ETV Bharat / state

'ವಿಶ್ವದ ಗಮನ ಸೆಳೆದಿರುವ ಬೆಂಗಳೂರಿನ ಕನ್ನಡೇತರರಿಗೆ ಕನ್ನಡ ಕಲಿಸುವುದು ಅಗತ್ಯ' - ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ 2 ದಿನದ ತರಬೇತಿ ಕಾರ್ಯಾಗಾರ

ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಿಶ್ವದ ವಿವಿಧೆಡೆಯಿಂದ ಉದ್ಯೋಗ ಅರಸಿ ಬರುವ ಕನ್ನಡೇತರರು ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲಿತು ಅಭಿಮಾನಿಸಿ ಕನ್ನಡದ ಸಾರ್ವಭೌಮತೆಗೆ ಶ್ರಮಿಸಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.

Arvind Limbavali
ಅರವಿಂದ ಲಿಂಬಾವಳಿ
author img

By

Published : Feb 5, 2021, 8:47 PM IST

ಬೆಂಗಳೂರು: ವಿಶ್ವದ ಗಮನ ಸೆಳೆದಿರುವ ಬೆಂಗಳೂರಿನ ಕನ್ನಡೇತರರಿಗೆ ಕನ್ನಡ ಕಲಿಸುವುದು ಅಗತ್ಯ ಎಂದು ಕನ್ನಡ, ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಕಾಸಸೌಧದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ 2 ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ತಮ್ಮ ಸುತ್ತಲಿರುವ ಒಬ್ಬ ಕನ್ನಡೇತರರಿಗಾದರೂ ಕನ್ನಡ ಕಲಿಸುವ ಪ್ರತಿಜ್ಞೆ ಮಾಡಿಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟರು.

ಬೆಳೆಯುತ್ತಿರುವ ಬೆಂಗಳೂರಿನಲ್ಲಿ ವಿಶ್ವದ ವಿವಿಧೆಡೆಯಿಂದ ಉದ್ಯೋಗ ಅರಸಿ ಬರುವ ಕನ್ನಡೇತರರು ಕನ್ನಡ ಭಾಷೆ, ಸಂಸ್ಕೃತಿಯನ್ನು ಕಲಿತು ಅಭಿಮಾನಿಸಿ ಕನ್ನಡದ ಸಾರ್ವಭೌಮತೆಗೆ ಶ್ರಮಿಸಬೇಕಿದೆ. ಕನ್ನಡಿಗ ಸಾಫ್ಟ್ ವೇರ್ ತಜ್ಞರೊಬ್ಬರು ಕನ್ನಡದ ‘ಗುರು’ ಪದವನ್ನು ವಿಶ್ವವ್ಯಾಪಿಯಾಗಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅದೇ ರೀತಿ ಪ್ರತಿಯೊಬ್ಬರೂ ಒಂದೊಂದು ಪದವನ್ನು ಪಸರಿಸುತ್ತಾ ಹೋದಲ್ಲಿ ಕನ್ನಡ ತಾನಾಗಿಯೇ ವಿಶ್ವಮಟ್ಟಕ್ಕೆ ಏರಲಿದೆ ಎಂದರು.

Arvind Limbavali talks about kannada language development
ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ 2 ದಿನದ ತರಬೇತಿ ಕಾರ್ಯಾಗಾರ

ಕರ್ನಾಟಕ ಶ್ರೀಗಂಧವಿದ್ದಂತೆ, ಅದನ್ನು ತೇಯ್ದಂತೆ ಪರಿಮಳಹೊಮ್ಮುವ ರೀತಿಯಲ್ಲಿ ಸುಮಧುರವಾದ ಕನ್ನಡವನ್ನು ಯಥೇಚ್ಛವಾಗಿ ಬಳಸಿದಲ್ಲಿ ಕನ್ನಡ ವಿಶ್ವವ್ಯಾಪಿಯಾಗಲಿದೆ ಎಂದರು.

ಮುಖ್ಯಮಂತ್ರಿಗಳು ಕನ್ನಡ ಕಾಯಕ ವರ್ಷಾಚರಣೆ ಘೋಷಿಸಿದ್ದು, ಪ್ರಾಧಿಕಾರವು ಆ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆಗಳನ್ನು ರೂಪಿಸಿಕೊಂಡಿದೆ. ಅದರ ಜೊತೆಗೆ ‘ಕನ್ನಡ ಕಾಯಕ ವರ್ಷವನ್ನು ನಮ್ಮೆಲ್ಲರ ಕಾಯಕ ವರ್ಷ’ ಎಂದು ಭಾವಿಸಿ ಕನ್ನಡ ಕಟ್ಟುವಿಕೆಯಲ್ಲಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.

ಕನ್ನಡ ಕಲಿಸುವುದೆಮದರೆ ಕಂಗ್ಲಿಷ್ ಕಲಿಸುವುದಲ್ಲ. ಬದಲಿಗೆ ಆಡುಭಾಷೆ ಕನ್ನಡವನ್ನು ಅಭಿಮಾನ ಮೂಡುವಂತೆ ಕಲಿಸುವುದು ಬಹಳ ಮುಖ್ಯ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡೇತರರಿಗೆ ಕನ್ನಡ ಕಲಿಸುವ ಮಹತ್ವದ ಕಾರ್ಯ ಹಮ್ಮಿಕೊಂಡಿವುದು ಅಭಿನಂದನೀಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಹೋರಾಟದ ದಿನಗಳನ್ನು ಸ್ಮರಿಸಿಕೊಂಡರು.

ಓದಿ: ವಿಧಾನ ಪರಿಷತ್ ಸಭಾಪತಿ ಚುನಾವಣೆ ದಿನಾಂಕ ಪ್ರಕಟಿಸಿದ ರಾಜ್ಯಪಾಲರು

ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣಮಾತನಾಡಿ, ಕನ್ನಡೇತರರಿಗೆ ಯಾವ ರೀತಿ ಅಭಿಮಾನ ಪೂರ್ವಕವಾಗಿ ಕಲಿಸಬೇಕು ಎಂಬುದನ್ನು ಈ ಕಾರ್ಯಾಗಾರದಲ್ಲಿ ಹೇಳಿಕೊಡಲಾಗುವುದು. ಅದರಂತೆ ಮತ್ತು ಆಯಾ ಪ್ರಾದೇಶಿಕತೆಗೆ ಪೂರಕವಾಗಿ ಪಠ್ಯಕ್ರಮ ರೂಪಿಸಿಕೊಂಡು ಕನ್ನಡ ಕಲಿಸುವಂತೆ ಸಲಹೆ ನೀಡಿದರು.

ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ. ಮುರಳಿಧರ ಪ್ರಾಸ್ತಾವಿಕ ನುಡಿಗಳನ್ನಾಡಿದರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಪ್ರೊ. ಅಬ್ದುಲ್ ರೆಹಮಾನ್ ಪಾಷಾ, ಡಾ. ಕಿಶೋರ್, ಕನ್ನಡ ಜಾಗೃತಿ ಸಮಿತಿ ಸದಸ್ಯರು, ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.