ETV Bharat / state

ಫೋನ್ ಪೇನಲ್ಲಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ಮೋಸ: ಎಂಜಿನಿಯರಿಂಗ್ ಬಡ ವಿದ್ಯಾರ್ಥಿ ಬಂಧನ - engineer student arrest

ಫೋನ್ ಪೇ ಮೂಲಕ ಹಣ ಪಾವತಿಸಿದ ರೀತಿಯಲ್ಲಿ ಸ್ಕ್ರೀನ್ ಶಾಟ್, ನಕಲಿ ಸಂದೇಶ ತೋರಿಸಿ ವ್ಯಾಪಾರ ಮಾಡುವವರನ್ನು ವಂಚಿಸುತ್ತಿದ್ದ ಹಿನ್ನೆಲೆ ಎಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.

Arrest of accused who cheating in bangalore
ಫೋನ್ ಪೇನಲ್ಲಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ಮೋಸ
author img

By

Published : Sep 10, 2021, 3:40 AM IST

ಬೆಂಗಳೂರು: ಬೆಳ್ಳಿ ಖರೀದಿಸಿ ಹಣ ಕೊಡದೆ ವಂಚಿಸುತ್ತಿದ್ದ ಆರೋಪಿ ಪ್ರಶಾಂತ್​​​​​​ ಎಂಬಾತನನ್ನು ಪಶ್ಚಿಮ‌ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆಭರಣ ಅಂಗಡಿಗಳಿಗೆ ಹೋಗಿ ಬೆಳ್ಳಿ ಖರೀದಿ ಮಾಡುತ್ತಿದ್ದ ಆರೋಪಿ ಪೋನ್ ಪೇ ಮೂಲಕ ಹಣ ಪವತಿಸುರುವುದಾಗಿ ನಕಲಿ ಸಂದೇಶದ ಸ್ಕ್ರೀನ್ ಶಾಟ್ ತೋರಿಸುತ್ತಿದ್ದ. ಇದೀಗ ಅಂಗಡಿ ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಯನ್ನ ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಯು ಈ ರೀತಿ ಮೂರು ಬಾರಿ ಮೋಸ ಮಾಡಿರುವುದಾಗಿ ಬಾಯಿಬಿಟ್ಟಿದ್ದಾನೆ. ಸದ್ಯ ಬಂಧಿತ ಆರೋಪಿಯಿಂದ 1.98 ಲಕ್ಷ ಮೌಲ್ಯದ 10 ಗ್ರಾಂ ಚಿನ್ನ, 1.5 ಕೆಜಿ ಬೆಳ್ಳಿ ಮತ್ತು ಒಂದು ನಿಕಾನ್ ಡಿಜಿಟಲ್ ಕ್ಯಾಮೆರಾ ವಶಕ್ಕೆ ಪಡೆಯಲಾಗಿದೆ.

ನಕಲಿ ಸ್ಕ್ರೀನ್ ಶಾಟ್:

ಈ ಪ್ರಕರಣದ ಕುರಿತು ಡಿ.ಸಿ.ಪಿ ಸಂಜೀವ್ ಪಾಟೀಲ್ ಮಾತನಾಡಿ, ಫೋನ್ ಪೇ ಮೂಲಕ ಹಣ ಪಾವತಿಸಿದ ರೀತಿಯಲ್ಲಿ ಸ್ಕ್ರೀನ್ ಶಾಟ್, ನಕಲಿ ಸಂದೇಶ ತೋರಿಸಿ ವ್ಯಾಪಾರ ಮಾಡುವವರನ್ನು ಈತ ವಂಚಿಸುತ್ತಿದ್ದ. ಈ ಹಿನ್ನೆಲೆ ಎಂಜಿನಿಯರಿಂಗ್ ಓದುತ್ತಿರುವ ಆರೋಪಿಯನ್ನು ನಗರದ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯ ಪೊಲೀಸರು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಫೋನ್ ಪೇನಲ್ಲಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ಮೋಸ:
ಫೋನ್ ಪೇನಲ್ಲಿ ಅಂಗಡಿ ಮಾಲೀಕರಿಗೆ ಲಕ್ಷಾಂತರ ಮೋಸ

ಎಂಜಿನಿಯರಿಂಗ್ ವಿದ್ಯಾರ್ಥಿ:

ರಾಜಧಾನಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಆರೋಪಿ, ನಿತ್ಯದ ಖರ್ಚಿಗಾಗಿ ಹಣ ಹೊಂದಿಸಲು ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ.

ಸಂದೇಶ ತೋರಿಸಿ ಎಸ್ಕೇಪ್:

ಇತ್ತೀಚೆಗೆ ಬೆಳ್ಳಿ ಬಂಗಾರದ ಅಂಗಡಿಗೆ ಹೋಗಿದ್ದ ಆರೋಪಿ, 1 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿದ್ದ. ಮೊಬೈಲ್‌ನಿಂದ ಫೋನ್ ಪೇ ಆ್ಯಪ್ ಮೂಲಕ ಹಣ ಪಾವತಿಸಿದ್ದೇನೆ ಎಂದು ಪುರಾವೆಯಾಗಿ ಸಂದೇಶವೊಂದನ್ನು ತೋರಿಸಿ ಹೊರಟು ಹೋಗಿದ್ದ. ಕೆಲ ಹೊತ್ತಿನ ಬಳಿಕ ಹಣ ಜಮೆಯಾಗಿಲ್ಲ ಎಂಬುವುದು ಮಾಲೀಕರಿಗೆ ತಿಳಿದಿದೆ. ಆ ಕುರಿತು ಪರಿಶೀಲಿಸಿದಾಗ, ಆರೋಪಿ ನಕಲಿ ಸಂದೇಶ, ಸ್ಕ್ರೀನ್ ಶಾಟ್ ಕಳುಹಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆ ವಂಚನೆಗೊಳಗಾದ ಅಂಗಡಿಯ ಮಲಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.

ಬಡ ಪೋಷಕರು ವಿದ್ಯಾಭ್ಯಾಸದಲ್ಲಿ ಮುಂದಿದ್ದ ಈತನನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಎಂಜಿನಿಯರಿಂಗ್ ಕಾಲೇಜ್‌ಗೆ ಸೇರಿಸಿದ್ದರು. ಆದರೆ, ಓದಲು ಹಣ ಸಾಕಾಗದ ಹಿನ್ನೆಲೆ ಈತ ಈ ಕೃತ್ಯಕ್ಕೆ ಇಳಿದಿದ್ದನಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.