬೆಳೆದು ಮಹಿಳಾ ಟೆಕ್ಕಿಗೆ ಅವಾಚ್ಯ ಶಬ್ದಗಳಿಂದ ಸ್ಥಳೀಯರು ನಿಂದಿಸಿದ್ದಾರೆ.

ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಟೆಕ್ಕಿಗೆ ಕಲ್ಲಿನಿಂದ ಹೊಡೆಯಲು ಯತ್ನಿಸಿದ್ದಾರೆ. ನೀವೇನು ವಿದ್ಯಾವಂತ ಮಹಿಳೆನಾ ಅಥವಾ ಇಲ್ಲವಾ ಅಂತ ಮಹಿಳೆ ಟೆಕ್ಕಿ ಮಹಿಳೆಯನ್ನು ಪ್ರಶ್ನಿಸಿದ್ದಾಳೆ. ಇದರಿಂದ ಕುಪಿತಗೊಂಡ ಸ್ಥಳೀಯ ಯುವಕ ಅವಾಚ್ಯವಾಗಿ ನಿಂದಿಸಿದ್ದಲ್ಲದೇ ಮಹಿಳಾ ಟೆಕ್ಕಿ ಮೇಲೆ ಚಪ್ಪಲಿ ಎಸೆದಿದ್ದಾನೆ. ಮಾ. 5ರ ರಾತ್ರಿ ಘಟನೆ ನಡೆದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ.

ನಾಗರ ಭಾವಿಯ ವಿನಾಯಕ ಲೇಔಟ್​​ನಲ್ಲಿ ನಡೆದಿರುವ ಘಟನೆ ಇದಾಗಿದ್ದು, ಈವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.