ETV Bharat / state

ಆಪ್ತ ಸ್ನೇಹಿತ ರವಿಶಂಕರ್ ಅರೆಸ್ಟ್, ರಾಗಿಣಿಗೆ 'ಬಿಸಿ ತುಪ್ಪ'ವಾದ ಡ್ರಗ್​ ಮಾಫಿಯಾ ನಂಟು - Sandalwood drugs case

ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಕುರಿತು ಸಿಸಿಬಿಯಲ್ಲಿ ವಿಚಾರಣೆ ಚುರುಕುಗೊಂಡಿದ್ದು, ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ. ತನಿಖೆ ಬಹಳ ಚುರುಕಿನಿಂದ ಸಾಗಿದೆ. ನಟಿ ರಾಗಿಣಿ ಅವರ ಆಪ್ತ ರವಿಶಂಕರ್​ನನ್ನು ನಿನ್ನೆ ವಿಚಾರಣೆಗೆ ಒಳಪಡಿಸಿ, ಇಂದು ಬಂಧಿಸಿದ್ದೇವೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ. ಇದು ರಾಗಿಣಿಯನ್ನು ಮತ್ತಷ್ಟು ಸಂಕಷ್ಟಕ್ಕೀಡುಮಾಡಿದೆ.

Ravi Shankar arrest
ರವಿಶಂಕರ್ ಆರೆಸ್ಟ್
author img

By

Published : Sep 3, 2020, 4:10 PM IST

Updated : Sep 3, 2020, 4:45 PM IST

ಬೆಂಗಳೂರು: ನಟಿ ರಾಗಿಣಿ ಅವರ ಆಪ್ತ ರವಿಶಂಕರ್​ನನ್ನು ನಿನ್ನೆ ವಿಚಾರಣೆಗೆ ಒಳಪಡಿಸಿ, ಇಂದು ಬಂಧಿಸಿದ್ದೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾ ಕುರಿತು ಸಿಸಿಬಿಯಲ್ಲಿ ವಿಚಾರಣೆ ಚುರುಕುಗೊಂಡಿದ್ದು, ಈ ಬಗ್ಗೆ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಡ್ರಗ್ ಪ್ರಕರಣ ಸಂಬಂಧ ನಗರದಾದ್ಯಂತ ಶೋಧ ಕಾರ್ಯ ಮಾಡಲಾಗುತ್ತಿದೆ. ಸದ್ಯ ನಗರದಾದ್ಯಂತ ಡ್ರಗ್ಸ್ ಜಾಲ ಪತ್ತೆಗೆ ಮುಂದಾಗಿದ್ದೇವೆ. ಸ್ಯಾಂಡಲ್​ವುಡ್​ನಲ್ಲಿ ಡ್ರಗ್ ವಿಚಾರ ಸಂಬಂಧ ನಿರ್ಮಾಪಕ ಇಂದ್ರಜಿತ್ ಲಂಕೇಶ್​ ಕೆಲ‌ ಸಾಕ್ಷ್ಯಗಳನ್ನು ಕೊಡುತ್ತೇನೆ ಎಂದಿದ್ದರು. ಸದ್ಯ ಇಂದು ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ. ಇಂದ್ರಜಿತ್ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದೇವೆ ಎಂದರು.

ಇಂದು ವಿಚಾರಣೆಗೆ ಹಾಜರಾಗಲು ನಟಿ ರಾಗಿಣಿಗೆ ನೋಟಿಸ್ ನೀಡಿದ್ದೆವು. ಆದರೆ ಅವರು ಬಂದಿಲ್ಲ. ಮತ್ತೊಂದೆಡೆ ಕೆಲವರನ್ನು ಕರೆತಂದು ವಿಚಾರಣೆ ಮಾಡುತ್ತಿದ್ದೇವೆ. ಬೇರೆ ಬೇರೆ ಕಡೆಗಳಿಂದ ನಮಗೆ ಮಾಹಿತಿ ಬರುತ್ತಿದೆ. ಸದ್ಯ ನಟಿಗೆ ನಾಳೆ ಹತ್ತು ಗಂಟೆಗೆ ಮತ್ತೆ ಸಿಸಿಬಿ ಕಚೇರಿಗೆ ಬರುವಂತೆ ಮತ್ತೊಂದು ನೋಟಿಸ್ ನೀಡಿದ್ದೇವೆ. ಎಲ್ಲಾ ಮಾಹಿತಿಗಳನ್ನು ಸಂಗ್ರಹ ಮಾಡಲಾಗುತ್ತಿದೆ‌ ಎಂದರು.

ನಟಿ ರಾಗಿಣಿ ಅವರ ಆಪ್ತ ರವಿಶಂಕರ್​ನನ್ನು ನಿನ್ನೆ ವಿಚಾರಣೆಗೆ ಒಳಪಡಿಸಿ, ಇಂದು ಬಂಧಿಸಿದ್ದೇವೆ. ತನಿಖೆ ಬಹಳ ಚುರುಕಿನಿಂದ ಸಾಗಿದೆ. ಯಾರೇ ಈ ಜಾಲದಲ್ಲಿದ್ದರೂ ಕೂಡ, ಬಂಧನವಾಗುವುದು ಖಚಿತ. ಕೆಲವೊಬ್ಬರ ಮೇಲೆ ಅನುಮಾನದ ಮೇರೆಗೆ ತನಿಖೆ ಮುಂದುವರಿದಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

Last Updated : Sep 3, 2020, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.