ETV Bharat / state

ಆನಂದ್ ​ಸಿಂಗ್​ ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಅರ್ಥವಾಗ್ತಿಲ್ಲ: ದಿನೇಶ್​​​ ಗುಂಡೂರಾವ್​​ - dinesh gundurao talk

ಆನಂದ್ ಸಿಂಗ್ ಅವರು ನನಗೆ ಒಳ್ಳೆ ಸ್ನೇಹಿತರು. ಜಿಂದಾಲ್ ವಿಚಾರದಲ್ಲಿ ಆನಂದ್​ ಸಿಂಗ್ ರಾಜೀನಾಮೆ ಕೊಡೋ ಅಗತ್ಯವಿಲ್ಲ. ಆನಂದ್​ ಸಿಂಗ್ ರಾಜೀನಾಮೆಗೆ ಕಾರಣ ಏನು, ಒತ್ತಡ ಏನು ಅಂತ ಗೊತ್ತಿಲ್ಲ. ಅವರ ಬಳಿ ನಾನೇ ಮಾತಾನಾಡ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಆನಂದ್​ಸಿಂಗ್​ ಯಾವ ಕಾರಣಕ್ಕೆ ರಾಜಿನಾಮೆ ಕೊಟ್ಟಿದ್ದಾರೆ ಅರ್ಥವಾಗ್ತಿಲ್ಲ: ದಿನೇಶ್​ ಗುಂಡೂರಾವ್​
author img

By

Published : Jul 1, 2019, 8:32 PM IST

ಬೆಂಗಳೂರು: ಆನಂದ್ ​ಸಿಂಗ್ ಯಾವ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಅನ್ನೋದು ಅರ್ಥವಾಗ್ತಿಲ್ಲ. ಅವರ ಬಳಿ ನಾನೇ ಮಾತಾನಾಡ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಅವರು ನನಗೆ ಒಳ್ಳೆ ಸ್ನೇಹಿತರು. ಜಿಂದಾಲ್ ವಿಚಾರದಲ್ಲಿ ಆನಂದ್ ​ಸಿಂಗ್ ರಾಜೀನಾಮೆ ಕೊಡೋ ಅಗತ್ಯವಿಲ್ಲ. ಈಗಾಗ್ಲೇ ಉಪ ಸಮಿತಿ ಮಾಡಿದ್ದೇವೆ. ಇದು ರಾಜೀನಾಮೆ ಕೊಡೋ ವಿಷಯ ಅಲ್ಲ ಎಂದರು. ಅಲ್ಲದೇ, ಆನಂದ್ ​ಸಿಂಗ್ ರಾಜೀನಾಮೆಗೆ ಕಾರಣ ಏನು, ಒತ್ತಡ ಏನು ಅಂತ ಗೊತ್ತಿಲ್ಲ. ಬಿಜೆಪಿಯವರು ಸರ್ಕಾರವನ್ನ ಅಸ್ಥಿರ ಹಾಗೂ ಗೊಂದಲ ಮಾಡಲು ಮುಂದಾಗಿದ್ದಾರೆ. ಸ್ಥಿರವಾಗಿರುವ ವಾತಾವರಣವನ್ನ ಅಸ್ಥಿರ ಮಾಡಲು ಬಿಜೆಪಿ ನಾಯಕರು ನಿರಂತರ ಪ್ರಯತ್ನ ಮಾಡ್ತಿದ್ದಾರೆ. ಆನಂದ್ ​ಸಿಂಗ್ ಮನವೊಲಿಸಲು ಪ್ರಯತ್ನ ಮಾಡ್ತೀನಿ. ಯಾರೂ ಕೂಡ ರಾಜೀನಾಮೆ ಕೊಡಲ್ಲ. ಸರ್ಕಾರ ತನ್ನ ಅವಧಿಯನ್ನ ಪೂರೈಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೆಲವರನ್ನ ಬಿಜೆಪಿಯವರು ಹೆದರಿಸುವ ಪ್ರಯತ್ನ ಮಾಡ್ತಿದ್ದಾರೆ. ಬೇರೆ ಬೇರೆ ಸಂಸ್ಥೆಗಳನ್ನ ಬಳಸಿಕೊಂಡು ಬ್ಲಾಕ್ ಮೇಲ್ ಮಾಡುವ ಕುತಂತ್ರವನ್ನ ಬಿಜೆಪಿಯವರು ಮಾಡ್ತಿದ್ದಾರೆ. ನಮಗೆ ಬಹುಮತವಿದೆ. ಅಂತಹ ಸಂದರ್ಭ ಬಂದ್ರೆ ನಮಗೂ ಶಕ್ತಿ, ಸಾಮರ್ಥ್ಯವಿದೆ. ಆದ್ರೆ ಅದಕ್ಕೆ ನಾವು ಕೈ ಹಾಕಿಲ್ಲ. ಇಂತಹ ಪ್ರಯತ್ನ ಮಾಡಿದ್ರೆ ತಿರುಗೇಟು ಕೊಡುವ ಅವಕಾಶ ನಮಗೂ ಇದೆ. ಹೀಗೆ ಪ್ರಯತ್ನ ಮುಂದುವರೆಸಿದ್ರೆ ಹೇಗೆ ಉತ್ತರ ಕೊಡಬೇಕೋ ಹಾಗೆ ಉತ್ತರ ಕೊಡ್ತೀವಿ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ರವಾನಿಸಿದರು. ನಮಗೆ ಬಿಜೆಪಿಯವರ ಪ್ರಯತ್ನ ಸ್ಪಷ್ಟವಾಗಿ ಗೊತ್ತಿದೆ. ಇದಕ್ಕೆ ಯಾವ ರೀತಿ ಉತ್ತರ ಕೊಡಬೇಕೋ ಆ ರೀತಿ ಉತ್ತರ ಕೊಡ್ತೀವಿ. ಅವರ ವಿಕೆಟ್ ಬೀಳಿಸುವ ಕೆಪಾಸಿಟಿ ನಮಗೂ ಇದೆ. ಡಿಸಿಎಂ, ಸಿಎಲ್​ಪಿ ನಾಯಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ಒಂದು ವರ್ಷ ಪ್ರಯತ್ನ ಪಟ್ಟು ಏನೂ ಮಾಡೋದಕ್ಕೆ ಆಗಲಿಲ್ಲ. ಈಗಲೂ ಏನೂ ಮಾಡೋದಕ್ಕೆ ಆಗಲ್ಲ. ಹೇಗೆ ಉತ್ತರ ಕೊಡಬೇಕೋ ಹಾಗೆ ಉತ್ತರ ಕೊಡ್ತೀವಿ ಎಂದರು.

Intro:newsBody:ಆನಂದ್ ಸಿಂಗ್ ಯಾವ ಕಾರಣಕ್ಕೆ ರಾಜಿನಾಮೆ ಕೊಟ್ಟಿದ್ದಾರೆ ಅನ್ನೋದು ಅರ್ಥವಾಗ್ತಿಲ್ಲ: ದಿನೇಶ್

ಬೆಂಗಳೂರು: ಆನಂದ್ ಸಿಂಗ್ ಯಾವ ಕಾರಣಕ್ಕೆ ರಾಜಿನಾಮೆ ಕೊಟ್ಟಿದ್ದಾರೆ ಅನ್ನೋದು ಅರ್ಥವಾಗ್ತಿಲ್ಲ. ಆನಂದ್ ಸಿಂಗ್ ಬಳಿ ನಾನೇ ಮಾತಮಾಡ್ತೀನಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ, ಆನಂದ್ ಸಿಂಗ್ ಅವರು ನನಗೆ ಒಳ್ಳೆ ಸ್ನೇಹಿತರು. ಜಿಂದಾಲ್ ವಿಚಾರದಲ್ಲಿ ಆನಂದ್ ಸಿಂಗ್ ರಾಜಿನಾಮೆ ಕೊಡೋ ಅಗತ್ಯವಿಲ್ಲ. ಈಗಾಗ್ಲೆ ಉಪಸಮಿತಿ ಮಾಡಿದ್ದೇವೆ. ಇದು ರಾಜಿನಾಮೆ ಕೊಡೋ ವಿಷಯ ಅಲ್ಲ ಎಂದಿದಗದಾರೆ.
ಆನಂದ್ ಸಿಂಗ್ ರಾಜಿನಾಮೆಗೆ ಯಾವ ಕಾರಣ, ಏನು ಒತ್ತಡ ಅಂತ ಗೊತ್ತಿಲ್ಲ. ಬಿಜೆಪಿಯವರು ಸರ್ಕಾರವನ್ನ ಅಸ್ತಿರ, ಗೊಂದಲ ಮಾಡಲು ಮುಂದಾಗಿದ್ದಾರೆ. ಸ್ಥಿರವಾಗಿರುವ ವಾತಾವರಣವನ್ನ ಅಸ್ಥಿರ ಮಾಡಲು ಬಿಜೆಪಿ ನಾಯಕರು ನಿರಂತರ ಪ್ರಯತ್ನ ಮಾಡ್ತಿದ್ದಾರೆ. ಆನಂದ್ ಸಿಂಗ್ ಮನವೊಲಿಸಲು ಪ್ರಯತ್ನ ಮಾಡ್ತೀನಿ. ಯಾರೂ ಕೂಡ ರಾಜಿನಾಮೆ ಕೊಡಲ್ಲ. ಸರ್ಕಾರ ಅವಧಿಯನ್ನ ಪೂರೈಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೆಲವರನ್ನ ಬಿಜೆಪಿಯವರು ಹೆದರಿಸುವ ಪ್ರಯತ್ನ ಮಾಡ್ತಿದ್ದಾರೆ. ಬೇರೆ ಬೇರೆ ಸಂಸ್ಥೆಗಳನ್ನ ಬಳಸಿಕೊಂಡು ಬ್ಲಾಕ್ ಮೇಲ್ ಮಾಡುವ ಕುತಂತ್ರವನ್ನ ಕೇಂದ್ರ ಬಿಜೆಪಿಯವರು ಮಾಡ್ತಿದ್ದಾರೆ. ನಮಗೆ ಬಹುಮತವಿದೆ. ಅಂತಹ ಸಂದರ್ಭ ಬಂದ್ರೆ ನಮಗೂ ಶಕ್ತಿ, ಸಾಮರ್ಥ್ಯವಿದೆ
(ರಿವರ್ಸ್ ಆಪರೇಷನ್). ಆದ್ರೆ ಅದಕ್ಕೆ ನಾವು ಕೈ ಹಾಕಿಲ್ಲ. ಇಂತಹ ಪ್ರಯತ್ನ ಮಾಡಿದ್ರೆ ತಿರುಗೇಟು ಕೊಡುವ ಅವಕಾಶ ನಮಗೂ ಇದೆ. ಹೀಗೆ ಪ್ರಯತ್ನ ಮುಂದುವರೆಸಿದ್ರೆ ಹೆಂಗೆ ಉತ್ತರ ಕೊಡಬೇಕೋ ಹಾಗೆ ಉತ್ತರ ಕೊಡ್ತೀವಿ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ರವಾನಿಸಿದರು.
ನಮಗೆ ಬಿಜೆಪಿಯವರ ಪ್ರಯತ್ನ ಸ್ಪಷ್ಟವಾಗಿ ಗೊತ್ತಿದೆ. ಇದಕ್ಕೆ ಯಾವ ರೀತಿ ಉತ್ತರ ಕೊಡಬೇಕೋ ಆ ರೀತಿ ಉತ್ತರ ಕೊಡ್ತೀವಿ. ಅವರ ವಿಕೆಟ್ ಬೀಳಿಸುವ ಕೆಪಾಸಿಟಿ ನಮಗೂ ಇದೆ. ಡಿಸಿಎಂ, ಸಿಎಲ್ ಪಿ ನಾಯಕರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ಒಂದು ವರ್ಷ ಪ್ರಯತ್ನ ಪಟ್ಟು ಏನೂ ಮಾಡೋದಕ್ಕೆ ಆಗಲಿಲ್ಲ. ಈಗಲೂ ಏನೂ ಮಾಡೋದಕ್ಕೆ ಆಗಲ್ಲ. ಹೇಗೆ ಉತ್ತರ ಕೊಡಬೇಕೋ ಹಾಗೆ ಉತ್ತರ ಕೊಡ್ತೀವಿ ಎಂದರು.Conclusion:news

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.