ETV Bharat / state

ಮಾದಕ ವ್ಯಸನಿ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ : ಕುಖ್ಯಾತ ಸರಬರಾಜುಗಾರರ ಬಂಧನ - ಈಟಿವಿ ಭಾರತ್​ ಕನ್ನಡ

ಮಾದಕ ವಸ್ತುಗಳ ಸರಬರಾಜುಗಾರರನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

arrest-of-drug-supplier-in-bengalore
ಮಾದಕ ವ್ಯಸನಿ ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ
author img

By

Published : Sep 13, 2022, 1:10 PM IST

ಬೆಂಗಳೂರು : ಮಾದಕ ಸೇವನೆ ಮಾಡುತ್ತಿದ್ದ ಆರೋಪಿ ನೀಡಿದ ಮಾಹಿತಿಯ ಮೇರೆಗೆ ಅಂತಾರಾಜ್ಯ ತಂಡದ ಮೇಲೆ ಕಾರ್ಯಾಚರಣೆ ನಡೆಸಿದ ಜಯನಗರ ಠಾಣಾ ಪೊಲೀಸರು ಇಬ್ಬರು ಕುಖ್ಯಾತ ಮಾದಕ ಸರಬರಾಜುಗಾರರನ್ನು ಬಂಧಿಸಿದ್ದಾರೆ. ಸಾಗರ್ ಸಾಹೋ ಹಾಗೂ ಶೇಷಗಿರಿ ಬಂಧಿತ ಆರೋಪಿಗಳು.

ಇತ್ತೀಚಿಗೆ ಗಾಂಜಾ ಸೇವನೆ ಪ್ರಕರಣದಲ್ಲಿ ಜಯನಗರ ಠಾಣಾ ಪೊಲೀಸರು ನಯಾಜ್ ಪಾಷಾ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ನಗರಕ್ಕೆ ಗಾಂಜಾ ಹಾಗೂ ಹ್ಯಾಶಿಸ್​ ಆಯಿಲ್ ಸರಬರಾಜಾಗುತ್ತಿದ್ದ ಬಗ್ಗೆ ಆರೋಪಿ ನಯಾಜ್ ಮಾಹಿತಿ ನೀಡಿದ್ದ.

arrest-of-drug-supplier-in-bengalore
ಮಾದಕ ವಸ್ತುಗಳ ವಶ

ಆರೋಪಿ ನೀಡಿದ ಮಾಹಿತಿ ಮೇರೆಗೆ ಆಂಧ್ರಪ್ರದೇಶದ ಶ್ರೀಕಾಕುಳಂಗೆ ತೆರಳಿದ್ದ ಜಯನಗರ ಪೊಲೀಸರು ಸಾಗರ್ ಸಾಹೋ ಹಾಗೂ ಶೇಷಗಿರಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 20 ಲಕ್ಷ ರೂ. ಮೌಲ್ಯದ 50 ಕೆ.ಜಿ ಗಾಂಜಾ ಹಾಗೂ 3 ಕೋಟಿ ರೂ ಮೌಲ್ಯದ 6 ಕೆ.ಜಿ ಹ್ಯಾಶಿಸ್ ಆಯಿಲ್ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ : ಬ್ಯಾಂಕ್ ನೌಕರರಿಂದಲೇ ಹೆಚ್ಚುತ್ತಿರುವ ವಂಚನೆ: ಕೋಟಿ ಲಪಟಾಯಿಸಿದ ಅಧಿಕಾರಿ ಖಾತೆಯಲ್ಲಿ ಜೀರೋ ಬ್ಯಾಲೆನ್ಸ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.