ETV Bharat / state

ಭೂ ಕಬಳಿಕೆ ಪ್ರಕರಣ: ತಹಶೀಲ್ದಾರ್ ಅಜಿತ್ ಕುಮಾರ್ ವಿರುದ್ಧ ಬಂಧನ ವಾರಂಟ್ ಜಾರಿ

ಜಮೀನು ಕಬಳಿಕೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ವರದಿ ಸಲ್ಲಿಸುವಂತೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ಕುಮಾರ್​ಗೆ ಕೋರ್ಟ್ ಸೂಚಿಸಿತ್ತು. ಆದರೆ, ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಅಜಿತ್ ವರದಿ ಸಲ್ಲಿಸಿರಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ನೋಟಿಸ್ ಜಾರಿ ಮಾಡಿದರೂ ಕೋರ್ಟ್​ಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ತಹಶೀಲ್ದಾರ್ ಅಜಿತ್ ವಿರುದ್ಧ ನ್ಯಾಯಾಲಯ ಜಾಮೀನು ಸಹಿತ ಬಂಧನ ವಾರಂಟ್ ಜಾರಿ ಮಾಡಿದೆ.

thahashildar
thahashildar
author img

By

Published : Apr 7, 2021, 6:59 PM IST

ಬೆಂಗಳೂರು: ಸರ್ಕಾರಿ ಭೂಮಿ ಕಬಳಿಕೆ ಪ್ರಕರಣದಲ್ಲಿ ಕೋರ್ಟ್ ಆದೇಶಿಸಿದ ನಂತರವೂ ವರದಿ ಸಲ್ಲಿಸದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್‌ ಅಜಿತ್ ಕುಮಾರ್ ವಿರುದ್ಧ ನಗರದ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ.

ಬೆಂಗಳೂರಿನ ಪೂರ್ವ ಬಿದರಹಳ್ಳಿ ಹೋಬಳಿಯ ಬೆಳತ್ತೂರು ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯದ ಸರ್ವೆ ಸಂಖ್ಯೆ 57ರಲ್ಲಿರುವ 2.26 ಎಕರೆ ಸರ್ಕಾರಿ ಜಮೀನನ್ನು ಪ್ರಭಾವಿಗಳು ಅಕ್ರಮವಾಗಿ ಕಬಳಿಸಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಜಾಗದಲ್ಲಿ ನಲವತ್ತಕ್ಕೂ ಅಧಿಕ ಐಷಾರಾಮಿ ಬಂಗಲೆಗಳು, ವಿಲ್ಲಾಗಳು, ಜಿಮ್, ಕ್ಲಬ್, ಈಜುಕೊಳ ಮತ್ತಿತರ ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಿದ್ದಾರೆ. ಇದಕ್ಕೆ ಅಂದಿನ ತಹಶೀಲ್ದಾರ್ ಬಾಳಪ್ಪ ಹಂದಿಗುಂದ ನೆರವು ನೀಡಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ, ಜಮೀನು ಕಬಳಿಕೆಗೆ ಸಂಬಂಧಿಸಿದ ದಾಖಲೆಗಳು ಹಾಗೂ ವರದಿ ಸಲ್ಲಿಸುವಂತೆ ಬೆಂಗಳೂರು ಪೂರ್ವ ತಹಶೀಲ್ದಾರ್ ಅಜಿತ್ ಕುಮಾರ್​ಗೆ ಸೂಚಿಸಿತ್ತು. ಆದರೆ, ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಅಜಿತ್ ವರದಿ ಸಲ್ಲಿಸಿರಲಿಲ್ಲ. ವಿಚಾರಣೆಗೆ ಹಾಜರಾಗುವಂತೆ ಮೂರು ಬಾರಿ ನೋಟಿಸ್ ಜಾರಿ ಮಾಡಿದರೂ ಕೋರ್ಟ್​ಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿ ತಹಶೀಲ್ದಾರ್ ಅಜಿತ್ ವಿರುದ್ಧ ನ್ಯಾಯಾಲಯ ಜಾಮೀನು ಸಹಿತ ಬಂಧನ ವಾರಂಟ್ ಜಾರಿ ಮಾಡಿದೆ. ಏ.27ರ ಬೆಳಗ್ಗೆ 11 ಗಂಟೆಗೆ ಖುದ್ದು ಹಾಜರಾಗುವಂತೆ ಕೆಆರ್ ಪುರ ಠಾಣೆ ಪೊಲೀಸರ ಮೂಲಕ ವಾರಂಟ್ ಜಾರಿಗೊಳಿಸಿದೆ.

ಈ ಮೊದಲು ದೇವಸ್ಥಾನದ ಜಾಗವನ್ನು ಸರ್ಕಾರಿ ಕಾರ್ಯಕ್ರಮಗಳನ್ನು ಆಯೋಜಿಸಲು, ಜಾತ್ರೆ ಸಮಯದಲ್ಲಿ ಪಲ್ಲಕ್ಕಿ ನಿಲ್ಲಿಸಲು ಹಾಗೂ ಆಟದ ಮೈದಾನವಾಗಿ ಬಳಸಲಾಗುತ್ತಿತ್ತು. ಈ ಜಾಗವನ್ನು ಸ್ಥಳೀಯರಾದ ನಾರಾಯಣಸ್ವಾಮಿ, ಲೋಕೇಶ್, ರಂಜಿತ್ ರೆಡ್ಡಿ ಸೇರಿ 60 ಮಂದಿ ಒತ್ತುವರಿ ಮಾಡಿದ್ದಾರೆಂದು ಆರೋಪಿಸಿ ದೂರು ದಾಖಲಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.