ETV Bharat / state

ಜೈಲಿನಲ್ಲಿ‌ ಖಿನ್ನತೆಗೆ ಜಾರಿದ ಆರ್ದ್ರಾ: ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸಲು ನಿರ್ಧಾರ

ಟೌನ್​ಹಾಲ್ ಬಳಿ ಫ್ರೀ ಕಾಶ್ಮೀರ ಫಲಕ ಹಿಡಿದು ಎಸ್​ಜೆ ಪಾರ್ಕ್ ಪೊಲೀಸರಿಂದ ಬಂಧನಕ್ಕೆ ಒಳಗಾದ ಆರ್ದ್ರಾಳ ಜಾಮೀನು ಅರ್ಜಿಯನ್ನ ನ್ಯಾಯಾಲಯ ತಿರಸ್ಕರಿಸಿದೆ.

author img

By

Published : Mar 4, 2020, 12:57 PM IST

ಜೈಲಿನಲ್ಲಿ‌ ಖಿನ್ನತೆಗೆ ಜಾರಿದ ಆರ್ದ್ರಾ Ardra fall into Depression in prison
ಆರ್ದ್ರಾ

ಬೆಂಗಳೂರು: ಟೌನ್​ಹಾಲ್ ಬಳಿ ಫ್ರೀ ಕಾಶ್ಮೀರ ಫಲಕ ಹಿಡಿದು ಎಸ್​ಜೆ ಪಾರ್ಕ್ ಪೊಲೀಸರಿಂದ ಬಂಧನಕ್ಕೆ ಒಳಗಾದ ಆರ್ದ್ರಾಳ ಜಾಮೀನು ಅರ್ಜಿಯನ್ನ ನಿನ್ನೆ ನ್ಯಾಯಾಲಯ ತಿರಸ್ಕರಿಸಿದೆ. ಬಂಧನ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿರುವ ಆರೋಪಿ ಸಿಟಿ ಸಿವಿಲ್​ ಕೋರ್ಟ್​ನಲ್ಲಿ ಜಾಮೀನಿಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಓದಿ : ಫ್ರೀ ಕಾಶ್ಮೀರ್​ ಎಂದು ಪೋಸ್ಟರ್ ಪ್ರದರ್ಶಿಸಿದ್ದ ಯುವತಿ ವಿರುದ್ಧ ಎಫ್ಐಆರ್

ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರ್ದ್ರಾ ಖಿನ್ನತೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರತಿಭಟನೆ ನಡೆಯುವ ಜಾಗದಲ್ಲಿ ಫ್ರೀ ಕಾಶ್ಮಿರ ಫಲಕ ಹಿಡಿದು ಗಲಾಟೆ ಸೃಷ್ಟಿ ಮಾಡಿದ್ದ ಆರ್ದ್ರಾಗೆ ಜಾಮೀನು ದೊರೆತಿರಲಿಲ್ಲ. ಮಾನಸಿಕವಾಗಿ ಖಿನ್ನತೆಗೆ ಒಳಗಾಗಿರುವ ಆರೋಪಿ ಸಿಟಿ ಸಿವಿಲ್​ ಕೋರ್ಟ್​ನಲ್ಲಿ ಜಾಮೀನಿಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ನಿನ್ನೆಯಷ್ಟೇ ಕೆಳ ಹಂತದ ನ್ಯಾಯಾಲಯ ಜಾಮೀನು ನಿರಾಕರಣೆ ಮಾಡಿತ್ತು. ಪೊಲೀಸರು ಕೂಡ ಆರೋಪಿಗೆ ಜಾಮೀನು ಮಂಜೂರು ಮಾಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಓದಿ :ದೇಶ ವಿರೋಧಿ ಭಿತ್ತಿ ಪತ್ರ ಪ್ರದರ್ಶನ: ಆರ್ದ್ರಾ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಮತ್ತೊಂದೆಡೆ, ಅಮೂಲ್ಯ ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಇಬ್ಬರ ಚಲನವಲನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮತ್ತೊಂದೆಡೆ ಅಮೂಲ್ಯ ಬಳಿಯಿಂದ ಆರ್ದ್ರಾ ಕುರಿತು ಕೆಲ ವಿಚಾರಗಳನ್ನ ಎಸ್​ಜೆ ಪಾರ್ಕ್ ಪೊಲೀಸರು ಕಲೆ ಹಾಕಿದ್ದರು. ಎಸ್​ಜೆ ಪಾರ್ಕ್ ಪೊಲೀಸರು ಕೂಡ ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರ್ದ್ರಾಳನ್ನ ಎಸ್​ಜೆ ಪಾರ್ಕ್ ಪೊಲೀಸರು ವಶಕ್ಕೆ ಪಡೆದು ಆಕೆಯ ಪಿನ್ ಟು ಪಿನ್‌ ಮಾಹಿತಿಯನ್ನ ಕಲೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.