ETV Bharat / state

ಶಂಕಿತ ಉಗ್ರರ ಬಂಧನ ಪ್ರಕರಣ: ಸಿಸಿಬಿಯಿಂದ ಎನ್​​ಐಎಗೆ ಹಸ್ತಾಂತರ..? - ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಉಗ್ರರ ಬಂಧನ

ಮೆಹಬೂಬ್ ಪಾಷಾ ಸೇರಿದಂತೆ ಐದು ಮಂದಿ ಶಂಕಿತ ಉಗ್ರ‌ರನ್ನು, ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು . ಇದೀಗ ಆ ಐವರನ್ನು ಎನ್​​ಐಎ ವಶಕ್ಕೆ ಪಡೆದು ತನಿಖೆ ನಡೆಸಲು ಮುಂದಾಗಿದೆ.

arrest-of-suspected-militants
ಶಂಕಿತ ಉಗ್ರರ ಬಂಧನ ಪ್ರಕರಣ
author img

By

Published : Jan 30, 2020, 5:06 PM IST

ಬೆಂಗಳೂರು: ಮೆಹಬೂಬ್ ಪಾಷಾ ಸೇರಿದಂತೆ ಐದು ಮಂದಿ ಶಂಕಿತ ಉಗ್ರ‌ರನ್ನು, ಸದ್ದುಗುಂಟೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿತ್ತು . ಇದೀಗ ಆ ಐವರನ್ನು ಎನ್​​ಐಎ ವಶಕ್ಕೆ ಪಡೆದು ತನಿಖೆ ನಡೆಸಲು ಮುಂದಾಗಿದೆ. ರಾಜ್ಯಮಟ್ಟದ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಎನ್​​ಐಎ ಸಿದ್ದತೆ ನಡೆಸಿದೆ.

ಸೋಮವಾರ ಕೋರ್ಟ್​ನಿಂದ ಅನುಮತಿ ಪಡೆದು, ಎನ್​​ಐಎ ತಮ್ಮ ವಶಕ್ಕೆ ಪಡೆಯಲಿದೆ. ಇನ್ನು ಈ ಶಂಕಿತ ಉಗ್ರರಿಗೆ ಐಸಿಸ್ ಉಗ್ರ ಸಂಘಟನೆಯ ಲಿಂಕ್ ಇರೋ ಹಿನ್ನೆಲೆ, ಎನ್ಐ​​ಎ ವಶಕ್ಕೆ ಪಡೆದು ತನಿಖೆ ಮುಂದುವರೆಸಲಿದೆ.

ಬೆಂಗಳೂರಿನ ಸದ್ದುಗುಂಟೆಪಾಳ್ಯದಲ್ಲಿ ವಾಸವಾಗಿದ್ದ ಮೆಹಾಬೂಬ್ ಪಾಷಾ, ಬೆಂಗಳೂರು ಜಿಹಾದಿ ಗ್ಯಾಂಗ್​​ನ​​ ಕಮಾಂಡರ್ ಆಗಿದ್ದ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಜಿಹಾದಿ ಗ್ಯಾಂಗ್ ಸೃಷ್ಟಿ ಮಾಡಲು‌ ಹೊಂಚು ಹಾಕಿದ್ದ. ಇದಕ್ಕಾಗಿ ಸದಸ್ಯರ ನೇಮಕ ಹಾಗೂ ಶಸ್ತ್ರ ಪೂರೈಕೆಯ ನೀಲನಕ್ಷೆ ರಚಿಸಿ, ಬೆಂಗಳೂರು ಹೊರವಲಯ ಹಾಗೂ ಮಡಿಕೇರಿಯ ಅರಣ್ಯ ಪ್ರದೇಶದಲ್ಲಿ ಟ್ರೈನಿಂಗ್ ಮಾಡ್ತಿದ್ದ.‌ ಹೀಗಾಗಿ ಈತನ ಜೊತೆಯಿದ್ದ ಒಟ್ಟು ಐವರನ್ನು ಸಿಸಿಬಿ ವಶಕ್ಕೆ ಪಡೆದಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.