ETV Bharat / state

ಕಮಾಂಡೋ ವೇಷ ಧರಿಸಿ ಪಾಕ್​​ನ ಐಎಸ್​ಐಗೆ ಸೇನೆ ಮಾಹಿತಿ ನೀಡುತ್ತಿದ್ದ ಆರೋಪಿ ಬಂಧನ - ಆರೋಪಿ ಬಂಧನ

ಯುವತಿ ಸೋಗಿನಲ್ಲಿದ್ದ ಐಎಸ್ಎ ಅಧಿಕಾರಿ ನನಗೆ ಭಾರತವೆಂದರೆ ತುಂಬಾ ಇಷ್ಟ, ಭಾರತೀಯ ಸೇನಾ ನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ‌ ಫೋಟೋಗಳಿದ್ದರೆ ಕಳುಹಿಸು ಎಂದಿದ್ದಾನೆ. ಇದಕ್ಕೆ ಸಮ್ಮತಿ ಸೂಚಿಸಿದ್ದ ಈತ, ಇದಕ್ಕಾಗಿ ಕಮಾಂಡರ್ ವೇಷ ಧರಿಸಿ ಸೇನಾನೆಲೆಗಳ ಬಳಿ ಹೋಗಿ ಫೋಟೋಗಳನ್ನು ಸೆರೆ ಹಿಡಿದು‌ ಶೇರ್ ಮಾಡುತ್ತಿದ್ದ..

ಪಾಕ್​​ನ ಐಎಸ್​ಐಗೆ ಸೇನೆ ಮಾಹಿತಿ ನೀಡುತ್ತಿದ್ದ ಆರೋಪಿ ಬಂಧನ

author img

By

Published : Sep 20, 2021, 3:19 PM IST

Updated : Sep 20, 2021, 4:05 PM IST

ಬೆಂಗಳೂರು : ಆರ್ಮಿ ಕಮ್ಯಾಂಡೋ ವೇಷ ಧರಿಸಿ ರಾಜಸ್ಥಾನದ ಬಾರ್ಮೆರ್​​ ಮಿಲಿಟರಿ ಸ್ಟೇಷನ್ನಿನ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್​ಐ ಅಧಿಕಾರಿಗಳಿಗೆ ರವಾನಿಸುತ್ತಿದ್ದ ಯುವಕನನ್ನು ಮಿಲಿಟರಿ ಗುಪ್ತಚರ ವಿಭಾಗದ ದಕ್ಷಿಣ ಕಮಾಂಡೊ ತಂಡ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರದಲ್ಲಿ ಬಟ್ಟೆ ವ್ಯಾಪಾರಿಯಾಗಿ ಕೆಲಸ ಮಾಡಿಕೊಂಡಿದ್ದ ಜಿತೇಂದರ್​ ಸಿಂಗ್​ ಎಂಬಾತ ಬಂಧಿತ ಆರೋಪಿ.

ಪಾಕ್​​ನ ಐಎಸ್​ಐಗೆ ಸೇನೆ ಮಾಹಿತಿ ನೀಡುತ್ತಿದ್ದ ಆರೋಪಿ ಬಂಧನ

ಕಾಟನ್ ಪೇಟೆಯ ಜಾಲಿ ಮೊಹಲ್ಲಾದಲ್ಲಿ ಆರೋಪಿಯನ್ನ ಬಂಧಿಸಿ ನಕಲಿ ಆರ್ಮಿ ಡ್ರೆಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಜಿತೇಂದರ್ ಸಿಂಗ್ ಮೂಲತಃ ರಾಜಸ್ತಾನದ ಬಾರ್ಮೆರ್ ಮೂಲದವನು. ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಬಟ್ಟೆ ವ್ಯಾಪಾರ ಮಾಡುತ್ತಿದ್ದ.

ಮಿಲಿಟರಿ ಸೇನಾ ನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ ಗುಪ್ತ ಮಾಹಿತಿ ಇರುವ ಫೋಟೋಗಳನ್ನು ನಿರಂತರವಾಗಿ ಪಾಕಿಸ್ತಾನದ ಐಎಸ್ಐ ಅಧಿಕಾರಿಗೆ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಇಂಟಿಲಿಜೆನ್ಸ್ ಆಫ್ ಬ್ಯೂರೋ (ಐಬಿ), ಜಿತೇಂದರ್ ಮೊಬೈಲ್ ಟ್ರ್ಯಾಕ್, ಲೊಕೇಷನ್ ಸರ್ಚ್ ಮಾಡಿದಾಗ ಬೆಂಗಳೂರಿನಲ್ಲಿ ಇರುವುದು ಗೊತ್ತಾಗಿತ್ತು. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ ಐಬಿ, ಕಾಟನ್ ಪೇಟೆಯಲ್ಲಿ ವಾಸವಾಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ‌.

ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುತ್ತಿದ್ದ ಜಿತೇಂದರ್​ಗೆ, ಪಾಕಿಸ್ತಾನದ ಐಎಸ್ಎ ಅಧಿಕಾರಿ ಯುವತಿ ಸೋಗಿನಲ್ಲಿ ಫೇಸ್ ಬುಕ್​​​ನಲ್ಲಿ‌ ಫ್ರೆಂಡ್ ರಿಕ್ವೆಸ್ಟ್​​​ ಕಳುಹಿಸಿದ್ದ. ಫ್ರೆಂಡ್ ರಿಕ್ವೆಸ್ಟ್​​ ಕಳುಹಿಸಿರುವುದು ಯುವತಿ ಎಂದು ನಂಬಿ ಸ್ನೇಹ ಬೆಳೆಸಿದ್ದ ಜಿತೇಂದರ್​​.‌‌

ಜಿತೇಂದರ್​ ಸಿಂಗ್​
ಬಂಧಿತ ಆರೋಪಿ ಜಿತೇಂದರ್​ ಸಿಂಗ್​

ಯುವತಿ ಸೋಗಿನಲ್ಲಿದ್ದ ಐಎಸ್ಎ ಅಧಿಕಾರಿ ನನಗೆ ಭಾರತವೆಂದರೆ ತುಂಬಾ ಇಷ್ಟ, ಭಾರತೀಯ ಸೇನಾ ನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ‌ ಫೋಟೋಗಳಿದ್ದರೆ ಕಳುಹಿಸು ಎಂದಿದ್ದಾನೆ. ಇದಕ್ಕೆ ಸಮ್ಮತಿ ಸೂಚಿಸಿದ್ದ ಈತ, ಇದಕ್ಕಾಗಿ ಕಮಾಂಡರ್ ವೇಷ ಧರಿಸಿ ಸೇನಾನೆಲೆಗಳ ಬಳಿ ಹೋಗಿ ಫೋಟೋಗಳನ್ನು ಸೆರೆ ಹಿಡಿದು‌ ಶೇರ್ ಮಾಡುತ್ತಿದ್ದ.

ಸೇನಾ ಸಮವಸ್ತ್ರದಲ್ಲಿ ಇದ್ದಿದ್ದರಿಂದ ಸುಲಭವಾಗಿ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಈ ಬಗ್ಗೆ ಅರಿತಿದ್ದ ಮಿಲಿಟರಿ ಇಂಟೆಲಿಜೆನ್ಸ್ ಸೇನಾ ನೆಲೆಗಳ ಶೋಧ ನಡೆಸಿದಾಗ ಫೇಸ್ ಬುಕ್​​​ ಮುಖಾಂತರ ಫೋಟೋಗಳು ಸೋರಿಕೆ ಆಗುತ್ತಿರುವುದು ಬೆಳಕಿಗೆ ಬಂದಿತ್ತು.

ಈ ಬಗ್ಗೆ ತಾಂತ್ರಿಕ ಕಾರ್ಯಾಚರಣೆ ನಡೆಸಿದಾಗ, ನಕಲಿ ಫೇಸ್ ಬುಕ್ ಅಕೌಂಟ್​ಗೆ ಫೋಟೋಗಳು ಶೇರ್ ಆಗುತ್ತಿರುವುದು ಗಮನಕ್ಕೆ ಬಂದಿತ್ತು‌. ಮತ್ತೊಂದೆಡೆ ಫೋಟೋ ಕಳುಹಿಸುತ್ತಿದ್ದ ವ್ಯಕ್ತಿಯ ಜಾಡು ಹಿಡಿದ ಮಿಲಿಟರಿ ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಆರೋಪಿ ಇರುವುದು ಗೊತ್ತಾಗಿತ್ತು‌.‌

ಮಿಲಿಟರಿ ಅಧಿಕಾರಿಗಳ ಮಾಹಿತಿ ಪಡೆದ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಮಿಲಿಟರಿ ಕಮಾಂಡರ್ ಸೋಗಿನಲ್ಲಿ ಕೆಲ ತಿಂಗಳ ಹಿಂದಷ್ಟೇ ಸೇನಾ ನೆಲೆಗಳ ಕುರಿತಂತೆ‌ ಫೋಟೋ ಕಳುಹಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿತ್ತು.

ಐಎಸ್ಐ ಅಧಿಕಾರಿಗಳ ಸಂಪರ್ಕಕ್ಕೆ ಸಿಂಗ್ ಬಂದಿದ್ದು ಹೇಗೆ?

ಐಎಸ್ಐ ಹುಡುಗಿಯ ಹೆಸರಲ್ಲಿ ಜಿತೇಂದರ್​ ಸಿಂಗ್ ನನ್ನ ಟ್ರ್ಯಾಪ್ ಮಾಡಿತ್ತು. ನೇಹಾ@ಪೂಜಾಜಿ ಹೆಸರಲ್ಲಿ ತೆರೆಯಲಾಗಿದ್ದ ಫೇಸ್ ಬುಕ್ ಐಡಿ ಮೂಲಕ ಟ್ರ್ಯಾಪ್​ ಮಾಡಲಾಗಿತ್ತು. ಈ ಫೇಸ್ ಬುಕ್ ಐಡಿಯನ್ನ ಪಾಕಿಸ್ತಾನದ ಕರಾಚಿಯಲ್ಲಿ ಓಪನ್​​ ಮಾಡಲಾಗಿದ್ದು, ಪಾಕಿಸ್ತಾನದ ಐಪಿ ಅಡ್ರೆಸ್​​ನಲ್ಲಿಯೇ ಖಾತೆ ತೆರೆಯಲಾಗಿತ್ತು. ಈ ಐಡಿ ಇಂಡಿಯನ್ ಫೋನ್ ನಂಬರ್​​ನಲ್ಲಿತ್ತು.

ಮಿಲಿಟರಿ ಡ್ರೆಸ್​​​ನ ಫೋಟೋ ಹಾಕಿ ಫೇಸ್ ಬುಕ್ ಖಾತೆ ಓಪನ್ ಮಾಡಿದ್ದ ಜಿತೇಂದರ್​ ಸಿಂಗ್​. ಈ ಐಡಿ ನೋಡಿದ್ದ ಪಾಕ್​ನ ಐಎಸ್ಐ, ಯುವತಿ ಹೆಸರಲ್ಲಿ ಫೇಕ್​​ ಅಕೌಂಟ್​​ ತೆರೆದು ಜೀತೇಂದ್ರ ಸಿಂಗ್​ನನ್ನು ಬಲೆಗೆ ಬೀಳಿಸಿಕೊಂಡಿತ್ತು. ಯುವತಿ ಎಂದು ನಂಬಿ ದೇಶದ 6 ಪ್ರಮುಖ ಮಿಲಿಟರಿ ಪ್ರದೇಶದ ಫೋಟೋ ವಿಡಿಯೋ ಶೇರ್ ಮಾಡಿದ್ದ ಆರೋಪಿ.

ಪೋಲಿ ರಾಮ್ ಫೈರಿಂಗ್ ರೇಂಜ್, ಬಾರ್ಮೆರ್ ರೈಲ್ವೆ ಕಂಟೋನ್ಮೆಂಟ್ ಏರಿಯಾ, ದೆಹಲಿ ರಾಜಪಥ ರೈಲ್ವೆ ರೆಜಿಮೆಂಟ್ ಫೋಟೋಗಳನ್ನ ಐಎಸ್​ಐಗೆ ಕಳುಹಿಸಿ ಡಿಲೀಟ್ ಮಾಡಿದ್ದ.

ಸದ್ಯ ಮಿಲಿಟರಿ ಇಂಟೆಲಿಜೆನ್ಸ್ ಅಧಿಕಾರಿಗಳು ಡಿಲೀಟ್ ಮಾಡಿದ್ದ ಮಾಹಿತಿಯನ್ನ ರಿಟ್ರೈವ್ ಮಾಡಿದ್ದಾರೆ. ಆರೋಪಿ 2016ರಿಂದ ಐಎಸ್ಐ ಜೊತೆ ನೇರ ಸಂಪರ್ಕದಲ್ಲಿದ್ದ. ಇತ್ತೀಚಿಗೆ ದೆಹಲಿಯಲ್ಲಿ ಒಬ್ಬ ಹಾಗೂ ರಾಜಸ್ಥಾನದಲ್ಲಿ ಒಬ್ಬ ನಕಲಿ ಮಿಲಿಟರಿ ವ್ಯಕ್ತಿಗಳನ್ನ ಬಂಧಿಸಲಾಗಿತ್ತು. ಈ ಬಂಧಿತರ ಜೊತೆ ಆರೋಪಿ ಸಂಪರ್ಕದಲ್ಲಿದ್ದ.

ಮಿಲಿಟರಿಗೆ ಸಂಬಂಧಿಸಿದ ಮಾಹಿತಿ ರವಾನೆಗೆ ಸಿಗುತ್ತಿತ್ತು ಪೇಮೆಂಟ್ :

ಆರೋಪಿಗೆ ಮಿಲಿಟರಿಗೆ ಸಂಬಂಧಿಸಿದ ಮಾಹಿತಿ ರವಾನೆ ಮಾಡಿದರೆ ಇತನಿಗೆ ಪೇಮೆಂಟ್​ ನೀಡಲಾಗುತ್ತಿತ್ತು. ಬೇರೆ ಬೇರೆ ನಂಬರ್​​ಗಳಿಂದ ಫೋನ್ ಪೇ ಹಾಗೂ ಗೂಗಲ್ ಪೇ ಮೂಲಕ ಹಣ ಸಂದಾಯವಾಗುತ್ತಿತ್ತು.

ಹಲವು ಬಾರಿ ಈತನ ಬ್ಯಾಂಕ್​​ ಅಕೌಂಟ್​​ಗೆ ಲಕ್ಷಾಂತರ ರೂಪಾಯಿ ಹಣ ಸಂದಾಯವಾಗಿತ್ತು. 2018ರಿಂದ ಬೆಂಗಳೂರಿನಲ್ಲಿ ಬಟ್ಟೆಯ ವ್ಯಾಪಾರ ಮಾಡುತ್ತಿದ್ದ ಈತ, ಬೀದಿ ಬದಿ ವ್ಯಾಪಾರ ಮಾಡುವವರಿಗೆ ಬಟ್ಟೆಗಳನ್ನ ಸಪ್ಲೈ ಮಾಡುತ್ತಿದ್ದ. ಸದ್ಯ ಆರೋಪಿಯನ್ನ ವಿಚಾರಣೆಗೆ ಒಳಪಡಿಸಿರುವ ಸಿಸಿಬಿ, ಇಂದು ಕೋರ್ಟ್​ಗೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪಡೆದುಕೊಳ್ಳುವ ಸಾಧ್ಯತೆಯಿದೆ.

Last Updated : Sep 20, 2021, 4:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.