ಬೆಂಗಳೂರು: ಮಾನ ಮರ್ಯಾದೆ ಇದ್ದರೆ ದೇಶದಲ್ಲಿ ಲೂಟಿ ಹೊಡೆದಿರುವುದನ್ನು ಸರ್ಕಾರಕ್ಕೆ ವಾಪಸ್ ಕೊಡಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ಗೆ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ರಮೇಶ್ ಕುಮಾರ್ ಅಪರೂಪಕ್ಕೆ ಸತ್ಯವನ್ನು ಹೇಳಿದ್ದಾರೆ. ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿದ್ದೇವೆ ಎಂಬ ಮಾಜಿ ಸ್ವೀಕರ್ ರಮೇಶ್ ಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್ ಕುಮಾರ್ ಹೇಳಿದ್ದನ್ನು ಇಡೀ ದೇಶ ಗಮಸಿದೆ. ರಮೇಶ್ ಕುಮಾರ್ ಮಾತಿನಲ್ಲಿ ತೂಕ ಇರುತ್ತದೆ. ಏನು ಮಾಡಿದ್ದೇವೆ ಎಂಬುದನ್ನ ಅವರು ಹೇಳಿದ್ದಾರೆ ಎಂದು ಗೃಹ ಸಚಿವರು ಹೇಳಿದರು.
ಮಾನಮರ್ಯಾದೆ ಇದ್ದರೆ ದೇಶದಲ್ಲಿ ಲೂಟಿ ಹೊಡೆದಿರುವುದನ್ನ ಸರ್ಕಾರಕ್ಕೆ ವಾಪಸ್ ಕೊಡಿ ಎಂದು ವಾಗ್ದಾಳಿ ನಡೆಸಿದರು. ಜಿಎಸ್ಟಿ ಹೆಚ್ಚಳ ಖಂಡಿಸಿ ರಮೇಶ್ ಕುಮಾರ್ ಪ್ರತಿಭಟನೆ ನಡೆಸುತ್ತಿರುವುದು ಸರಿಯೇ ಎಂಬ ವಿಚಾರವಾಗಿ, ಬೇರೆ ಬೇರೆ ವಿಚಾರಗಳಿವೆ ಅವುಗಳ ಬಗ್ಗೆಯೂ ಚರ್ಚೆಯಾಗಲಿ ಎಂದರು.
ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ: ಮಗನಿಗೆ ಕ್ಷೇತ್ರ ಬಿಟ್ಟುಕೊಟ್ಟ ಮಾಜಿ ಸಿಎಂ