ETV Bharat / state

ವಿಧಾನಸಭೆಯಲ್ಲಿ ಆಡಳಿತ - ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ! VIDEO

ಇಂದು ನಡೆದ ವಿಧಾನಸಭೆ ಕಲಾಪದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಸಂಬಂಧ ಚರ್ಚೆ ನಡೆಯಿತು, ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ವಾಗ್ವಾದ, ಗದ್ದಲ ನಡೆದ ಪ್ರಸಂಗ ನಡೆದಿದೆ.

ವಿಧಾನಸಭೆಯಲ್ಲಿ ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ವಾಗ್ವಾದ
Argument between members of ruling-opposition parties in assembly
author img

By

Published : Mar 19, 2020, 5:32 PM IST

ಬೆಂಗಳೂರು : ದೇಶದ ಆರ್ಥಿಕ ಬೆಳವಣಿಗೆ ಸಂಬಂಧ ವಿಧಾನಸಭೆಯಲ್ಲಿ ಇಂದು ಸುಧೀರ್ಘ ಚರ್ಚೆ ನಡೆದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ವಾಗ್ವಾದ, ಗದ್ದಲ ನಡೆದ ಪ್ರಸಂಗ ನಡೆದಿದೆ.

ವಿಧಾನಸಭೆಯಲ್ಲಿ ಆಡಳಿತ-ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ವಾಗ್ವಾದ

ಬಜೆಟ್ ಮೇಲಿನ ಚರ್ಚೆ ಮುಂದುವರಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ದೇಶದ ಆರ್ಥಿಕತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಕೆಲವು ಪತ್ರಿಕಾ ವರದಿಗಳ ತುಣುಕಗಳ ಸಮೇತವಾಗಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಇಂದು ಸ್ಪಷ್ಟನೆ ನೀಡಿದರು.

ಭಾರತ ವಿಶ್ವದ 5ನೇ ಆರ್ಥಿಕತೆಯ ಶಕ್ತಿಯಾಗಿ ಬೆಳೆಯುತ್ತಿದೆ ಎಂದು ಹೇಳಿ ಆ ಕುರಿತ ವರದಿಗಳನ್ನು ಪ್ರದರ್ಶಿಸಿದರು. ಮಧ್ಯಪ್ರವೇಶ ಮಾಡಿದ ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಜಮೀರ್ ಅಹಮ್ಮದ್‍ ಖಾನ್, ಕಳೆದ ಆರು ವರ್ಷಗಳಲ್ಲೇ ಈ ಬೆಳವಣಿಗೆ ಆಗಿದ್ದಲ್ಲ. ಇದಕ್ಕೆ ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳ ಕೊಡುಗೆ ಇದೆ. ಯುಪಿಎ-1, 2ರಲ್ಲೂ ಸಾಕಷ್ಟು ಆರ್ಥಿಕ ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ಮಧ್ಯ ಪ್ರವೇಶಿಸಿದ ಸಚಿವ ಸಿ.ಟಿ.ರವಿ ಅವರು, 2011-12 ರಲ್ಲಿ ಜಿಡಿಪಿ ಶೇ.10.3ರಷ್ಟಿತ್ತು. ಹಣದುಬ್ಬರ ಶೇ.4 ರಷ್ಟಿತ್ತು. 2018-19 ರಲ್ಲಿ ಜಿಡಿಪಿ ಶೇ.6.8ರಷ್ಟಿದೆ. ಹಣದುಬ್ಬರ ಶೇ.3.6ರಷ್ಟಿದೆ. ಈ ಹಿಂದೆ ಜಿಡಿಪಿಯೂ ಹೆಚ್ಚಿದ್ದು, ಹಣದುಬ್ಬರವೂ ಹೆಚ್ಚಿತ್ತು. ಈಗ ಜಿಡಿಪಿ ಕಡಿಮೆಯಾಗಿದ್ದರೂ ಹಣದುಬ್ಬರ ನಿಯಂತ್ರಣದಲ್ಲಿದೆ. ಆರ್ಥಿಕ ಅಭಿವೃದ್ಧಿಯ ಸತ್ಯ ಹೇಳಿದರೆ ಕಾಂಗ್ರೆಸಿಗರು ಅಡ್ಡಿಪಡಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಆಗ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಬಿಜೆಪಿಯ ಅವಧಿಯಲ್ಲಿ ದೇಶ ಹಾಳಾಗಿದೆ. ಹಣದುಬ್ಬರವೂ ಹೆಚ್ಚಿದೆ, ಜಿಡಿಪಿ ಕುಸಿದಿದೆ ಎಂದು ಕಿಡಿಕಾರಿದರು. ಇದೇ ವೇಳೆ, ಆಡಳಿತ ಪಕ್ಷದ ಶಾಸಕರು ಕೂಡ ಎದ್ದು ನಿಂತು ಪ್ರತ್ಯುತ್ತರ ನೀಡಿದ್ದರಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಎದ್ದು ನಿಂತು ನಿನ್ನೆ ಸಿದ್ದರಾಮಯ್ಯ ಅವರು ಕೇಳಿದ ಪ್ರಶ್ನೆಗೆ ಸಿ.ಟಿ.ರವಿ ಇಂದು ಉತ್ತರ ನೀಡಿದ್ದಾರೆ. ನರೇಂದ್ರ ಮೋದಿ ಅವರ ಹೆಸರು ಹೇಳುತ್ತಿದ್ದಂತೆ ನೀವೆಲ್ಲ ಎದ್ದು ನಿಂತು ಗಲಾಟೆ ಮಾಡುವುದು ಏಕೆ ? ಅವರು ಈ ದೇಶದ ಪ್ರಧಾನಿ ಎಂಬುದನ್ನು ಮರೆಯಬೇಡಿ. ಆರ್ಥಿಕತೆಯ ಬಗ್ಗೆ ಅನಗತ್ಯ ಗೊಂದಲಕ್ಕೊಳಗಾಗಬೇಡಿ ಎಂದು ಸಲಹೆ ಮಾಡಿದರು.

ನಂತರ ಮಾತನಾಡಿದ ಸಿದ್ದರಾಮಯ್ಯ ಅವರು, ಭಾರತ 5 ಟ್ರಿಲಿಯನ್ ಆರ್ಥಿಕತೆಯ ದೇಶವಾಗುವತ್ತ ಸರಿಯಾದ ಬೆಳವಣಿಗೆಯಾಗುತ್ತಿಲ್ಲ. ಕಳೆದ ವರ್ಷದ ಜಿಡಿಪಿ ಶೇ.4.9ರಷ್ಟಿತ್ತು. ಇದಕ್ಕೆ ನೋಟು ಅಮಾನೀಕರಣ ಮತ್ತು ಜಿಎಸ್‍ಟಿ ಕಾರಣ. ದೇಶಾದ್ಯಂತ ಉದ್ಯೋಗಗಳು ಕಡಿತವಾಗಿವೆ. 45 ವರ್ಷದಲ್ಲೇ ಅತಿ ಹೆಚ್ಚು ಉದ್ಯೋಗ ಕಡಿತವಾಗಿರುವುದು ಈ ಅವಧಿಯಲ್ಲೇ. 10 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದವರು ಇರುವ ಉದ್ಯೋಗಗಳನ್ನೇ ಕಳೆಯುತ್ತಿದ್ದಾರೆ. ಬೆಂಗಳೂರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಮುಚ್ಚಲು ಕಾರಣ ಏನೆಂಬುದನ್ನು ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.