ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಅಕ್ರಮವಾಗಿ ನಡೆಸುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ ನಡೆಸಿದ್ದಾರೆ.
ನಗರದ ಮಹಾಲಕ್ಷ್ಮೀ ಲೇಔಟ್ನಲ್ಲಿ ಹೋಟೆಲ್, ಅಶೋಕನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್ನಲ್ಲಿ ಬೆಳಗಿನ ಜಾವ 4 ಗಂಟೆಯವರೆಗೂ ರೇವ್ ಪಾರ್ಟಿ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ದಾಳಿ ವೇಳೆ ಧ್ವನಿ ವರ್ಧಕ ಬಳಸಿ ಜೋರಾಗಿ ಹಾಡುಗಳನ್ನ ಹಾಕಿ ಗ್ರಾಹಕರಿಗೆ ಡಾನ್ಸ್ ಮಾಡಲು ಅವಕಾಶ ನೀಡಿರುವುದು ತಿಳಿದುಬಂದಿದೆ. ಹೀಗಾಗಿ 50 ಮಂದಿ ವಿದೇಶಿಯರೂ ಸೇರಿ ಒಟ್ಟು 175 ಜನರನ್ನ ಬಂಧಿಸಿ ಮಹಾಲಕ್ಷ್ಮಿ ಲೇಔಟ್ ಹಾಗೂ ಅಶೋಕ್ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರೇವ್ ಪಾರ್ಟಿ ವೇಳೆ ಮಾದಕ ದ್ರವ್ಯ ಬಳಸಿರುವ ಗುಮಾನಿ ಇದ್ದು, ತನಿಖೆ ಮುಂದುವರೆದಿದೆ.