ETV Bharat / state

ಪ್ರತಿಷ್ಠಿತ ಕಾಲೇಜುಗಳ‌ ಮುಂದೆ ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ : 21 ಕೆಜಿ ಗಾಂಜಾ ವಶ

ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಗಾಂಜಾ ತರಿಸಿಕೊಂಡು ಮನೆಯಲ್ಲಿ ಇರಿಸಿಕೊಂಡಿದ್ದರು. ಸಣ್ಣ-ಸಣ್ಣ ಪ್ಯಾಕೇಟ್​​ಗಳಲ್ಲಿ‌ ಗಾಂಜಾ ತುಂಬಿ, ಪ್ರತಿಷ್ಠಿತ ಕಾಲೇಜುಗಳ‌ ಮುಂದೆ ಮಾರಾಟ ಮಾಡುತ್ತಿದ್ದರು..

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
author img

By

Published : Feb 27, 2022, 3:03 PM IST

ಬೆಂಗಳೂರು : ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಖದೀಮರನ್ನು ರಾಜಗೋಪಾಲ‌ನಗರ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಪ್ರಕಾಶ್ ಹಾಗೂ‌ ಸುಂದರ್ ಪಾಂಡೆ ಬಂಧಿತರಾಗಿದ್ದು, ಇವರಿಂದ 21 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ. ಚಕ್ಕಲಿ-ನಿಪಟ್ಟು ತಯಾರಿಸಿ ಕಿರಾಣಿ ಅಂಗಡಿಗಳಿಗೆ ಕೊಡುವ ಕೆಲಸ ಮಾಡುತ್ತಿದ್ದ ಆರೋಪಿಗಳು, ವ್ಯವಹಾರದಲ್ಲಿ ನಷ್ಟ ಆಗಿದ್ದರಿಂದ ಹಣಕ್ಕಾಗಿ ಈ ದಂಧೆಯಲ್ಲಿ ತೊಡಗಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ‌‌.

ಇದನ್ನೂ ಓದಿ : ಚಿಕ್ಕಬಳ್ಳಾಪುರದಲ್ಲಿ ಗ್ಯಾಸ್​ ಸಿಲಿಂಡರ್ ಸ್ಫೋಟ : ಮನೆ ಛಿದ್ರ ಛಿದ್ರ-ಗಂಭೀರವಾಗಿ ಗಾಯಗೊಂಡ ದಂಪತಿ!

ಆಂಧ್ರದ ವಿಶಾಖಪಟ್ಟಣಂನಿಂದ ಗಾಂಜಾ ತರಿಸಿಕೊಂಡು ಮನೆಯಲ್ಲಿ ಇರಿಸಿಕೊಂಡಿದ್ದರು. ಸಣ್ಣ-ಸಣ್ಣ ಪ್ಯಾಕೇಟ್​​ಗಳಲ್ಲಿ‌ ಗಾಂಜಾ ತುಂಬಿ, ಪ್ರತಿಷ್ಠಿತ ಕಾಲೇಜುಗಳ‌ ಮುಂದೆ ಮಾರಾಟ ಮಾಡುತ್ತಿದ್ದರು.

ಫೆಬ್ರುವರಿ 26ರಂದು ಪೀಣ್ಯ ಬಳಿ ಬೈಕ್​​ನಲ್ಲಿ ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಹನುಮಂತ ಹಾದಿಮನಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.