ಬೆಂಗಳೂರು: ಮಾಹಿತಿ ಕೊರತೆಯಿರುವ ಆರಗ ಜ್ಞಾನೇಂದ್ರ ಹೋಮ್ ಮಿನಿಸ್ಟರ್ ಹುದ್ದೆಯಲ್ಲಿ ಇರಲು ನಾಲಾಯಕ್ ಎಂದು ಹುಬ್ಬಳ್ಳಿ- ಧಾರವಾಡ ಪೂರ್ವ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಹೇಳಿದ್ದಾರೆ. ಹುಬ್ಬಳ್ಳಿ ಘಟನೆಯಲ್ಲಿ ಕಾಂಗ್ರೆಸ್ ಡಬಲ್ ಸ್ಯ್ಟಾಂಡ್ ಎಂದು ಸಚಿವರು ಆರೋಪ ಮಾಡಿದ್ದರು. ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹೋಮ್ ಮಿನಿಸ್ಟರ್ಗೆ ಮಾಹಿತಿ ಕೊರತೆಯಿದೆ ಎಂದು ಹೇಳಿದರು.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಮತ್ತೋರ್ವ ಕಾಂಗ್ರೆಸ್ ಮುಖಂಡನ ಬಂಧಿಸಿದ ಸಿಐಡಿ
ಗದ್ದಲ ಗಲಾಟೆಯಿಂದಲೇ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ತಂತ್ರ. ಎಸ್ಡಿಪಿಐ, ಪಿಎಫ್ಐ ಬ್ಯಾನ್ ಮಾಡಿ ಎಂದು ಕಾಂಗ್ರೆಸ್ ಒತ್ತಾಯ ಮಾಡ್ತಿದೆ. ಜಾತಿ, ಧರ್ಮಗಳ ಮೇಲಿನ ರಾಜಕೀಯ ಲಾಭ ಬಿಜೆಪಿಗೆ ಬೇಕು. ಚುನಾವಣೆ ವೇಳೆ ಮಾತನಾಡಲು ಇವರ ಬಳಿ ಏನೂ ಇಲ್ಲ. ಹೀಗಾಗಿ ಕೋಮು ಗಲಭೆ ಮಾಡಿಸಿ ಅದರ ಲಾಭ ಪಡೆಯಲು ಮುಂದಾಗಿದ್ದಾರೆ. ಅಭಿವೃದ್ಧಿ ಬಗ್ಗೆ ಚರ್ಚೆ ಇವರಿಗೆ ಬೇಡ ಎಂದು ಟೀಕಿಸಿದರು.